ಮಂಗಳವಾರ, ಏಪ್ರಿಲ್ 29, 2025
HomekarnatakaWomen Free Travel Bus : ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೂ ಟಿಕೆಟ್‌ ಕಡ್ಡಾಯ :...

Women Free Travel Bus : ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೂ ಟಿಕೆಟ್‌ ಕಡ್ಡಾಯ : ಹೇಗಿರಲಿದೆ ಗೊತ್ತಾ ಟಿಕೆಟ್‌ ?

- Advertisement -

ಬೆಂಗಳೂರು : Women Free Travel Bus: ರಾಜ್ಯದ ಕಾಂಗ್ರೆಸ್‌ ಸರಕಾರ ಮಹಿಳೆಯರಿಗೆ ರಾಜ್ಯದಾದ್ಯಂತ ಸರಕಾರಿ ಬಸ್ಸುಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಶಕ್ತಿ ಯೋಜನೆ ರಾಜ್ಯದಲ್ಲಿ ಜೂನ್‌ 11 ರಿಂದ ಜಾರಿಗೆ ಬರಲಿದೆ. ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣ ಬೆಳೆಸಬಹುದಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಬೆಳೆಸಲು ಮಹಿಳೆಯರು ಕಡ್ಡಾಯವಾಗಿ ಟಿಕೆಟ್‌ ಪಡೆಯಲೇ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಾದರಿ ಟಿಕೆಟ್‌ ಬಿಡುಗಡೆಯಾಗಿದೆ.

ಮಹಿಳೆಯರು ಬಸ್‌ ಹತ್ತಿದ ಕೂಡಲೇ ಕಂಡಕ್ಟರ್‌ ಬಳಿ ಟಿಕೆಟ್‌ ಕೇಳಿ ಪಡೆಯಲೇ ಬೇಕು. ಆದರೆ ಟಿಕೆಟ್‌ಗೆ ಯಾವುದೇ ಹಣವನ್ನು ನೀಡಬೇಕಾಗಿಲ್ಲ. ಬದಲಾಗಿ ಎಲ್ಲಿಂದ ಎಲ್ಲಿಗೆ ಪ್ತಯಾಣ ಬೆಳೆಸುತ್ತಿದ್ದೇವೆ ಎಅನ್ನೋ ಮಾಹಿತಿಯನ್ನು ನೀಡಿ ಟಿಕೆಟ್‌ ಪಡೆದುಕೊಳ್ಳಬಹುದಾಇದೆ. ಸಾರಿಗೆ ಇಲಾಖೆಗೆ ಎಷ್ಟು ಮಂದಿ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ ಅನ್ನೋ ಲೆಕ್ಕಾಚಾರವನ್ನು ಕಲೆಹಾಕುವ ನಿಟ್ಟಿನಲ್ಲಿ ಟಿಕೆಟ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಶಕ್ತಿ ಯೋಜನೆ ಘೋಷಣೆಯಾಗುತ್ತಿದ್ದಂತೆಯೇ ಮಹಿಳೆಯರಿಗೆ ಪಾಸ್‌ ನೀಡಲಾಗುತ್ತಾ ? ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಯಾವ ದಾಖಲೆ ತೋರಿಸಬೇಕು ? ಬಸ್‌ ಪ್ರಯಾಣಕ್ಕೆ ಟಿಕೆಟ್‌ ನೀಡಲಾಗುತ್ತಾ ? ಹೀಗೆ ನಾನಾ ರೀತಿಯ ಗೊಂದಲಗಳು ಏರ್ಪಟ್ಟಿದ್ದು, ಆದರೆ ಇದೀಗ ಸಾರಿಗೆ ಇಲಾಖೆ ಎಲ್ಲದ್ದಕ್ಕೂ ಸ್ಪಷ್ಟನೆಯನ್ನು ಕೊಟ್ಟಿದ್ದು, ಮಾದರಿ ಟಿಕೆಟ್‌ ಬಿಡುಗಡೆ ಮಾಡಿದೆ.

ರಾಜ್ಯದಾದ್ಯಂತ ರಾಜ್ಯದ ಮಹಿಳೆಯರಿಗೆ ಮಾತ್ರವೇ ರಾಜ್ಯ ಸರಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಉಚಿತ ಪ್ರಯಾಣದ ವೇಳೆಯಲ್ಲಿ ಆಧಾರ್‌ ಕಾರ್ಡ್‌ ಅಥವಾ ವೋಟರ್‌ ಐಡಿ ಅಥವಾ ರೇಷನ್‌ ಕಾರ್ಡ್‌ ದಾಖಲೆಯನ್ನು ನೀಡಬೇಕಾಗುತ್ತದೆ. ಬಿಪಿಎಲ್‌, ಎಪಿಎಲ್‌ ಕಾರ್ಡುದಾರರು, ಸರಕಾರಿ ನೌಕರರು ಸೇರಿದಂತೆ ಎಲ್ಲಾ ಮಹಿಳೆಯರು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕ ನಿಗಮದ ಬಸ್ಸುಗಳಲ್ಲಿ ಸಂಚರಿಸಲು ಮಹಿಳೆಯರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಸಾಮಾನ್ಯ ಬಸ್ಸುಗಳಲ್ಲಿ ಮಾತ್ರವೇ ಸಂಚರಿಸಲು ಅವಕಾಶ ನೀಡಲಾಗಿದ್ದು, ರಾಜಹಂಸ, ಎಸಿ ಹಾಗೂ ಲಕ್ಸುರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.

ದೆಹಲಿಯಲ್ಲಿ ಆಮ್‌ ಆದ್ಮಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಯೋಜನೆಯನ್ನು ಜಾರಿಗೆ ತಂದಿದೆ. ಎಲ್ಲಾ ಮಹಿಳೆಯರಿಗೆ ದೆಹಲಿಯಲ್ಲಿ ಪಿಂಕ್‌ ಟಿಕೆಟ್‌ ನೀಡಲಾಗುತ್ತಿದೆ. ಇನ್ನು ತಮಿಳುನಾಡಿನಲ್ಲಿಯೂ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಟಿಕೆಟ್‌ ವ್ಯವಸ್ಥೆ ಜಾರಿಯಲ್ಲಿದೆ ಆದ್ರೆ 30 ಕಿಮೀ. ವರೆಗೆ ಪ್ರಯಾಣಿಸಲು ಅವಕಾಶವಿದೆ.

ಸಾರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ನಿತ್ಯವೂ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ 82.52 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಅದರಲ್ಲಿ 41.25 ಲಕ್ಷ ಮಹಿಳೆಯರು ನಿತ್ಯವೂ ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಇನ್ನು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ 23.59 ಲಕ್ಷ, ಕೆಕೆಆರ್‌ಟಿಸಿ ಬಸ್ಸುಗಳಲ್ಲಿ 14.64 ಲಕ್ಷ, ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ಸುಗಳಲ್ಲಿ 16.94 ಲಕ್ಷ ಹಾಗೂ ಬಿಎಂಟಿಸಿ ಬಸ್ಸುಗಳಲ್ಲಿ 27.34 ಲಕ್ಷ ಮಂದಿ ನಿತ್ಯವೂ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸದ್ಯ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಒಟ್ಟು ನಿತ್ಯವೂ 23.31ಕೋಟಿ ರೂಪಾಯಿ ಆದಾಯ ದೊರೆಯುತ್ತಿದ್ದು, ಅಂತರ್‌ ಜಿಲ್ಲಾ ಹಾಗೂ ಅಂತರ್‌ ರಾಜ್ಯ ಬಸ್ಸುಗಳಿಂದಲೇ ಅತೀ ಹೆಚ್ಚು ಆದಾಯ ದೊರೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಒಟ್ಟು 8,946 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ : Free bus pass for women‌ : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು

ಇದನ್ನೂ ಓದಿ : Cooking oil price down‌ : ಗೃಹಿಣಿಯರಿಗೆ ಗುಡ್‌ನ್ಯೂಸ್‌ : ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 8 ರಿಂದ 12 ರೂ. ವರೆಗೆ ಇಳಿಕೆ

Women Free Travel Bus Karnataka Govt Shakti Scheme KSRTC and BMTC ticket Release

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular