ಭಾನುವಾರ, ಏಪ್ರಿಲ್ 27, 2025
Homekarnatakaಪುನೀತ್‌ ವಿಧಿವಶ : ನಾಳೆ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

ಪುನೀತ್‌ ವಿಧಿವಶ : ನಾಳೆ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

- Advertisement -

ಬೆಂಗಳೂರು : ಕನ್ನಡ ಚಿತ್ರರಂಗದ ಧ್ರುವ ತಾರೆ ಪುನೀತ್‌ ರಾಜ್‌ ಕುಮಾರ್‌ ಇಂದು ಹೃದಯಾಘಾತದಿಂದ ವಿಧಿವಶರಾದ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಖಾಸಗಿ ಶಾಲೆಳ ಒಕ್ಕೂಟ ರೂಪ್ಸಾ ಪ್ರಕಟಣೆಯನ್ನು ಹೊರಡಿಸಿದೆ.

ಪುನೀತ್‌ ರಾಜ್‌ ಕುಮಾರ್‌ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಶೋಕಾಚರಣೆಯ ನಿಮಿತ್ತ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಪ್ರಕಟಣೆಯನ್ನು ಹೊರಡಿಸಿದೆ. ಸರ್ಕಾರಿ ಶಾಲೆಗಳಿಗೆ ರಜೆ ನೀಡುವ ವಿಷಯದ ನಿರ್ದಾರದ ಬಗ್ಗೆ ಚರ್ಚೆ ನಡೆಯುತ್ತಿದ್ದು ಶೀಘ್ರವೇ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: Punit rajkumar Died : ಬಾರದ ಲೋಕಕ್ಕೆ ಪಯಣಿಸಿದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌

ನಾಳೆ ನಡೆಯ ಬೇಕಿದ್ದ ಎಂಬಿಎ ಪರೀಕ್ಷೆಯನ್ನು ಸಿಟಿ ವಿಶ್ವವಿದ್ಯಾಲಯ ಮುಂದೂಡಿದೆ. ಈ ಬಗ್ಗೆ  ಪ್ರಕಟಣೆ ಹೊರಡಿಸಿದ ಸಿಟಿ ವಿಶ್ವ ವಿದ್ಯಾಲಯ ಪುನೀತ್‌ ರಾಜ್‌ ಕುಮಾರ್‌ ಹೃದಯಾಘಾತದಿಂದ ಮೃತ ಪಟ್ಟಿರುವುದರಿಂದ ನಾಳೆ ನಡೆಯ ಬೇಕಿದ್ದ ಎಂಬಿಎ ಪರೀಕ್ಷೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಡಾ. ರಾಜ್‌ ಕುಮಾರ್‌ ಮುದ್ದಿನ ಮಗ ಪುನೀತ್‌ ರಾಜ್‌ ಕುಮಾರ್‌

(Puneet Raj kumar Died : Leave declared for private schools across the state tomorrow)

RELATED ARTICLES

Most Popular