ಮಂಗಳವಾರ, ಏಪ್ರಿಲ್ 29, 2025
HomeCoastal Newsಸುರತ್ಕಲ್ ಟೋಲ್ ರದ್ದು, ಹೆಜಮಾಡಿಯಲ್ಲಿ ಟೋಲ್ ದರ ಏರಿಕೆ ಇಲ್ಲ : ಹೋರಾಟಗಾರರ ಸಂಭ್ರಮಾಚರಣೆ

ಸುರತ್ಕಲ್ ಟೋಲ್ ರದ್ದು, ಹೆಜಮಾಡಿಯಲ್ಲಿ ಟೋಲ್ ದರ ಏರಿಕೆ ಇಲ್ಲ : ಹೋರಾಟಗಾರರ ಸಂಭ್ರಮಾಚರಣೆ

- Advertisement -

ಮಂಗಳೂರು : Surathkal Toll Gate collections stop : ಕೇಂದ್ರ ಸರಕಾರ ಕೊನೆಗೂ ಕರಾವಳಿಗರ ಹೋರಾಟಕ್ಕೆ ಮಣಿದಿದೆ. ಕೇರಳ – ಕರ್ನಾಟಕ – ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸುರತ್ಕಲ್ ಟೋಲ್ ನಲ್ಲಿ ಟೋಲ್ ಸಂಗ್ರಹವನ್ನು ನಿನ್ನೆ ರಾತ್ರಿಯಿಂದಲೇ ಸ್ಥಗಿತಗೊಳಿಸಿದೆ. ಆದರೆ ಸುರತ್ಕಲ್ ಟೋಲ್ ನಲ್ಲಿ ಟೋಲ್ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಇದರಿಂದಾಗಿ ವಾಹನ ಸವಾರರು ನಿಟ್ಟುಸಿರುವ ಬಿಟ್ಟಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಕೂಡ ಅನಧಿಕೃತ ಸುರತ್ಕಲ್ ಟೋಲ್ ತೆರವು ಮಾಡುವಂತೆ ಕರಾವಳಿಗರು ಆಗ್ರಹಿಸುತ್ತಲೇ ಇದ್ದಾರೆ. ಇದೀಗ ಅಹೋರಾತ್ರಿ ಧರಣಿ, ಹೋರಾಟ ಕೊನೆಗೂ ಫಲಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಿನ್ನೆ ರಾತ್ರಿಯಿಂದಲೇ ಸುರತ್ಕಲ್ ಟೋಲ್ ನಲ್ಲಿ ಟೋಲ್ ಸಂಗ್ರಹವನ್ನು ನಿಲ್ಲಿಸಲಾಗಿದೆ. ಟೋಲ್ ಸಂಗ್ರಹ ಸ್ಥಗಿತವಾದ ಬೆನ್ನಲ್ಲೇ ಟೋಲ್ ವಿರೋಧಿ ಹೋರಾಟಗಾರರು ಸಂಭ್ರಮಾಚರಣೆಯನ್ನು ನಡೆಸಿದ್ದಾರೆ.

ಇನ್ನು ಸುರತ್ಕಲ್ ಟೋಲ್ ಸಂಗ್ರಹ ಸ್ಥಗಿತವಾದ ಬೆನ್ನಲ್ಲೇ ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಅಥವಾ ತಲಪಾಡಿಯ ಜೊತೆಗೆ ವಿಲೀನಗೊಳಿಸುವ ಕುರಿತು ಸರಕಾರ ಇದುವರೆಗೂ ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ. ಹೆಜಮಾಡಿ ಟೋಲ್ ಜೊತೆಗೆ ವಿಲೀನಗೊಳಿಸುವ ಸರಕಾರದ ನಿರ್ಧಾರಕ್ಕೆ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಸುರತ್ಕಲ್ ಟೋಲ್ ಸ್ಥಗಿತವಾಗಿದ್ದರೂ ಕೂಡ ಹೆಜಮಾಡಿ ಟೋಲ್ ನಲ್ಲಿ ಟೋಲ್ ಶುಲ್ಕದಲ್ಲಿ ಯಾವುದೇ ರೀತಿಯಲ್ಲಿಯೂ ಹೆಚ್ಚಳ ಮಾಡಿಲ್ಲ. ಕರಾವಳಿಗರ ಆಕ್ರೋಶದ ಹಿನ್ನೆಲೆಯಲ್ಲಿ ಸರಕಾರ ಸದ್ಯಕ್ಕೆ ಯಾವುದೇ ನಿರ್ಧಾರವನ್ನೂ ಕೈಗೊಂಡಂತೆ ಕಾಣಿಸುತ್ತಿಲ್ಲ.

ಸುರತ್ಕಲ್ ಹಾಗೂ ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಕ್ಕೂ ಮೊದಲೇ ಸುರತ್ಕಲ್ ಹಾಗೂ ಬಂಟ್ವಾಳ ನಡುವೆ ಹೆದ್ದಾರಿ ಕಾಮಗಾರಿ ನಡೆದಿತ್ತು. ಈ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭ್ರಮರಕೂಡ್ಲು ಹಾಗೂ ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. ತದನಂತರದಲ್ಲಿ ಸುರತ್ಕಲ್ ಗೆ ಅನತಿ ದೂರದಲ್ಲಿರುವ ಹೆಜಮಾಡಿಯಲ್ಲಿ ನವಯುಗ ಕಂಪೆನಿ ಟೋಲ್ ಸಂಗ್ರಹ ಆರಂಭಿಸಿದೆ. ಇದರಿಂದಾಗಿ ಕುಂದಾಪುರದಿಂದ ಮಂಗಳೂರು ನಡುವೆ ಸಂಚರಿಸುವವರು ಗುಂಡ್ಮಿ, ಸುರತ್ಕಲ್ ಹಾಗೂ ಹೆಜಮಾಡಿಯಲ್ಲಿ ಟೋಲ್ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.

ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ನಿಯಮದ ಪ್ರಕಾರ ಸುರತ್ಕಲ್ ಟೋಲ್ ಅನಧಿಕೃತ ಅನ್ನೋದನ್ನು ಕೇಂದ್ರ ಸರಕಾರವೇ ಒಪ್ಪಿಕೊಂಡಿತ್ತು. ಆದರೆ ಟೋಲ್ ತೆರವಿಗೆ ಮುಂದಾಗದ ಹಿನ್ನೆಲೆಯಲ್ಲಿ ಹೋರಾಟಗಾರ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದಲೂ ಸುರತ್ಕಲ್ ಟೋಲ್ ಬಳಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲಾಗಿತ್ತು. ಪಕ್ಷ ಬೇಧ ಮರೆತು ಕರಾವಳಿ ಭಾಗದ ಜನರು ಹೋರಾಟಕ್ಕೆ ಕೈ ಜೋಡಿಸಿದ್ದರು. ಕೊನೆಗೂ ಕೇಂದ್ರ ಸರಕಾರ ಕರಾವಳಿಗರ ಒತ್ತಡಕ್ಕೆ ಮಣಿದಿದೆ. ಆದರೆ ಸುರತ್ಕಲ್ ಟೋಲ್ ತೆರವಿನ ನೆಪದಲ್ಲಿ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹಕ್ಕೆ ಬಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸರಕಾರ ಹೆಚ್ಚುವರಿ ಸುಂಕ ವಸೂಲಾತಿಗೆ ಮುಂದಾದ್ರೆ ಮತ್ತೆ ಜನರು ಬೀದಿಗೆ ಇಳಿಯುವ ಸಾಧ್ಯತೆಯಿದೆ.

ಇದನ್ನೂ ಓದಿ : ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಬಸ್ ಚಾಲಕನಿಂದ ಅತ್ಯಾಚಾರ

ಇದನ್ನೂ ಓದಿ : ಮರದಿಂದ ಬಿದ್ದು ಕಾಲು ಮುರಿದುಕೊಂಡ ಮಹಿಳೆ : ಶಾಸಕರ ವಿರುದ್ದ ದೂರು ದಾಖಲು

Surathkal Toll Gate collections stop Normal Rates in Hejamady Toll Gate

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular