ಶನಿವಾರ, ಏಪ್ರಿಲ್ 26, 2025
HomekarnatakaRekha Gupta : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಯಾರು ? ಎಬಿವಿಪಿಯಿಂದ ಸಿಎಂ ಹುದ್ದೆಯವರೆಗೆ

Rekha Gupta : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಯಾರು ? ಎಬಿವಿಪಿಯಿಂದ ಸಿಎಂ ಹುದ್ದೆಯವರೆಗೆ

ಕಳೆದ ಎರಡು ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಆದರೆ ಈ ಬಾರಿ ರೇಖಾ ಗುಪ್ತಾ ಅವರು 2025 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯ ಬಂದಾನ ಕುಮಾರಿ ಅವರನ್ನು ಸೋಲಿಸುವ ಮೂಲಕ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಲ್ಲಿ 29,595 ಮತಗಳ ಅಂತರದಿಂದ ಜಯಿಸಿದ್ದರು. ದೆಹಲಿಯ ಪಾಲಿಗೆ ಇದು ದೊಡ್ಡ ಅಂತರದ ಗೆಲುವು ಎನಿಸಿಕೊಂಡಿದೆ.

- Advertisement -

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊನೆಗೂ ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಬರೋಬ್ಬರಿ 27 ವರ್ಷಗಳ ತರುವಾಯ ಭಾರತೀಯ ಜನತಾ ಪಕ್ಷದಿಂದ ದೆಹಲಿ ಮುಖ್ಯಮಂತ್ರಿ (Delhi CM) ಆಗಿ ರೇಖಾ ಗುಪ್ತ (Rekha Gupta) ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಹಾಗಾದ್ರೆ ಈ ರೇಖಾ ಗುಪ್ತ ಯಾರು ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿಗೆ ಉತ್ತರ.

ದೆಹಲಿಯ ಶಾಲಿಮಾರ್ ಬಾಗ್‌ (Shalimar Bhag) ವಿಧಾನಸಭಾ ಕ್ಷೇತ್ರದಿಂದ ಚೊಚ್ಚಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತ ದೆಹಲಿಯ ಮುಂದಿನ ಮುಖ್ಯಮಂತ್ರಿ ಯನ್ನಾಗಿ ಆಯ್ಕೆ ಮಾಡಲಾಗಿದೆ. ಇಂದು ಮಧ್ಯಾಹ್ನ 50 ವರ್ಷ ಪ್ರಾಯದ ರೇಖಾ ಗುಪ್ತಾ ಅವರು ದೆಹಲಿ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ದೆಹಲಿಯ ಮೂಲಕ ದೆಹಲಿಯ ನಾಲ್ಕನೇ ಮಹಿಳಾ ಸಿಎಂ ಅನ್ನೋ ಖ್ಯಾತಿಗೆ ಪಾತ್ರರಾಗಲಿದ್ದಾರೆ.

Who is Rekha Gupta Chief Minister of Delhi From ABVP to Delhi CM
Image Credit to Original Source

ದೆಹಲಿ ವಿಧಾನಸಭಾ 70 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ 48 ಸ್ಥಾನಗಳಲ್ಲಿ ಜಯಿಸುವ ಮೂಲಕ ಬರೋಬ್ಬರಿ ಎರಡೂವರೆ ದಶಕಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿದಿದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಹತ್ತು ದಿನಗಳ ನಂತರ ಇದೀಗ ಬಿಜೆಪಿ ಮುಖ್ಯಮಂತ್ರಿಯ ಆಯ್ಕೆಯನ್ನು ಮಾಡಿದೆ. ಚೊಚ್ಚಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತ ಅವರನ್ನು ಸಿಎಂ ಆಗಿ ಬಿಜೆಪಿ ಆಯ್ಕೆ ಮಾಡುವ ಮೂಲಕ ಹಲವು ಕುತೂಹಲಗಳಿಗೆ ತೆರೆ ಎಳೆದಿದೆ. ಹಾಗಾದ್ರೆ ಈ ರೇಖಾ ಗುಪ್ತಾ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಇಲ್ಲಿಗೆ ಉತ್ತರ.

Also Read : Summer Holiday 2025 : ಶಾಲಾ ಮಕ್ಕಳ ಬೇಸಿಗೆ ರಜೆಯಲ್ಲಿ ಮಹತ್ವದ ಬದಲಾವಣೆ

ರೇಖಾ ಗುಪ್ತಾ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಿದ್ಯಾಕೆ ?

ರೇಖಾ ಗುಪ್ತಾ ಯಾವುದೇ ರಾಜಕೀಯ ಹಿನ್ನೆಲೆಯನ್ನು ಹೊಂದಿರದ ಹೆಣ್ಣು ಮಗಳು. ರೇಖಾ ಗುಪ್ತ ಅವರ ಪತಿ ಕೂಡ ರಾಜಕೀಯದಿಂದ ದೂರ ಉಳಿದು ವ್ಯವಹಾರ ಮಾಡಿಕೊಂಡಿದ್ದಾರೆ. ಆದರೆ ರೇಖಾ ಗುಪ್ತಗೆ ರಾಜಕೀಯದ ಹಿನ್ನೆಲೆಯಿಲ್ಲದೇ ಇದ್ದರೂ ಕೂಡ ಸಂಘ ಪರಿವಾರದ ಜೊತೆಗೆ ಉತ್ತಮ ಬಾಂಧವ್ಯವನ್ನು ರೂಢಿಸಿಕೊಂಡಿದ್ದರು. ಶಾಲೆ, ಕಾಲೇಜಿನ ದಿನಗಳಲ್ಲೇ ಎಬಿವಿಪಿಯ ಸಕ್ರೀಯ ಸದಸ್ಯೆಯಾಗಿದ್ದವರು.

ಕಾಲೇಜು ದಿನಗಳಲ್ಲಿದ್ದಾಗಲೇ ರಾಜಕೀಯದ ಕಡೆಗೆ ಆಸಕ್ತಿ ಮೂಡಿತ್ತು. ವಿದ್ಯಾರ್ಥಿಯಾಗಿದ್ದಾಗಲೇ ಕಂಡಿದ್ದ ಕನಸು ಇಂದು ನನಸಾಗುತ್ತಿದೆ. ರೇಖಾ ಗುಪ್ತ ಕಳೆದ ಮೂರು ಅವಧಿಯಿಂದಲೂ ಮುನ್ಲಿಪಲ್‌ ಕೌನ್ಸಿಲರ್‌ ಆಗಿ ಆಯ್ಕೆಯಾಗಿದ್ದರು. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನ ಮಾಜಿ ಮೇಯರ್. 2007 ಮತ್ತು 2012 ರಲ್ಲಿ ಉತ್ತರಿ ಪಿತಂಪುರ (ವಾರ್ಡ್ 54) ನಿಂದ ದೆಹಲಿ ಕೌನ್ಸಿಲರ್ ಚುನಾವಣೆಗೆ ಆಯ್ಕೆಯಾದರು.

Also Read : mahakumbh 2025 : ಯೋಗಿ ಆದಿತ್ಯನಾಥ್ ನಾಡಲ್ಲೀಗ ಆಸ್ತಿಕರ ಉತ್ಸವ: ಮಹಾಕುಂಭ ಮೇಳ‌ದಿಂದ ಬದಲಾಗುತ್ತಾ ಉತ್ತರ ಪ್ರದೇಶ

ದೆಹಲಿಯ 9ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತ. ಹರಿಯಾಣದ ಜುಲಾನಾದಲ್ಲಿ ಜುಲೈ 19, 1974 (ವಯಸ್ಸು 50)ರಲ್ಲಿ ಜನಿಸಿದ್ದರು. ದೆಹಲಿಯ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದು, ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಶಿಕ್ಷಣವನ್ನು ಪಡೆದು ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅತಿಶಿ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ನಂತರ ಈ ಹುದ್ದೆಯನ್ನು ಅಲಂಕರಿಸಿದ ನಾಲ್ಕನೇ ಮಹಿಳೆ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.

Who is Rekha Gupta Chief Minister of Delhi From ABVP to Delhi CM
Image Credit to Original Source

ದೆಹಲಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿಯನ್ನು ಪಡೆಯುವ ವೇಳೆಯಲ್ಲಿಯೇ ಅವರು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮತ್ತು ಪಕ್ಷದ ದೆಹಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಕಳೆದ ಎರಡು ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಆದರೆ ಈ ಬಾರಿ ರೇಖಾ ಗುಪ್ತಾ ಅವರು 2025 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯ ಬಂದಾನ ಕುಮಾರಿ ಅವರನ್ನು ಸೋಲಿಸುವ ಮೂಲಕ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಲ್ಲಿ 29,595 ಮತಗಳ ಅಂತರದಿಂದ ಜಯಿಸಿದ್ದರು. ದೆಹಲಿಯ ಪಾಲಿಗೆ ಇದು ದೊಡ್ಡ ಅಂತರದ ಗೆಲುವು ಎನಿಸಿಕೊಂಡಿದೆ.

ರೇಖಾ ಗುಪ್ತಾ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರೂ ಆಗಿದ್ದರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ರೇಖಾ ಗುಪ್ತ ಅವರ ಕಾರ್ಯ ವೈಖರಿ ಈ ಆರ್‌ಎಸ್‌ಎಸ್‌ ನಾಯಕರ ಮನ ಗೆದ್ದಿದೆ. ಜೊತೆಗೆ ದೆಹಲಿಯಲ್ಲಿ ಸುಭದ್ರ ಸರಕಾರವನ್ನು ನಡೆಸುತ್ತಾರೆ ಅನ್ನೋ ಕಾರಣದಿಂದಲೇ ರೇಖಾ ಗುಪ್ತ ಅವರಿಗೆ ಈ ಬಾರಿ ದೆಹಲಿಯ ಸಿಎಂ ಹುದ್ದೆ ದೊರಕಿದೆ.

Who is Rekha Gupta Chief Minister of Delhi? From ABVP to Delhi CM

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular