Jio Vs Airtel Recharge Plan : ಏರ್‌ಟೆಲ್ ( Airtel) ಹಾಗೂ ಜಿಯೋ (Jio) ಟೆಲಿಕಾಂ ಕಂಪೆನಿಗಳು ಭಾರತದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿವೆ. ಅನಿಯಮಿತ ಡೇಟಾ ಫ್ಲ್ಯಾನ್ (Unlimited Data Plan) ಜೊತೆಗೆ ಉಚಿತ ಕರೆ ಸೌಲಭ್ಯವನ್ನು ನೀಡುತ್ತಿವೆ. ಏರ್‌ಟೆಲ್ ಹಾಗೂ ಜಿಯೋ ಕಂಪೆನಿಗಳು ಸಾಕಷ್ಟು ಅನಿಯಮಿತ ರಿಚಾರ್ಜ್ ಫ್ಲ್ಯಾನ್‌ಗಳನ್ನು (Recharge Plan) ಪರಿಚಯಿಸುತ್ತಿವೆ. ಹಾಗಾದ್ರೆ ಈ ಎರಡೂ ಕಂಪೆನಿಗಳಲ್ಲಿ ಯಾವ ಯೋಜನೆ ಬೆಸ್ಟ್ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

JIO Recharge : 179 ರೂ. ರಿಚಾರ್ಜ್ ಫ್ಲ್ಯಾನ್
ಜಿಯೋ ಕಂಪೆನಿಯು ತನ್ನ ಗ್ರಾಹಕರಿಗಾಗಿ 179 ರೂಪಾಯಿಯ ರಿಚಾರ್ಜ್ ಫ್ಲ್ಯಾನ್ ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಪ್ರತೀ ದಿನ 1 ಜಿಬಿ ಡೇಟಾ ಜೊತೆಗೆ, ಉಚಿತ ಕರೆ ಹಾಗೂ ದಿನಕ್ಕೆ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಜೊತೆಗೆ 24 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತಿದೆ.
ಇನ್ನು ಜಿಯೋ 239 ರೂಪಾಯಿಯ ರಿಚಾರ್ಜ್ ಫ್ಲ್ಯಾನ್ ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ದಿನಕ್ಕೆ 1.5 ಜಿಬಿ ಡೇಟಾ, ಉಚಿತ ಕರೆ ಹಾಗೂ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಎರಡೂ ಯೋಜನೆಗಳ ವ್ಯಾಲಿಡಿಟಿ 24 ದಿನಗಳು ಆಗಿರುತ್ತದೆ.
ಇನ್ನು ದಿನಕ್ಕೆ 1.5 ಜಿಬಿ ಡೇಟಾ ಬಯಸುವವರು 199 ರೂಪಾಯಿ ರಿಚಾರ್ಜ್ ಫ್ಲ್ಯಾನ್ ಖರೀದಿಸಬಹುದು. ಅಲ್ಲದೇ ದಿನಕ್ಕೆ 2 ಜಿಬಿ ಡೇಟಾ ಅವಶ್ಯಕತೆ ಇರುವವರು 249 ರೂಪಾಯಿಯ ರಿಚಾರ್ಜ್ ಫ್ಲ್ಯಾನ್ ಬಳಕೆ ಮಾಡಬಹುದಾಗಿದೆ. ಈ ಎರಡೂ ಯೋಜನೆಗಳಲ್ಲಿ ಉಚಿತ ಅನಿಯಮಿತ ಕರೆ ಜೊತೆಗೆ ಎಸ್‌ಎಂಎಸ್ ಸೌಲಭ್ಯವನ್ನು ಒಗಿಸುತ್ತಿದೆ.
ಇದನ್ನೂ ಓದಿ : ಮೊಟೊರೊಲಾ ಕಂಪೆನಿಯ Moto G Power 5G, Moto G 5G ಬಿಡುಗಡೆ ಬೆಲೆ ಎಷ್ಟು ? ಏನಿದರ ವೈಶಿಷ್ಟ್ಯ
Airtel Recharge Plan : 179 ರಿಚಾರ್ಜ್ ಫ್ಲ್ಯಾನ್
ಜಿಯೋಗೆ ಹೋಲಿಕೆ ಮಾಡಿದ್ರೆ ಏರ್‌ಟೆಲ್ ಕೂಡ 179 ರೂಪಾಯಿಯ ರಿಚಾರ್ಜ್ ಫ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಜಿಯೋಕ್ಕಿಂತ ಹೆಚ್ಚುವರಿ ನಾಲ್ಕು ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. 28 ದಿನಗಳ ವ್ಯಾಲಿಡಿಟಿಯ ಜೊತೆಗೆ 2 ಜಿಬಿ ಡೇಟಾ ಲಭ್ಯವಿರಲಿದೆ.

ಇದನ್ನೂ ಓದಿ : Mobile Users Alert … ! ಈ ಸೆಟ್ಟಿಂಗ್ ಬದಲಾಯಿಸದೇ ಇದ್ರೆ ನಿಮ್ಮ ಮೊಬೈಲ್ ಹ್ಯಾಕ್ ಆಗೋದು ಪಕ್ಕಾ ..!
ಇನ್ನು 239 ರೂಪಾಯಿಯ ರಿಚಾರ್ಜ್ ಫ್ಲ್ಯಾನ್‌ನಲ್ಲಿ ದಿನಕ್ಕೆ 1 ಜಿಬಿ ಡೇಟಾ, ದಿನಕ್ಕೆ 100 ಎಸ್‌ಎಂಎಸ್, ಜೊತೆಗೆ 24 ದಿನಗಳ ವ್ಯಾಲಿಡಿಟಿ ದೊರೆಯಲಿದೆ. ಜಿಯೋಗೆ ಹೋಲಿಕೆ ಮಾಡಿದ್ರೆ ಏರ್‌ಟೆಲ್‌ನ ಆರಂಭಿಕ ಯೋಜನೆಯಲ್ಲಿ ಕೇವಲ 2 ಜಿಬಿ ಡೇಟಾ ದೊರೆಯಲಿದೆ. ಆದರೆ ಜಿಯೋ 24 ದಿನಗಳಿಗೆ 24 ಜಿಬಿ ಡೇಟಾವನ್ನು ನೀಡಲಿದೆ. ಅಲ್ಲದೇ 239 ರೂಪಾಯಿ ಯೋಜನೆಯಲ್ಲಿಯೂ ಏರ್‌ಟೆಲ್ 24 ಜಿಬಿ ಡೇಟಾವನ್ನು ನೀಡುತ್ತಿದ್ರೆ, ಜಿಯೋ 42 ಜಿಬಿ ಡೇಟಾವನ್ನು ಒದಗಿಸಲಿದೆ.
Airtel Vs Jio Recharge: Free Calling, Unlimited Data, Which is Best