ಮಂಗಳವಾರ, ಏಪ್ರಿಲ್ 29, 2025
HomeCoastal NewsVishala Ganiga Murder : ವಿಶಾಲ ಗಾಣಿಗ ಕೊಲೆಗೆ 6 ತಿಂಗಳ ಹಿಂದೆ ಸ್ಕೆಚ್‌...

Vishala Ganiga Murder : ವಿಶಾಲ ಗಾಣಿಗ ಕೊಲೆಗೆ 6 ತಿಂಗಳ ಹಿಂದೆ ಸ್ಕೆಚ್‌ : ಹಣದ ಪಾರ್ಸೆಲ್‌ ಕಳುಹಿಸಿ ಕೊಲೆ ಮಾಡಿಸಿದ ಪತಿ

- Advertisement -

ಉಡುಪಿ : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಒಂದೇ ವಾರದಲ್ಲಿ ಬೇಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿಯ ಜೊತೆಯಲ್ಲಿದ್ದಾಗಲೇ ಪತಿ ರಾಮಕೃಷ್ಣ ವಿಶಾಲ ಗಾಣಿಗ ಹತ್ಯೆಗೆ ಸುಫಾರಿ ಕೊಟ್ಟಿದ್ದ. ಅಲ್ಲದೇ ಮನೆಗೆ ಹಣದ ಪಾರ್ಸೆಲ್‌ ಕಳುಹಿಸಿ ಪತ್ನಿಯನ್ನು ಕೊಂದು ಮುಗಿಸಿದ್ದಾನೆ.

ಉಡುಪಿ ಜಿಲ್ಲೆಯ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿ ಜುಲೈ 12ರಂದು ಕೊಲೆಯಾಗಿದ್ದ ವಿಶಾಲ ಗಾಣಿಗ ಕೊಲೆಯನ್ನು ಪತಿಯೇ ಮಾಡಿಸಿರೋದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಕೊಲೆ ಆರೋಪಿ ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಖ್‌ಪುರ ನಿವಾಸಿ ಸ್ವಾಮಿನಾಥ ನಿಶಾದ ಎಂಬಾತನನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪಶ್ವಿಮವಲಯ ಡಿಜಿ ಮತ್ತು ಐಜಿಪಿ ಪ್ರವೀಣ್‌ ಸೂದ್‌ ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಐವತ್ತು ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

ಹತ್ಯೆಗೆ 6 ತಿಂಗಳ ಹಿಂದೆಯೇ ಸ್ಕೆಚ್‌
ವಿಶಾಲ ಗಾಣಿಗ ಹಾಗೂ ರಾಮಕೃಷ್ಣ ಗಾಣಿಗ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆಯೂ ಪದೇ ಪದೇ ಜಗಳವಾಗುತ್ತಿತ್ತು. ರಾಮಕೃಷ್ಣ ಗಾಣಿಗ ಪತ್ನಿಯ ಬಳಿ ವಿಚ್ಚೇಧನ ನೀಡುವಂತೆಯೂ ಹೇಳಿದ್ದಾನೆ. ಆದ್ರೆ ವಿಶಾಲ ಗಾಣಿಗ ಪತಿಯಿಂದ ದೂರವಾಗೋದಕ್ಕೆ ರೆಡಿ ಇರಲಿಲ್ಲ ಎನ್ನಲಾಗುತ್ತಿದೆ. ಪತಿ ರಾಮಕೃಷ್ಣ ಗಾಣಿಗ ಪತ್ನಿಯ ಜೊತೆ ದುಬೈನಲ್ಲಿ ಇದ್ದಾಗಲೇ ಪತ್ನಿಯ ಹತ್ಯೆಗೆ ಸುಫಾರಿ ಕೊಟ್ಟಿದ್ದ. ಉತ್ತರ ಪ್ರದೇಶದ ಸ್ವಾಮಿನಾಥ ನಿನಾದ ಹಾಗೂ ಮತ್ತೋರ್ವ ವ್ಯಕ್ತಿಗೆ ಸುಮಾರು ೨ ಲಕ್ಷ ರೂಪಾಯಿ ಹಣ ನೀಡಿ ಇದೀಗ ಕೃತ್ಯವೆಸಗಿದ್ದಾನೆ.

ಪತ್ನಿಗೆ ಕೊಲೆಗಾರನನ್ನು ಪರಿಚಯಿಸಿದ್ದ ಪತಿ..!!
ವಿಶಾಲ ಗಾಣಿಗ ಕೊಲೆಗೆ ಸುಫಾರಿ ನೀಡಿದ್ದ ಪತಿ ರಾಮಕೃಷ್ಣ ತಾನು ಖರೀದಿಸಿದ್ದ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಸುಫಾರಿ ಕಿಲ್ಲರ್‌ನ್ನುಪಾರ್ಸೆಲ್‌ ನೀಡುವ ನೆಪದಲ್ಲಿ ಕರೆಯಿಸಿಕೊಂಡಿದ್ದ. ಆ ವೇಳೆಯಲ್ಲಿ ತನ್ನ ಮನೆಯನ್ನೆಲ್ಲಾ ಸಂಪೂರ್ಣವಾಗಿ ಆತನಿಗೆ ತೋರಿಸಿದ್ದಾನೆ. ಅಲ್ಲದೇ ಪತ್ನಿಗೆ ತನ್ನ ಸ್ನೇಹಿತ ಅಂತಾನೂ ಪರಿಚಯ ಮಾಡಿಕೊಟ್ಟಿದ್ದ. ಪತ್ನಿಯ ಎಲ್ಲಾ ಚಲನವಲನಗಳನ್ನೂ ಸುಫಾರಿ ಕಿಲ್ಲರ್‌ ಅರಿಯುವಂತೆ ಮಾಡಿದ್ದ ಪತಿ ರಾಮಕೃಷ್ಣ.

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪತಿ, ಸೇರಿ ಸುಫಾರಿ ಕಿಲ್ಲರ್‌ ಬಂಧನ : ದುಬೈನಲ್ಲೇ ಕುಳಿತು ಕೊಲೆಗೆ ಸ್ಕೆಚ್‌

ಮಾರ್ಚ್‌ನಲ್ಲಿ ತಪ್ಪಿತ್ತು ಸ್ಕೆಚ್‌ …!
ರಾಮಕೃಷ್ಣ ಗಾಣಿಗ ತನ್ನ ಪತ್ನಿಯ ಜೊತೆಯಲ್ಲಿ ಮಾರ್ಚ್‌ ತಿಂಗಳಿನಲ್ಲೇ ದುಬೈನಿಂದ ಊರಿಗೆ ಬಂದಿದ್ದ. ಈ ವೇಳೆಯಲ್ಲಿ ಕೊಲೆಗಾರನನ್ನು ಫ್ಲ್ಯಾಟ್‌ಗೆ ಕರೆಯಿಸಿಕೊಂಡಿದ್ದ. ಆಗಲೇ ವಿಶಾಲಾ ಗಾಣಿಗ ಕೊಲೆ ಮಾಡಿಸೋದಕ್ಕೂ ಮುಂದಾಗಿದ್ದ. ಆದರೆ ತಾನು ಊರಿನಲ್ಲಿದ್ದರೆ ಆ ಕೊಲೆ ತನ್ನ ಮೈ ಮೇಲೆ ಬರುತ್ತೆ ಅಂತಾ ಪತ್ನಿ, ಮಗಳೊಂದಿಗೆ ದುಬೈಗೆ ತೆರಳಿದ್ದಾನೆ. ಆದ್ರೆ ಪತ್ನಿಯನ್ನು ತನ್ನ ಮನೆಯ ಜಾಗದ ವಿಚಾರಕ್ಕಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾನೆ.

ಹಣದ ಪಾರ್ಸೆಲ್‌ ತಂದು ಕೊಲೆಗೈದ..!!!
ರಾಮಕೃಷ್ಣ ಗಾಣಿಗ ತನಗೊಂದು ಹಣದ ಪಾರ್ಸೆಲ್‌ ಬರುತ್ತೆ. ಆದರೆ ಹಣದ ವಿಚಾರ ಅತ್ತೆ, ಮಾವನಿಗೆ ಗೊತ್ತಾಗೋದು ಬೇಡಾ. ಹೀಗಾಗಿ ಅವರನ್ನು ಮನೆಗೆ ಕಳುಹಿಸಿ ಬಾ ಎಂದು ಹೇಳಿದ್ದಾನೆ. ಪತಿಯ ಮಾತನ್ನು ನಂಬಿದ್ದ ವಿಶಾಲ ಗಾಣಿಗ ರಿಕ್ಷಾ ಮಾಡಿಕೊಂಡು ಅಪ್ಪ, ಅಮ್ಮನ ಜೊತೆಗೆ ಮಗಳನ್ನು ಕೂಡ ತವರು ಮನೆಗೆ ಬಿಟ್ಟು ಬಂದಿದ್ದರು. ಇತ್ತ ಪತ್ನಿ ಪ್ಲ್ಯಾಟ್‌ಗೆ ಬಂದಿರೋದನ್ನು ಪೋನ್‌ ಮಾಡಿ ಖಚಿತ ಪಡಿಸಿಕೊಂಡಿದ್ದ ರಾಮಕೃಷ್ಣ ಸುಫಾರಿ ಕಿಲ್ಲರ್‌ಗಳಿಗೆ ಮಾಹಿತಿಯನ್ನು ನೀಡಿದ್ದಾನೆ. ಹಣದ ಪಾರ್ಸೆಲ್‌ ಹಿಡಿದುಕೊಂಡು ಕೊಲೆಗಾರರು ಫ್ಲ್ಯಾಟ್‌ ಒಳಗೆ ಬಂದಿದ್ದಾರೆ. ಪತಿಯ ಸ್ನೇಹಿತರು ಅನ್ನೋ ಕಾರಣಕ್ಕೆ ವಿಶಾಲ ಬಾಗಿಲು ತೆರೆದಿದ್ದಾರೆ. ಮನೆಯೊಳಗೆ ಪ್ರವೇಶಿಸಿದ ಆರೋಪಿಗಳು ವಿಶಾಲ ಕುತ್ತಿಗೆಗೆ ವಿದ್ಯುತ್‌ ವಯರ್‌ ಹಾಗೂ ಮೊಬೈಲ್‌ ಚಾರ್ಜರ್‌ ನಿಂದ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರದಲ್ಲಿ ಚಿನ್ನಾಭರಣಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಯುವತಿಯರಿಗೆ ಸಿನಿಮಾದ ಆಫರ್‌ : ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ಮಾಪಕ ಅರೆಸ್ಟ್‌

ಕೊಲೆ ಮಾಡಿಸಿ ಮಾವನನ್ನು ಅಪಾರ್ಟ್‌ಮೆಂಟ್‌ಗೆ ಕಳುಹಿಸಿದ್ದ
ತಾನು ದೂರದ ದುಬೈನಲ್ಲಿ ಇರೋ ಕಾರಣದಿಂದ ತನ್ನ ಮೇಲೆ ಯಾರಿಗೂ ಅನುಮಾನ ಬಾರದಂತೆ ನೋಡಿಕೊಂಡಿದ್ದಾರೆ. ವಿಶಾಲ ಕಾಲ್‌ ತೆಗೆಯುತ್ತಿಲ್ಲ ಅಂತಾ ಖುದ್ದು ಮಾವನನ್ನೇ ಅಪಾರ್ಟ್‌ಮೆಂಟ್‌ಗೆ ಕಳುಹಿಸಿಕೊಟ್ಟಿದ್ದ. ಸಾಲದಕ್ಕೆ ಪತ್ನಿಗೆ ಪ್ರೀತಿಯ ಮೆಸೆಜ್‌ಗಳನ್ನೂ ಕಳುಹಿಸಿದ್ದಾನೆ. ಆದರೆ ಕೃತ್ಯ ನಡೆದಿದ್ದ ಸ್ಥಳದಲ್ಲಿ ಸಿಕ್ಕಿದ್ದ ಕೆಲ ಸಾಕ್ಷ್ಯಗಳು ರಾಮಕೃಷ್ಣನತ್ತ ಬೊಟ್ಟು ಮಾಡಿತ್ತು. ಮನೆಗೆ ಪತಿಯ ಅನುಮತಿಯಿಲ್ಲದೇ ಯಾರನ್ನೂ ಸೇರಿಸುತ್ತಿರಲಿಲ್ಲ ಅನ್ನೋ ಹೇಳಿಕೆ ಪ್ರಕರಣದ ಧಿಕ್ಕನ್ನೇ ಬದಲಾಯಿಸಿತ್ತು. ಕೊಲೆಗಾರರು ಮನೆಯೊಳಗೆ ಪ್ರವೇಶ ಮಾಡುವ ಮೊದಲೇ ವಿಶಾಲ ಗಾಣಿಗ ತನ್ನ ಪತಿಗೆ ಕರೆ ಮಾಡಿ ವಿಚಾರಿಸಿಕೊಂಡಿದ್ದಳು ಅನ್ನೋದು ಪೊಲೀಸರಿಗೆ ದೃಢಪಟ್ಟಿತ್ತು. ಇದೇ ಹಿನ್ನೆಲೆಯಲ್ಲಿಯೇ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಪತ್ನಿಯನ್ನು ಕೊಂದು ಅಂತ್ಯಕ್ರೀಯೆ ಮಾಡಿದ್ದ..!!!
ವಿಶಾಲ ಗಾಣಿಗ ಕೊಲೆಯಾಗಿರೋ ವಿಚಾರ ತಿಳಿಯುತ್ತಲೇ ಅಂತ್ಯಕ್ರಿಯೆಗಾಗಿ ಊರಿಗೆ ಬಂದಿದ್ದ ರಾಮಕೃಷ್ಣ ಗಾಣಿಗ ಅಂತ್ಯಕ್ರಿಯೆಯನ್ನು ನಡೆಸಿದ್ದಾನೆ. ಮಾತ್ರವಲ್ಲ ಎಲ್ಲಾ ಕಾರ್ಯಗಳನ್ನೂ ನೆರವೇರಿಸಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ನಡೆದುಕೊಂಡಿದ್ದ. ಆದ್ರೆ ಪೊಲೀಸರಿಗೆ ರಾಮಕೃಷ್ಣ ಗಾಣಿಗ ಮೇಲೆ ಅನುಮಾನದ ಹಿನ್ನೆಲೆಯಲ್ಲಿ ಮೂರು ಬಾರಿ ವಿಚಾರಣೆಗೆ ಕರೆದಿದ್ದರು. ಕೊನೆಯ ಬಾರಿಗೆ ವಿಚಾರಣೆಗೆ ಕರೆದ ವೇಳೆಯಲ್ಲಿ ಕೊಲೆ ಪ್ರಕರಣ ಮಾಹಿತಿಯನ್ನು ರಾಮಕೃಷ್ಣ ಗಾಣಿಗ ಬಾಯ್ಬಿಟ್ಟಿದ್ದಾನೆ. ಇದೇ ಹೊತ್ತಲೇ ಪೊಲೀಸರು ಸುಫಾರಿ ಕಿಲ್ಲರ್‌ ಓರ್ವನನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಇದನ್ನೂ ಓದಿ : ಬಗೆದಷ್ಟು ಬಯಲಾಗ್ತಿದೆ ಡ್ರೋನ್ ಪ್ರತಾಪನ ವಂಚನೆ ಜಾಲ…! ಸಿನಿಮಾ ನಿರ್ದೇಶಕರಿಗೆ ಪ್ರತಾಪ ವಂಚಿಸಿದ್ದೆಷ್ಟು ಗೊತ್ತಾ..?!

ವಿಶಾಲ ಗಾಣಿಗ ಕೊಲೆಯಾದ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸದ ಕಟ್ಟಡ ಮಾಲೀಕರಿಗೆ ಪೊಲೀಸರು ನೊಟೀಸ್‌ ಜಾರಿ ಮಾಡಿದ್ದಾರೆ. ಕೂಡಲೇ ಸಿಸಿಟಿವಿ ಅಳವಡಿಕೆ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ. ಜಿಲ್ಲಾ ಎಸ್ಪಿ ವಿಷ್ಣುವರ್ಧನ್‌ ಅವರ ಮಾರ್ಗದರ್ಶನದಲ್ಲಿ ಪೊಲೀಸ್‌ ತಂಡ ಪ್ರಕರಣವನ್ನು ಬೇಧಿಸಿದ್ದು. ಕರಾವಳಿಯ ಜನರು ಪೊಲೀಸ್‌ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular