ನವದೆಹಲಿ: ಭಾರತ ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಉಂಟಾಗಲಿದೆ. ಇದರಿಂದ ಕೈಗಾರಿಕೆ ಸೇರಿದಂತೆ ಇತರೆ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೊಂದರೆ ಉಂಟಾಗಲಿದೆ ಎನ್ನಲಾಗುತ್ತಿದೆ.
ಭಾರತದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಉತ್ಪಾದನೆಯಾಗುವುದು ಕಲ್ಲಿದ್ದಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ (power plants) ಮೂಲಕ. ಆದರೆ ಸದ್ಯ ಕೆಲವು ದಿನಗಳ ಮಟ್ಟಿಗೆ ಮಾತ್ರ ಸ್ಥಾವರಗಳಲ್ಲಿ ಸ್ಟಾಕ್ ಇದ್ದು, ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರೆದ್ರೆ, ಪರಿಸ್ಥಿತಿ ಕೈಮೀರಲಿದೆ ಎನ್ನಲಾಗುತ್ತಿದೆ.
ಕರ್ನಾಟಕದ ರಾಯಚೂರು ವಿದ್ಯುತ್ ಸ್ಥಾವರದಲ್ಲಿ (Raichur power plant in karanataka) ಉಂಟಾಗಿರುವ ಕಲ್ಲಿದ್ದಲಿನ ಪೂರೈಕೆಯಿಂದ ಮಳೆಗಾಲದಲ್ಲೂ ಕೂಡ ವಿದ್ಯುತ್ ಕಡಿತದ ಅನುಭವನ್ನು ರಾಜ್ಯದ ನಾನಾ ಭಾಗಗಳಲ್ಲಿ ಜನತೆ ಅನುಭವಿಸುತ್ತಿದ್ದಾರೆ. ಭಾರತವು ತನ್ನ ವಿದ್ಯುತ್ ಅಗತ್ಯಗಳಿಗಾಗಿ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಆದ್ದರಿಂದ ಭಾರತದ ವಿದ್ಯುತ್ ಪೂರೈಕೆಯ ಹಿಂದೆ ಕಲ್ಲಿದ್ದಲು ಪ್ರಮುಖ ಇಂಧನವಾಗಿ ಗುರುತಿಸಿಕೊಂಡಿದೆ.
ವಿದ್ಯುತ್ ಉತ್ಪಾದನೆಗೆ ಬೇಕಾಗಿರುವ ಕಲ್ಲಿದ್ದಲನ್ನು ಭಾರತ ಮುಖ್ಯವಾಗಿ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ ಕೊರೊನಾ ಕಾಣಿಸಿಕೊಳ್ಳುವ ಮೊದಲು, 2019 ರ ಆಗಸ್ಟ್ ತಿಂಗಳಿನಲ್ಲಿ ವಿದ್ಯುತ್ ಬಳಕೆ ಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: BYS PA IT RAID : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ರೇಡ್
ವಿದ್ಯುತ್ ಕೊರತೆಯು ಚಿಲ್ಲರೆ ಹಣದುಬ್ಬರ, ಆಹಾರದ ಮೇಲಿನ ತೈಲದ ಬೆಲೆಗಳಿಗೆ ಕಾರಣವಾಗಬಹುದು. ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಕಲ್ಲಿದ್ದಲಿನ ಕೊರತೆಯನ್ನು ನೀಗಿಸಿಕೊಳ್ಳದೇ ಇದ್ದರೆ ಮುಂದೆ ದೊಡ್ಡ ಪ್ರಮಾಣದಲ್ಲಿ ತೊಂದರೆ ಉಂಟಾಗಲಿದೆ ಎನ್ನಲಾಗುತ್ತಿದೆ.
(Power shock to Karnataka: Power shortage due to shortage of coal)