Tirupati Laddu Controversy : ತಿರುಪತಿ ತಿರುಮಲ ದೇವಸ್ಥಾನದಿಂದ ಭಕ್ತರಿಗೆ ಪೂರೈಕೆ ಮಾಡುತ್ತಿರುವ ಲಡ್ಡಿಗೆ ಕಳಪೆ ಗುಣಮಟ್ಟದ ವಸ್ತುಗಳ ಜೊತೆಗೆ ಪ್ರಾಣಿಗಳ ಕೊಬ್ಬನ್ನು ಬೆರಕೆ ಮಾಡಲಾಗುತ್ತದೆ ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಖುದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮಾಹಿತಿಯನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದು, ಪ್ರಯೋಗಾಲಯದ ವರದಿ ಇದೀಗ ವೈರಲ್ ಆಗಿದೆ.

ಭಕ್ತರ ಪಾಲಿನ ಆರಾಧ್ಯ ದೈವ ತಿರುಪತಿ ತಿರುಮಲ ದೇವಸ್ಥಾನ ಇದೀಗ ವಿವಾದದ ಕೇಂದ್ರ. ತಿರುಪತಿ ದೇವಸ್ಥಾನದಿಂದ ಪೂರೈಕೆ ಮಾಡಲಾಗುತ್ತಿರುವ ಪವಿತ್ರ ಲಡ್ಡಿನ ಬಗ್ಗೆ ವಿವಾದ ಹುಟ್ಟಿಕೊಂಡಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂತಹದ್ದೊಂದು ವಿವಾದವನ್ನು ಬಯಲಿಗೆಳೆದಿದ್ದಾರೆ. ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಗೆ ಕಳಪೆ ಗುಣಮಟ್ಟದ ಪದಾರ್ಥಗಳ ಜೊತೆಗೆ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಟಿಡಿಪಿ ಪಕ್ಷದ ವಕ್ತಾರ ವೆಂಕಟ ರಮಣ ರೆಡ್ಡಿ ಅವರು ಗುಜರಾತ್ ಮೂಲದ ಎನ್‌ಡಿಡಿಬಿ ಸಿಎಎಲ್‌ಎಫ್ ಲಿಮಿಟೆಡ್‌ನ ಲ್ಯಾಬ್ ನೀಡಿದ್ದ ವರದಿಯನ್ನು ಉಲ್ಲೇಖಿಸಿದ್ದಾರೆ. ಈ ಲಡ್ಡಿಗೆ ಬಳಸುತ್ತಿರುವ ತುಪ್ಪದ ಮಾದರಿಗಳಲ್ಲಿ ಗೋಮಾಂಸದ ಕೊಬ್ಬು, ಹಂದಿ ಕೊಬ್ಬು ಹಾಗೂ ಮೀನನ ಎಣ್ಣೆಯನ್ನು ಇರುವುದನ್ನು ದೃಢಪಡಿಸಿದೆ ಎಂದು ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ : ಉಡುಪಿ ಜಿಲ್ಲೆಯಲ್ಲಿ ಕಾಲರಾ ಪತ್ತೆ : 11 ಮಂದಿಗೆ ದೃಢ, ಜಿಲ್ಲೆಯಲ್ಲಿ ಹೈಅಲರ್ಟ್
ಲಡ್ಡಿನ ಮಾದರಿಗಳನ್ನು ಜುಲೈ 9, 2024 ರಂದು CALF (ಸೆಂಟರ್ ಫಾರ್ ಅನಾಲಿಸಿಸ್ ಅಂಡ್ ಲರ್ನಿಂಗ್ ಇನ್ ಜಾನುವಾರು ಮತ್ತು ಆಹಾರ) ಲ್ಯಾಬ್ ಸ್ವೀಕರಿಸಿದೆ. ಅಲ್ಲದೇ 2024ರ ಜುಲೈ 16, ರಂದು ಲ್ಯಾಬ್ ತನ್ನ ಅಂತಿಮ ವರದಿಯನ್ನು ಪ್ರಕಟಿಸಿದೆ. CALF ಗುಜರಾತ್‌ನ ಆನಂದ್‌ನಲ್ಲಿರುವ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಾಧುನಿಕ ಲ್ಯಾಬ್ ಇದಾಗಿದೆ. ಆದರೆ ತಿರುಪತಿ ಲಡ್ಡಿನ ವಿವಾದಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಈ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಸರಕಾರ ತಿರುಮಲ ತಿರುಪತಿ ದೇವಸ್ಥಾನದ ಲಡ್ಡಿನ ಉತ್ಪಾದನೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥ ಹಾಗೂ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂದು ಹೇಳಿದ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿತ್ತು.
ಇದನ್ನೂ ಓದಿ : 1.78 ಲಕ್ಷ ಮಹಿಳೆಯರಿಗೆ ಇನ್ಮುಂದೆ ಸಿಗಲ್ಲ ಗೃಹಲಕ್ಷ್ಮೀ ಹಣ : ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ?
Tirupati Laddu Controversy Beef fat used in laddu lab report confirmed by Telugu Desam Party