ಮಂಗಳೂರು : ಶ್ರೀ ವಿಠೋಭ ರುಕುಮಾಯಿ ದೇವರ ಭಂಡಾರದ ಆಡಳಿತಾತ್ಮಕ ವ್ಯವಹಾರದಲ್ಲಿ ಹಸ್ತಕ್ಷೇಪ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ (Hanumant Kamath) 90 ದಿನಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಮಂಗಳೂರಿನ ಸಿವಿಲ್ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಮಂಗಳೂರು ನಗರದ ವಿಟಿ ರಸ್ತೆಯಲ್ಲಿ ಇರುವ ವಿಠೋಬ ರುಕುಮಾಯಿ ದೇವಸ್ಥಾನಕ್ಕೆ ಸಂಬಂಧಿಸಿದಂಥೆ ತಾನು ಟ್ರಸ್ಟಿ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಪತ್ರಿಕೆಯ ಮೂಲಕ ಹೇಳಿಕೊಂಡಿದ್ದರು. ಈ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆಯನ್ನು ನೀಡಿತ್ತು. ಆದರೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಇದೀಗ ನ್ಯಾಯಾಲಯ ಕಾರಾಗ್ರಹ ಶಿಕ್ಷೆಯನ್ನು ವಿಧಿಸಿದೆ.
ಇದನ್ನೂ ಓದಿ : ಬಿಪಿಎಲ್ ಕಾರ್ಡುದಾರರಿಗೆ ಬಿಗ್ ರಿಲೀಫ್ : ಜಾರಿಯಾಯ್ತು ಹೊಸ ರೂಲ್ಸ್
ಹನುಮಂತ ಕಾಮತ್ ಅವರು ತನ್ನನ್ನು ತಾನು ಟ್ರಸ್ಟಿ ಎಂದು ಪ್ರತಿಪಾದಿಸಿಕೊಂಡು ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದ ದೇವರ ಭಂಡಾರದ ನಿತ್ಯದ ವ್ಯವಹಾರದಲ್ಲಿ ಭಾಗವಹಿಸುತ್ತಿದ್ದರು. ಹೀಗಾಗಿ ಹನುಮಂತ ಕಾಮತ್ ಟ್ರಸ್ಟಿ ಎಂದು ಹೇಳಿಕೊಳ್ಳಬಾರದು, ಅಲ್ಲದೇ ಅವರು ನಿತ್ಯದ ವ್ಯವಹಾರದಲ್ಲಿ ಭಾಗವಹಿಸಲು ತಡೆಯಾಜ್ಞೆ ನೀಡುವಂತೆ ಕೋರಿ ದೇವರದ ಭಂಡಾರದ ಟ್ರಸ್ಟಿ ಎಂ ವರದರಾಯ ಪ್ರಭು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಹನುಮಂತ ಕಾಮತ್ ಅವರು 1994 ರಲ್ಲಿಯೇ ಟ್ರಸ್ಟಿ ಸ್ಥಾನವನ್ನು ಕಳೆದುಕೊಂಡಿದ್ದರು. ಅಲ್ಲದೇ ಭಂಡಾರವನ್ನು ಪ್ರತಿನಿಧಿಸಲು ಯಾವುದೇ ಹಕ್ಕು ಇರುವುದಿಲ್ಲ. ಆಡಳಿತ ಟ್ರಸ್ಟಿಯ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಆದರೆ 2ನೇ ಅರ್ಜಿದಾರರಾದ ಹನುಮಂತ ಕಾಮತ್ ಪತ್ರಿಕೆಯೊಂದರಲ್ಲಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ತನ್ನನ್ನು ತಾನೇ ಟ್ರಸ್ಟಿ ಎಂಉ ಹೇಳಿಕೊಳ್ಳುವ ಮೂಲಕ ನ್ಯಾಯಾಲಯ ಆದೇಶ ಉಲ್ಲಂಘನೆ ಮಾಡಲಾಗಿತ್ತು. ಇದೀಗ ನ್ಯಾಯಾಲಯ ಹನುಮಂತ ಕಾಮತ್ ಅವರನ್ನು ತಪ್ಪಿತಸ್ಥ ಎಂದು ಆದೇಶ ಹೊರಡಿಸಿದೆ. ಅಲ್ಲದೇ 90 ದಿನಗಳ ವರೆಗೆ ಕಾರಾಗ್ರಹ ಶಿಕ್ಷೆ ವಿಧಿಸಿ ಆದೇಸಿಸಿದ್ದಾರೆ. ಇನ್ನು ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಪಿ.ರಂಜನ್ ರಾವ್ ವಾದ ಮಂಡಿಸಿದ್ದರು.
Violation of Mangalore court order Social activist Hanumant Kamath sentenced to prison 90 days