ಬೆಳಗಾವಿ : umesh katti mounrng announced : ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ ಬಾರದ ಲೋಕಕ್ಕೆ ತೆರಳಿದ್ದಾರೆ. ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಉಮೇಶ್ ಕತ್ತಿ ಮೃತದೇಹವನ್ನು ಬೆಂಗಳೂರಿನಿಂದ ಏರ್ಲಿಫ್ಟ್ ಮಾಡಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಇಲ್ಲಿಂದ ಮೃತದೇಹವನ್ನು ರಸ್ತೆ ಮಾರ್ಗದ ಮೂಲಕ ಬೆಲ್ಲದ ಬಾಗೇವಾಡಿಗೆ ತರಲಾಗಿದೆ.ಬೆಲ್ಲದ ಬಾಗೇವಾಡಿಗೆ ಸಿಎಂ ಸೇರಿದಂತೆ ಸಚಿವರು ಮತ್ತು ವಿಪಕ್ಷಗಳ ನಾಯಕರು ಆಗಮಿಸಿದ್ದು ತೋಟದಲ್ಲಿ ಉಮೇಶ್ ಕತ್ತಿ ಅಂತ್ಯಕ್ರಿಯೆ ನೆರವೇರಲಿದೆ.
ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಶೋಕಾಚರಣೆಯನ್ನು ಮೂರು ದಿನಗಳ ಕಾಲ ವಿಸ್ತರಿಸಿದ್ದಾರೆ. ಈ ಮೊದಲು ಒಂದು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಆಯೋಜಿಸಲಾಗಿತ್ತು. ಆದರೆ ಇದನ್ನು ವಿಸ್ತರಿಸಿ ಮೂರು ದಿನಗಳಿಗೆ ಶೋಕಾಚರಣೆ ನಿಗದಿಪಡಿಸಲಾಗಿದೆ. ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಅವರು ಉಮೇಶ್ ಕತ್ತಿ ನಿಧನದ ಪ್ರಯುಕ್ತ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆಯನ್ನು ನಡೆಸಲಿದ್ದೇವೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನಾವು ನಡೆಸುವುದಿಲ್ಲ. ನೆರೆ ನಿರ್ವಹಣೆ ಕಾರ್ಯವನ್ನು ಮಾತ್ರ ಮಾಡಲಿದ್ದೇವೆ . ಕತ್ತಿ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ಸರ್ಕಾರ ನಡೆಸಲಿದೆ. ನಾಳೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದ್ದೇವೆ ಎಂದು ಹೇಳಿದ್ದಾರೆ.
ಸಚಿವ ಉಮೇಶ್ ಕತ್ತಿ ನಿಧನದ ಬಳಿಕ ಜನೋತ್ಸವ ಕಾರ್ಯಕ್ರಮದ ಭವಿಷ್ಯವೇನು ಎಂಬ ಚರ್ಚೆ ಎದುರಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಲಿ ಸಚಿವನ ನಿಧನಕ್ಕೆ ಕೇವಲ 1 ದಿನ ಶೋಕಾಚರಣೆಗೆ ಘೋಷಣೆ ಮಾಡಿದ್ದು ತೀವ್ರ ಚರ್ಚೆಗೆ ಘ್ರಾಸವಾಗಿತ್ತು. ಜನೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಯಾಗಬಾರದೆಂದೇ ಸರ್ಕಾರ ಮೂರು ದಿನಗಳ ಬದಲಾಗಿ ಒಂದು ದಿನ ಶೋಕಾಚರಣೆ ಮಾಡ್ತಿದೆ ಎಂದೆಲ್ಲ ಅಪಸ್ವರಗಳು ಕೇಳಿ ಬಂದಿದ್ದವು. ಈ ಎಲ್ಲಾ ವಿರೋಧಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಇದನ್ನು ಓದಿ : SBI Recruitment 2022 : ಎಸ್‌ಬಿಐ ನೇಮಕಾತಿ 2022 : 5008 ಹುದ್ದೆ, 47,000 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : bjp janostava postpone : ಉಮೇಶ್ ಕತ್ತಿ ನಿಧನ : ಬಿಜೆಪಿ ಜನೋತ್ಸವ ಕಾರ್ಯಕ್ರಮ ಸೆ.11ಕ್ಕೆ ಮುಂದೂಡಿಕೆ
umesh katti three days mounrng announced