ಸೋಮವಾರ, ಏಪ್ರಿಲ್ 28, 2025
HomekarnatakaTipu Sultan Syllabus : ಹಿಜಾಬ್ ಬಳಿಕ ಪಠ್ಯ ಫೈಟ್ ಗೆ ವೇದಿಕೆ : ಟಿಪ್ಪು...

Tipu Sultan Syllabus : ಹಿಜಾಬ್ ಬಳಿಕ ಪಠ್ಯ ಫೈಟ್ ಗೆ ವೇದಿಕೆ : ಟಿಪ್ಪು ಸಾಹಸ ಕೈಬಿಡಲು ಸರ್ಕಾರದ ನಿರ್ಧಾರ

- Advertisement -

ಬೆಂಗಳೂರು : ಶೈಕ್ಷಣಿಕ ವರ್ಷಾರಂಭಕ್ಕೂ ಮುನ್ನವೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ನಡೆದಿದ್ದು ಈ ಪಠ್ಯಪುಸ್ತಕ ಪರಿಷ್ಕರಣೆ ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆಯುವ ಲಕ್ಷಣವಿದೆ. ಈಗಾಗಲೇ ಪಠ್ಯದಲ್ಲಿದ್ದ ಟಿಪ್ಪು ಪಾಠವನ್ನು (Tipu Sultan Syllabus) ಕೈಬಿಡಲಾಗಿದೆ ಎನ್ನಲಾಗುತ್ತಿದ್ದು, ಒಂದೊಮ್ಮೆ ಪಠ್ಯಪುಸ್ತಕ ದಲ್ಲಿ ಟಿಪ್ಪು ಪಾಠವನ್ನು ಕಡಿಮೆ ಗೊಳಿಸಿದಲ್ಲಿ ಈ ವಿಚಾರ ಕಾಂಗ್ರೆಸ್ ಹೋರಾಟಕ್ಕೆ ಅವಕಾಶ ಕಲ್ಪಿಸಲಿದ್ದು, ಹಿಜಾಬ್ ಬಳಿಕ ಮತ್ತೆ ಶಾಲಾ ಕಾಲೇಜುಗಳು ಟಿಪ್ಪು ಹೆಸರಿನಲ್ಲಿ ಎಡ ಮತ್ತು ಬಲ ಪಂಥೀಯ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪರಿಷ್ಕರಣೆಗೊಂಡಿದ್ದ ಪಠ್ಯ ಪುಸ್ತಕವನ್ನು ಮತ್ತೆ ಪರಿಷ್ಕರಣೆಗೆ ಒಳಪಡಿಸಲಾಗುತ್ತಿದೆ. ಇದಕ್ಕೆ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡಲಾಗಿದೆ. ಹೀಗಾಗಿ ಪಠ್ಯ ಮತ್ತು ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ದಲ್ಲಿ ಒಂದಿಷ್ಟು ಹೊಸ ಬದಲಾವಣೆಗಳ ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿದ ಚಕ್ರತೀರ್ಥ, ಹೊಸ ಪಠ್ಯಗಳಲ್ಲಿ ಇಲ್ಲ ಟಿಪ್ಪು ವೈಭವಿಕರಣ ಇಲ್ಲ.ಪರಿಷ್ಕೃತ ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ವೈಭವಿಕರಣಕ್ಕೆ ಕತ್ತರಿ ಹಾಕಲಾಗುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಇಟ್ಟಿದ್ದು ಟಿಪ್ಪು ಎನ್ನುವಂತಹ ವಿಚಾರಗಳಿಗೆ ಸಂಪೂರ್ಣ ಕತ್ತರಿ ಪ್ರಯೋಗಿಸಲಾಗಿದೆ.

ಟಿಪ್ಪು ಸುಲ್ತಾನ (Tipu Sultan ) ಮಾತ್ರವಲ್ಲ ಶಿವಾಜಿ ವೈಭವಕ್ಕೂ ಕತ್ತರಿ ಬೀಳಲಿದ್ದು, ಯಾವುದೆ ವ್ಯಕ್ತಿ ಯ ವೈಭವಿಕರಣ ಬೇಡ ಮತ್ತು ಉತ್ಪ್ರೇಕ್ಷೆ ಬೇಡ ಎಂಬ ಆಧಾರದಲ್ಲಿ ಹೀಗೆ ಕತ್ತರಿ ಪ್ರಯೋಗವಾಗಿದೆ. ಟಿಪ್ಪುವಿನ (Tipu Sultan) ವಿಚಾರವಾಗಿ ಸತ್ಯಕ್ಕೆ ದೂರವಾದ ಅಂಶಗಳನ್ನ ತೆಗೆದು ಹಾಕಲಾಗಿದೆ. ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಇದ್ದ ಇತಿಹಾಸಕಾರರ ವೈಯುಕ್ತಿಕ ಅಭಿಪ್ರಾಯ ತೆಗೆಯಲಾಗಿದೆ. ಕೇವಲ ಇತಿಹಾಸವನ್ನಷ್ಟೇ ಪಠ್ಯ ಪುಸ್ತಕಗಳಲ್ಲಿ ನೀಡಲಾಗಿದೆ. ಉತ್ತರ ಭಾರತದ ರಾಜರುಗಳ ಬಗ್ಗೆ ಹೊಸ ಪಠ್ಯಗಳನ್ನು ಸೇರಿಸಲಾಗಿದೆ. ಕಾಶ್ಮೀರದಲ್ಲಿ ಕಾರ್ಕೋಟ ರಾಜವಂಶದ ಬಗ್ಗೆ ಪಠ್ಯವಿದೆ. ಕಾಶ್ಮೀರದಲ್ಲಿ 36 ವರ್ಷ ಆಳ್ವಿಕೆ ಮಾಡಿದಂತಹ ಲಲಿತಾಧಿತ್ಯ ರಾಜನ ಬಗ್ಗೆ ಪಠ್ಯ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈಶಾನ್ಯ ಭಾರತದಲ್ಲಿ ಆಳ್ವಿಕೆ ನಡೆಸಿದ ಅಹೋಮ್ ರಾಜ್ಯವಂಶದ ಬಗ್ಗೆ ಮಾಹಿತಿ ನೀಡಲಾಗಿದೆ.ದತ್ತ ಪೀಠಕ್ಕೆ ಸಂಬಂದಿಸಿದ ಯಾವುದೇ ಹೊಸ ಪಾಠಗಳನ್ನು ನೀಡಲಾಗಿಲ್ಲ
ದತ್ತಪೀಠಕ್ಕೆ ಸಂಬಂಧಿಸಿದಂತೆ ಯಾವುದೇ ದಾರ್ಮಿಕ ವಿಷಯ ಉಲ್ಲೇಖ ಮಾಡಿಲ್ಲ ರಾಜರ ಕಾಲದ ಹಾಗೂಸ್ವಾತಂತ್ಯ ಹೋರಾಟಗಾರ ರ ಇತಿಹಾಸ ಹೊರತು ಎಮರ್ಜೆನ್ಸಿ ಬಗ್ಗೆ ಯಾವುದೇ ಉಲ್ಲೇಖವಿರುವ ಪಠ್ಯಗಲಿಲ್ಲ ಎಂದಿದ್ದಾರೆ. ಮಕ್ಕಳಿಗೆ ಪಾಠದ ಹೊರೆ ಕಮ್ಮಿ ಮಾಡಬೇಕು ಅನ್ನುವ ಕಾರಣಕ್ಕೆ ಪ್ರತಿ ತರಗತಿಯಲ್ಲಿ ನಾಲ್ಕೈದು ಪಾಠ ಕಡಿಮೆ ಮಾಡಲಾಗಿದೆ ಆದ್ರೆ ಕಲಿಕೆಗೆ ಯಾವುದೇ ತೊಂದರೆ ಇಲ್ಲ ಬರಗೂರು ರಾಮಚಂದ್ರಪ್ಪ ಮಾರ್ಗದಲ್ಲಿ ಪರಿಷ್ಕರಣೆಯಲ್ಲಿ ತರಗತಿಯಲ್ಲಿ ಬಾರಿ ಬದಲಾವಣೆ ಮಕ್ಕಳಿಗೆ ಗೊಂದಲ ಮಾಡಿದ್ದರು. ಆ ಗೊಂದಲಗಳನ್ನು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸರಿ ಪಡಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : Harsha Murder : ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಪ್ರಕರಣ : NIA ತನಿಖೆ

ಇದನ್ನೂ ಓದಿ : ಹಿಂದೂಯೇತರರಿಗೆ ವ್ಯಾಪಾರ ಅವಕಾಶ ಬೇಡ : ಧಾರ್ಮಿಕ ದತ್ತಿ ಇಲಾಖೆ ಮೊರೆ ಹೋದ ಸಂಘಟನೆಗಳು

( State government cut for text Tipu Sultan Syllabus After Hijab Controversy)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular