ಸೋಮವಾರ, ಏಪ್ರಿಲ್ 28, 2025
Homekarnatakahotel bar owners : ನೈಟ್ ಕರ್ಪ್ಯೂ ಸಡಿಲಿಸದಿದ್ದರೇ ನಾವು ವ್ಯಾಪಾರ ಬಂದ್ ಮಾಡಲ್ಲ: ಸರ್ಕಾರಕ್ಕೆ...

hotel bar owners : ನೈಟ್ ಕರ್ಪ್ಯೂ ಸಡಿಲಿಸದಿದ್ದರೇ ನಾವು ವ್ಯಾಪಾರ ಬಂದ್ ಮಾಡಲ್ಲ: ಸರ್ಕಾರಕ್ಕೆ ಹೊಟೇಲ್,ಬಾರ್ ಮಾಲೀಕರ ಎಚ್ಚರಿಕೆ

- Advertisement -

ಬೆಂಗಳೂರು : ಸರಕಾರ ರಾಜ್ಯದಲ್ಲಿ ದಿನದಿಂದ‌ ದಿನಕ್ಕೆ ಏರುತ್ತಿರುವ ಕರೋನಾ ಹಾಗೂ ಓಮೈಕ್ರಾನ್ ನಿಯಂತ್ರಿಸಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ನೈಟ್ ಕರ್ಪ್ಯೂ ಮೂಲಕ ಸೋಂಕಿನ ಹರಡುವಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದೆ. ಆದರೆ ಸರ್ಕಾರದ ಈ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತಿದೆ ಎಂಬ ಆಕ್ರೋಶ ಎಲ್ಲೆಡೆ ಕೇಳಿಬರುತ್ತಿದ್ದು, ಇದನ್ನು ವಿರೋಧಿಸಿರುವ ಹೊಟೇಲ್ ಮಾಲೀಕರ ಸಂಘ (hotel bar owners) ಮುಂದಿನ ವಾರದಿಂದ ನೈಟ್ ಕರ್ಪ್ಯೂಗೆ ( covid guidelines ) ನಮ್ಮ ವಿರೋಧವಿದೆ ಎಂದು ಗುಡುಗಿದ್ದಾರೆ.

ಸರ್ಕಾರದ ವೀಕೆಂಡ್ ಕರ್ಪ್ಯೂ ಸೇರಿದಂತೆ ಎಲ್ಲ ನಿಯಮವನ್ನು ಜನಸಾಮಾನ್ಯರ ಮೇಲೆ, ಮಾರುಕಟ್ಟೆಗಳ ಮೇಲೆ ಹೇರಲಾಗುತ್ತಿದೆ. ಆದರೆ ರಾಜಕೀಯ ಪಕ್ಷಗಳು ಮಾತ್ರ ಪಾದಯಾತ್ರೆ, ಚುನಾವಣಾ ರ್ಯಾಲಿಗಳನ್ನು ಎಗ್ಗಿಲ್ಲದೇ ನಡೆಸಿಕೊಂಡು ಬರುತ್ತಿವೆ. ಈಗಾಗಲೇ ಕರೋನಾ ಮೊದಲನೇ ಮತ್ತು ಎರಡನೇ ಅಲೆಯ ಕಾರಣಕ್ಕೆ ಆರ್ಥಿಕವಾಗಿ ನಷ್ಟದಲ್ಲಿರುವ ಹೊಟೇಲ್, ಬಾರ್, ಪಬ್, ರೆಸ್ಟೋರೆಂಟ್, ಥಿಯೇಟರ್ ಮಾಲೀಕರು ಗಾಯತ್ರಿ ವಿಹಾರದಲ್ಲಿ ಸಭೆ ನಡೆಸಿದ್ದು, ಕರವೇ ಸೇರಿದಂತೆ ಹಲವು ಸಂಘಟನೆಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈಗಾಗಲೇ ಎಂಎಲ್ ಸಿ ಗಳ ಪ್ರಮಾಣವಚನ ಅದ್ದೂರಿಯಾಗಿ ನಡೆದಿದೆ. ಬಿಜೆಪಿ ಹಲವು ಕಾರ್ಯಕ್ರಮಗಳನ್ನು ನಡೆಸಿದೆ. ರಾಜಕೀಯ ನಾಯಕರ ಮಕ್ಕಳ ಮದುವೆ ಅದ್ದೂರಿಯಾಗಿ ನಡೆದಿದೆ.ಆದರೆ ಇದ್ಯಾವುದಕ್ಕೂ ಸರ್ಕಾರ ನಿಯಮ‌ ಜಾರಿಗೊಳಿಸಿಲ್ಲ‌. ಅದರೆ ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮದ್ಯ ಮಾರಾಟಸಂಘದ ಅಧ್ಯಕ್ಷ ಕರುಣಾಕರ್ ಹೆಗ್ಡೆ ಮುಂದಿನ ವಾರದಿಂದ ಸರ್ಕಾರ ವೀಕೆಂಡ್ ಕರ್ಪ್ಯೂ ವೇಳೆ ಹೊಟೇಲ್, ಬಾರ್ ಸೇರಿದಂತೆ ಉದ್ಯಮಗಳಿಗೆ ಶೇಕಡಾ ೫೦ ರಷ್ಟು ಗ್ರಾಹಕರಿಗೆ ಅವಕಾಶ ನೀಡದಿದ್ದರೇ ನಾವು ಹೊಟೇಲ್ ಹಾಗೂ ಬಾರ್ ಬಾಗಿಲು ತೆರೆಯುವುದಾಗಿ ಎಚ್ಚರಿಸಿದೆ.

ಇದನ್ನೂ ಓದಿ :  ನನ್ನಮ್ಮ ಸೂಪರ್​ಸ್ಟಾರ್​​ ಖ್ಯಾತಿಯ ಮಗು ಸಮನ್ವಿ ರಸ್ತೆ ಅಪಘಾತದಲ್ಲಿ ಸಾವು

ನಾವು ಕೊರೋನಾ ಎರಡೂ ಅಲೆಗಳ ಸಂದರ್ಭದಲ್ಲಿ ಸರಕಾರದ ಆದೇಶವನ್ನು ಶಿರಸಾವಹಿಸಿ ಪಾಲಿಸಿದ್ದೇವೆ. ಆದರೇ ಈಗ ನಾವು ಅಳಿವಿನ ಅಂಚು ತಲುಪಿದ್ದೇವೆ. ಹೀಗಾಗಿ ಈ ಸಲ ಸರ್ಕಾರದ ನಿಯಮವನ್ನು ಪಾಲಿಸಲು ಸಾಧ್ಯವೇ ಇಲ್ಲ. ಹೀಗಾಗಿ ಇದೊಂದು ವಾರ ನಾವು ನೈಟ್ ಕರ್ಪ್ಯೂ ಪಾಲಿಸುತ್ತೇವೆ ಎಂದು ಹೊಟೇಲ್, ಬಾರ್ ಮಾಲೀಕರ ಸಭೆಯಲ್ಲಿ ಪಾಲ್ಗೊಂಡವರು ಗುಡುಗಿದ್ದಾರೆ. ಸರ್ಕಾರ ಮುಂದಿನ ವಾರದಿಂದ ನಮಗೆ ಕರ್ಪ್ಯೂ ನಿಯಮ ಸಡಿಲಿಸಿ ಕೊರೋನಾ ನಿಯಮಗಳ ಜೊತೆ ಶೇಕಡಾ ಅರ್ಧದಷ್ಟು ಗ್ರಾಹಕರ ಭೇಟಿಗೆ ಅವಕಾಶ ನೀಡದಿದ್ದರೇ ನಾವು ಅನಿವಾರ್ಯವಾಗಿ ಕರ್ಪ್ಯೂ ಉಲ್ಲಂಘಿಸಿ ಬಾರ್, ಹೊಟೇಲ್ ಬಾಗಿಲು ತೆರೆಯುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಕೊರೋನಾ, ಓಮೈಕ್ರಾನ್ ಹಾಟ್ ಸ್ಪಾಟ್ : ಅಪಾರ್ಟ್ಮೆಂಟ್ ಗಳಿಗೆ ಪ್ರತ್ಯೇಕ ಮಾರ್ಗಸೂಚಿ

ಇದನ್ನೂ ಓದಿ : ಕರ್ನಾಟಕದಲ್ಲಿ 10 ದಿನಗಳ ಕಾಲ ಲಾಕ್‌ಡೌನ್‌ ಫಿಕ್ಸ್‌

( We do not following covid guidelines, hotel bar owners warns Karnataka Government)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular