Udupi – Mangalore Metro : ಮಂಗಳೂರು / ಉಡುಪಿ : ಕರಾವಳಿ ತನ್ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ, ಧಾರ್ಮಿಕತೆಯಿಂದಲೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇಂತಹ ಕರಾವಳಿಯ ಮೆರುಗನ್ನು ಹೆಚ್ಚಿಸಲು ಸದ್ಯದಲ್ಲಿಯೇ ಉಡುಪಿ ಹಾಗೂ ಮಂಗಳೂರು ನಡುವೆ ಮೆಟ್ರೋ ರೈಲು ಸಂಚಾರ ನಡೆಸಲಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ 1997ರಲ್ಲಿ ವಿಭಜನೆ ಆಗಿತ್ತು. ಆದರೆ ಎರಡೂ ಜಿಲ್ಲೆಗಳಾಗಿದ್ದರೂ ಕೂಡ ಉಡುಪಿ ಹಾಗೂ ಮಂಗಳೂರಿನ ನಗರಗಳು ಇಂದಿಗೂ ಅವಳಿ ನಗರಗಳಂತೆಯೇ ಇವೆ. ವಾಣಿಜ್ಯ, ವ್ಯಾಪಾರ, ಉದ್ಯೋಗ ಸೇರಿದಂತೆ ನಾನಾ ಕಾರ್ಯಗಳಿಗಾಗಿ ಜನರು ನಿತ್ಯವೂ ಓಡಾಡುತ್ತಲೇ ಇದ್ದಾರೆ.
ನೂರಾರು ಖಾಸಗಿ ಬಸ್ ಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಕೊಂಡಿಯಂತಿವೆ. ಆದರೂ ಕೂಡ ಬೆಳೆಯುತ್ತಿರುವ ಕಡಲ ನಗರಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಂತೆಯೇ ಟ್ರಾಫಿಕ್ ಜಾಮ್ ಮಾಮೂಲಿ ಅನಿಸುತ್ತಿದೆ. 60 ಕಿ.ಮೀ ದೂರದಲ್ಲಿರುವ ಈ ನಗರಗಳನ್ನು ಇನ್ನಷ್ಟು ಹತ್ತಿರಗೊಳಿಸಲು ಯೋಜನೆಯೊಂದು ಸಿದ್ದವಾಗುತ್ತಿದೆ.
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯನ್ನು ದೂರ ಮಾಡಲು ಜಾರಿಗೆ ತಂದ ಮೆಟ್ರೋ ಯೋಜನೆ ಈಗಾಗಲೇ ಸಕ್ಸಸ್ ಆಗಿದೆ. ಬೆಂಗಳೂರಿನ ಮೂಲೆ ಮೂಲೆಗೂ ಮೆಟ್ರೋ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಇದೀಗ ಮಹಾನಗರಗಳ ಕಡೆಗೂ ಮೆಟ್ರೋ ಮುಖ ಮಾಡುತ್ತಿದೆ.
ಕರಾವಳಿ ಭಾಗದ ಜನರ ಹಲವು ವರ್ಷದ ಬೇಡಿಕೆ ಆಗಿರುವ ಮೆಟ್ರೋ ಯೋಜನೆಗೆ ಈಗಾಗಲೇ ಸರಕಾರ ಹಸಿರು ನಿಶಾನೆ ತೋರಿಸಿದ್ದು, ಉಡುಪಿ ಹಾಗೂ ಮಂಗಳೂರು ನಡುವಿನ ಮೆಟ್ರೋ ರೈಲು ಯೋಜನೆಗೆ ಮಾಸ್ಟರ್ ಪ್ಲ್ಯಾನ್ ರಚಿಸಲು ಸೂಚನೆಯನ್ನು ನೀಡಿದೆ.
Also Read : Shilpa Shetty : ಕಾಪು ಮಾರಿಗುಡಿಗೆ ನಟಿ ಶಿಲ್ಪಾ ಶೆಟ್ಟಿ ವಿಶೇಷ ಪೂಜೆ : ಖಡ್ಗೇಶ್ವರಿ ಕ್ಷೇತ್ರದಲ್ಲಿ ಢಕ್ಕೆ ಬಲಿ
ಎರಡೂ ನಗರಗಳ ನಡುವೆ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ 1ನೇ ಹಂತದಲ್ಲಿ 60 ಕಿ.ಮೀ. ಉದ್ದ ಮಾಸ್ಟರ್ ಪ್ಲ್ಯಾನ್ ಸಂಕ್ಷಿಪ್ತ ಟಿಪ್ಪಣೆ ಮತ್ತು ಕಾರ್ಯ ಸಾಧ್ಯತಾ ವರದಿಯನ್ನು ರೂಪಿಸುವಂತೆ ಸರಕಾರ ಈಗಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಸೂಚನೆಯನ್ನು ನೀಡಿದೆ.
ಅಷ್ಟೇ ಅಲ್ಲದೇ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಆರ್ಥಿಕ ಹಾಗೂ ತಾಂತ್ರಿಕ ಕಾರ್ಯ ಸಾಧ್ಯತಾ ಅಧ್ಯಯನ ನಡೆಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಪತ್ರವನ್ನು ಬರೆದಿದೆ. ಒಂದೊಮ್ಮೆ ಈ ಯೋಜನೆ ಜಾರಿಗೆ ಬಂದಿದ್ರೆ ಆದ್ರೆ ಎರಡೂ ಜಿಲ್ಲೆಗಳು ಅಭಿವೃದ್ದಿಯನ್ನು ಕಾಣಲಿದೆ.
Also Read : ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ? ಹೀಗೆ ಚೆಕ್ ಮಾಡಿ
ನಿತ್ಯವೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಪುಣ್ಯಕ್ಷೇತ್ರಗಳ ದರ್ಶನಕ್ಕೂ ಭಕ್ತರು ಆಗಮಿಸುತ್ತಿದ್ದಾರೆ. ಐಟಿ ಕಂಪೆನಿ, ಕೈಗಾರಿಕಾ ಪ್ರದೇಶಗಳ ಅಭಿವೃದ್ದಿಯ ಜೊತೆಗೆ ಆರ್ಥಿಕವಾಗಿಯೂ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ.
ವಿಎಸ್ ಆಚಾರ್ಯರ ಕನಸು ಮೆಟ್ರೋ ಯೋಜನೆ :
ಕರಾವಳಿಯ ಖ್ಯಾತ ರಾಜಕಾರಣಿ, ಬಿಜೆಪಿಯ ಪ್ರಬಲ ನಾಯಕರಾಗಿದ್ದ ಡಾ.ವಿ.ಎಸ್.ಆಚಾರ್ಯ ಅವರು ಮೆಟ್ರೋ ರೈಲು ಯೋಜನೆಯ ಬಗ್ಗೆ ಕನಸು ಕಂಡಿದ್ದರು. ವಿಎಸ್ ಆಚಾರ್ಯ ಅವರು ಸಚಿವರಾಗಿದ್ದ ವೇಳೆಯಲ್ಲಿ ಉಡುಪಿ ಹಾಗೂ ಮಂಗಳೂರು ನಡುವೆ ಮೆಟ್ರೋ ರೈಲು ಯೋಜನೆಯನ್ನು ಪ್ರಸ್ತಾವಿಸಿದ್ದರು.
Also Read : ಪಡಿತರ ಕಾರ್ಡ್ ಇಕೆವೈಸಿ ಮಾಡಿಸಿದಿದ್ರೆ ರದ್ದಾಗುತ್ತೆ ನಿಮ್ಮ ಕಾರ್ಡ್
Udupi-Mangalore Metro intercity Namma Metro Rail Project announcement in Kannada News