ಮೈಸೂರು : ನಗರದಲ್ಲಿರುವ ದೇವಾಲಯಗಳ ತೆರವಿಗೆ ಸಂಸದ ಪ್ರತಾಪ್‍ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನ ತ್ಯಾಗರಾಜ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಸ್ಥಾನಕ್ಕೆ ಸಂಸದ ಪ್ರತಾಪ್‍ಸಿಂಹ ಹಾಗೂ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮೇಯರ್ ಸುನಂದಾ ಪಾನೇತ್ರ ಮತ್ತಿತರರು ಇಂದು ಬೆಳಗ್ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್‍ಸಿಂಹ, ಇದೇ ಸೆ.22ರಂದು 101 ಗಣಪತಿ ದೇವಾಲಯವನ್ನು ತೆರವುಗೊಳಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ, ಈ ದೇವಾಲಯದಿಂದ ಸಾರ್ವಜನಿಕರಿಗೆ ತೊಂದರೆ ಇಲ್ಲ. ಅಲ್ಲದೆ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿಲ್ಲ. ಹಾಗಿದ್ದರೂ ಈ ದೇವಾಲಯವನ್ನು ಒಡೆಯಲು ಜಿಲ್ಲಾಡಳಿತ ನಿರ್ಧರಿಸಿರುವುದು ಏಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗಣೇಶೋತ್ಸವ ನಿಯಮ ಸಡಿಲಿಕೆ : ಸಿಎಂ ಬೊಮ್ಮಾಯಿ ಸೂಚನೆ
ನಗರದ ಹಲವು ರಸ್ತೆಗಳ ಮಧ್ಯದಲ್ಲಿ ಮಸೀದಿ, ಚರ್ಚ್‍ಗಳಿವೆ. ಅವುಗಳನ್ನು ತೆರವುಗೊಳಿಸದೆ ದಿಢೀರನೆ ದೇವಾಲಯ ತೆರವಿಗೆ ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಹಲವು ಹಿಂದೂ ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಪ್ರಪಂಚವನ್ನು ಕಾಡಲಿರುವ ಆಪತ್ತುಗಳು : ಕೋಡಿಮಠದ ಶ್ರೀಗಳಿಂದ ಸ್ಪೋಟಕ ಭವಿಷ್ಯ
(Clearance of ancient temples: MP Pratapsimha's outrage)