ಭಾರತೀಯ ಟೆಲಿಕಾಂ ಲೋಕದಲ್ಲಿ ಬಾರೀ ಬದಲಾವಣೆಗಳು ನಡೆಯುತ್ತಿದೆ. ದೈತ್ಯ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸುತ್ತಿವೆ. ಜಿಯೋ, ಬಿಎಸ್‌ಎನ್ಎಲ್ ಕಂಪೆನಿಗಳು ಹೊಸ ಯೋಜನೆಗಳನ್ನು ಪರಿಚಯಿಸಿದ ಬೆನ್ನಲ್ಲೇ ಭಾರತದ ಮತ್ತೊಂದು ಟೆಲಿಕಾಂ ಕಂಪೆನಿ ಏರ್‌ಟೆಲ್ ಹೊಸ ರಿಚಾರ್ಜ್ ಘೋಷಿಸಿದ್ದು, ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ೬ ತಿಂಗಳವರೆಗೆ ರಿಚಾರ್ಜ್ ಮಾಡುವುದೇ ಬೇಡ. ಹಾಗಾದ್ರೆ ಈ ಯೋಜನೆ ಯಾವುದು ಅನ್ನೋ ಮಾಹಿತಿ ಇಲ್ಲಿದೆ.

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಏರ್‌ಟೆಲ್, ಜಿಯೋ, ಐಡಿಯಾ ವೊಡಾಪೋನ್, ಬಿಎಸ್‌ಎಸ್‌ಎನ್‌ಎಲ್ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪೆನಿಗಳು ರಿಚಾರ್ಜ್ ದರದಲ್ಲಿ ಏರಿಕೆ ಮಾಡಿದ್ದವು. ಆದ್ರೆ ಇದೀಗ ಒಂದೊಂದೆ ಕಂಪೆನಿಗಳು ದರ ಇಳಿಕೆಗೆ ಮುಂದಾಗಿದೆ. ಬಿಎಸ್‌ಎನ್ಎಲ್ ಭರ್ಜರಿ ಆಫರ್ ಘೋಷಿಸಿದ ಬೆನ್ನಲ್ಲೇ ಜಿಯೋ ಕೂಡ ಗ್ರಾಹಕರು ಭರ್ಜರಿ ಆಫರ್ ಕೊಟ್ಟಿತ್ತು. ಇದೀಗ ಏರ್‌ಟೆಲ್ ಸರದಿ.
ಇದನ್ನೂ ಓದಿ : BSNL ಬಂಪರ್ ಆಫರ್: ಕೇವಲ 397 ರೂ.ಗೆ 5 ತಿಂಗಳು ಅನಿಯಮಿತ ಡೇಟಾ, ಕರೆ
ಬಿಎಸ್‌ಎನ್‌ಎಲ್ ಪುನಸ್ಚೇತನಕ್ಕೆ ಟಾಟಾ ಕಂಪೆನಿ ಕೈ ಜೋಡಿಸಿದ ಬೆನ್ನಲ್ಲೇ ಸಾಕಷ್ಟು ಗ್ರಾಹಕರು ಬಿಎಸ್ಎನ್ಎಲ್‌ಗೆ ಪೋರ್ಟ್ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಉಳಿದ ಖಾಸಗಿ ಟೆಲಿಕಾಂ ಕಂಪೆನಿಗಳು ಎಚ್ಚೆತ್ತುಕೊಂಡಿದ್ದು, ಈ ಹಿಂದೆ ಜಾರಿಯಲ್ಲಿದ್ದ ಯೋಜನೆಗಿಂತಲೂ ಕಡಿಮೆ ದರದಲ್ಲಿ ಫ್ಲ್ಯಾನ್‌ಗಳನ್ನು ನೀಡಲು ಮುಂದಾಗಿವೆ.
ಏರ್‌ಟೆಲ್ ಯೋಜನೆ ರೂ.155:
ಏರ್‌ಟೆಲ್ ರೂ.155 ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದು 28 ದಿನಗಳ ಅವಧಿಯ ಮಾನ್ಯತೆ ಹೊಂದಿದ್ದು, ಅನಿಯಮಿತ ಕರೆಯ ಸೌಕರ್ಯ ಒಳಗೊಂಡಿದೆ. ಅಲ್ಲದೇ ದಿನಕ್ಕೆ 100 SMS ಸೌಲಭ್ಯ ಪಡೆಯಬಹುದಾಗಿದೆ. ಆದರೆ ಗ್ರಾಹಕರು ಅನಿಯಮಿತ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.
ಏರ್‌ಟೆಲ್ ಕೂಡ ದೀರ್ಘಾವಧಿಯ ವ್ಯಾಲಿಡಿಟಿಯ ಯೋಜನೆಯನ್ನು ಪ್ರಕಟಿಸಿದೆ.ಈ ಯೋಜನೆಯ ಅಡಿಯಲ್ಲಿ ನೀವು 180 ದಿನಗಳು 6 ತಿಂಗಳವರೆಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. 999 ರೀಚಾರ್ಜ್ ಮಾಡಿದ್ರೆ ನಿಮಗೆ ದೀರ್ಘಾವಧಿಯ ವರೆಗೆ ಅನಿಯಮಿತ ಡೇಟಾ, ಕರೆಯ ಸೌಲಭ್ಯ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ : Jiophone Prima 2: ಕೇವಲ 2799ರೂ.ಗೆ ಸಿಗಲಿದೆ 4G ಮೊಬೈಲ್
ಏರ್‌ಟೆಲ್‌ನಂತೆಯೇ ಜಿಯೋ ಕೂಡ ಗ್ರಾಹಕರ ಸ್ನೇಹಿ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ ಫೋನ್ ಪ್ರೈಮ್ ಬಳಕೆದಾರರಿಗೆ ವಿಶೇಷ ಯೋಜನೆ ರೂಪಿಸಿದೆ. ಜಿಯೋ ಬಳಕೆದಾರರು ಈಗ 28 ದಿನಗಳವರೆಗೆ ಉಚಿತ ಅನಿಯಮಿತ ಕರೆಗಳನ್ನು ಪಡೆಯಬಹುದು ಮತ್ತು ರೂ.223 ಗೆ ರೀಚಾರ್ಜ್ ಮಾಡುವ ಮೂಲಕ ದಿನಕ್ಕೆ 2 GB ಡೇಟಾ ದರದಲ್ಲಿ ಒಟ್ಟು 56 GB ಡೇಟಾವನ್ನು ಪಡೆಯಬಹುದು. ರೂ.250 ರೀಚಾರ್ಜ್‌ನೊಂದಿಗೆ 30 ದಿನಗಳವರೆಗೆ ಅನಿಯಮಿತ ಕರೆಗಳು ಮತ್ತು ಅನಿಯಮಿತ ಡೇಟಾವನ್ನು ಪಡೆಯಬಹುದಾಗಿದೆ.
ಈ ರೀಚಾರ್ಜ್ ಯೋಜನೆಗಳು ದಿನಕ್ಕೆ 100 SMS ಸೌಲಭ್ಯವನ್ನು ಹೊಂದಿವೆ. ಈ ಯೋಜನೆಯ ಮೂಲಕ, ಬಳಕೆದಾರರಿಗೆ ಜಿಯೋ ಸಿನಿಮಾಗೆ ಪ್ರವೇಶವನ್ನು ಸಹ ನೀಡಲಾಗುತ್ತದೆ. ಇದು OTT ಸ್ಟ್ರೀಮಿಂಗ್ ಶುಲ್ಕವನ್ನು ಉಳಿಸುತ್ತದೆ. ಇಷ್ಟೇ ಅಲ್ಲದೇ ಜಿಯೋ ಟಿವಿ, ಜಿಯೋ ಕ್ಲೌಡ್ ಉಚಿತ ಸದಸ್ಯತ್ವ ಪಡೆಯುವ ಮೂಲಕ ಉಚಿತವಾಗಿ ರಿಯಾಲಿಟಿ ಶೋ ಹಾಗೂ ಚಲನಚಿತ್ರಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಆದರೆ ರೂ.223 ಯೋಜನೆಯು ಜಿಯೋ ಫೋನ್ ಪ್ರೈಮಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ಗಮನಿಸಿ. ಇದು ಸ್ಮಾರ್ಟ್ಫೋನ್ ಬಳಕೆದಾರರಿಗೆ ಅಲ್ಲ.

- ಬೇಸಿಕ್ ಪ್ಲ್ಯಾನ್ :
ರೂ.149 ರಿಂದ ಪ್ರಾರಂಭವಾಗುವ ಯೋಜನೆಗಳು ಅಲ್ಪಾವಧಿ ಮತ್ತು ಡೇಟಾಕ್ಕಾಗಿ ಮೂಲಭೂತ ಅಗತ್ಯಗಳನ್ನು ಒಳಗೊಂಡಿರುತ್ತವೆ.
ದಿನಕ್ಕೆ 1.5 GB ಅಥವಾ 2 GB ಡೇಟಾ.
- ಮಧ್ಯಮ ಡೇಟಾ ಯೋಜನೆಗಳು:
ರೂ.399 ರಿಂದ ರೂ.599 ರವರೆಗಿನ ಯೋಜನೆಗಳು.
1.5 GB ಡೇಟಾ ಬಳಕೆ.
ಉಚಿತ ಕರೆಗಳು, ದಿನಕ್ಕೆ 100 SMS.
- ಹೆಚ್ಚಿನ ಡೇಟಾ ಯೋಜನೆಗಳು:
ರೂ.999 ರಿಂದ ಪ್ರಾರಂಭವಾಗುವ ಯೋಜನೆಗಳು.
ದಿನಕ್ಕೆ 3 GB ಅಥವಾ ಹೆಚ್ಚಿನ ಡೇಟಾ ಬಳಕೆ.
ಹೆಚ್ಚು ಇಂಟರ್ನೆಟ್ ಬಳಕೆಗಾಗಿ ಉತ್ತಮ ಯೋಜನೆಗಳು.
- ವಾರ್ಷಿಕ ಯೋಜನೆಗಳು:
ರೂ.2,879 ಅಥವಾ ಹೆಚ್ಚು.
ಪ್ರತೀ ದಿನವೊಂದಕ್ಕೆ 2 GB- 3 GB ವರೆಗೆ ಡೇಟಾ ಬಳಕೆ.
365 ದಿನಗಳ ಸೇವೆಗಳೊಂದಿಗೆ, ದೀರ್ಘಾವಧಿಯ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ.
- ಅನಿಯಮಿತ ಯೋಜನೆಗಳು:
ರೂ.2399 ಯೋಜನೆ.
2 GB ಗಿಂತಲೂ ಅಧಿಕ ಡೇಟಾ ಸೌಲಭ್ಯ.
ಅನಿಯಮಿತ ಉಚಿತ ಕರೆಗಳು, ಗರಿಷ್ಠ ಪ್ರಯೋಜನಗಳು. ಜಿಯೋ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಅನುಭವಗಳನ್ನು ಒದಗಿಸಲು ಅತ್ಯಾಧುನಿಕ ಡಿಜಿಟಲ್ ಸೇವೆಗಳು, ಹೆಚ್ಚುವರಿ ಡೇಟಾ ಮತ್ತು ಉತ್ತೇಜಕ ಕೊಡುಗೆಗಳೊಂದಿಗೆ ತನ್ನ ರೀಚಾರ್ಜ್ ಯೋಜನೆಗಳನ್ನು ಆಗಾಗ್ಗೆ ನವೀಕರಿಸುತ್ತದೆ.
Airtel Big Offer: Customers don’t need to recharge for 6 months..!