Udupi Crime Report : ಪಡುಬಿದ್ರಿ : ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು, ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಇಳಿದ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ತೆಂಕ ಎರ್ಮಾಳು ಎಂಬಲ್ಲಿ ನಡೆದಿದೆ. ಬಸ್ ಚಾಲಕ ಹಾಗೂ ಗಾಯಗೊಂಡ ಪ್ರಮಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಡುಪಿ ಜಿಲ್ಲೆಯ ತೆಂಕ ಎರ್ಮಾಳು ಬಳಿಯಿಂದ ಉಡುಪಿಯ ಕಡೆಗೆ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ಬಸ್ಸಿನ ಚಾಲಕ ಶಂಭು ಎಂಬವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬಸ್ ನಿಲ್ಲಿಸಲು ಯತ್ನಿಸಿದ್ದರೂ ಕೂಡ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಇಳಿಜಾರಿನ ಜಮೀನಿಗೆ ನುಗ್ಗಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಗಾಯವಾಗಿದೆ.
ಬಸ್ ಚಾಲಕ ಹಾಗೂ ಗಾಯಗೊಂಡಿರುವ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Udupi Crime Report : ಕೆನರಾ ಬ್ಯಾಂಕ್ ಎಟಿಎಂ ಕಳವು ವೇಳೆ ಮೊಳಗಿದ ಸೈರನ್ ..!
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದಲ್ಲಿ ಕೆನರಾ ಬ್ಯಾಂಕ್‌ಗೆ ಸೇರಿದ ಎಟಿಎಂಗೆ ದುಷ್ಕರ್ಮಿಗಳು ನುಗ್ಗಿದ್ದು, ಎಟಿಎಂ ಕಳವಿಗೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ. ಆದರೆ ಈ ವೇಳೆಯಲ್ಲಿ ಎಟಿಎಂ ಸೈರನ್ ಮೊಳಗಿದ್ದರಿಂದಾಗಿ ಕಳ್ಳರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
Also Read : ಮಹಿಳೆಯರಿಗೆ ಗುಡ್‌ನ್ಯೂಸ್ : ಕೇಂದ್ರ ಸರಕಾರ ನೀಡಲಿದೆ 6 ಯೋಜನೆಯಡಿ ಸಾಲ
ರಾತ್ರಿ ಮೂವರು ಮುಸುಕುಧಾರಿಗಳು ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಒಮ್ಮೆಲೆ ಸೈರನ್ ಮೊಳಗಿದ್ದರಿಂದಾಗಿ ಮೂವರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
Udupi Crime Report bus Driver Sudden Chest pain in Driving