ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೇವಲ 397ರೂ.ಗಳಿಗೆ 5 ತಿಂಗಳ ಅನಿಯಮಿತ ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಘೋಷಿಸಿದೆ. ಬಿಎಸ್‌ಎನ್‌ಎಲ್ ಘೋಷಣೆ ಮಾಡಿರುವ ಹೊಸ ರಿಚಾರ್ಜ್ ಫ್ಲ್ಯಾನ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ, ಏರ್‌ಟೆಲ್, VI ಟೆಲಿಕಾಂ ಸೇವಾ ಕಂಪೆನಿಗಳು ಈಗಾಗಲೇ ಗ್ರಾಹಕರಿಗೆ ಅನಿಯಮಿತ ಕರೆಗಳು, ಡೇಟಾ ಮತ್ತು ಇತರ ಕೊಡುಗೆಗಳನ್ನು ಘೋಷಿಸಿದ್ದಾರೆ. ಇದೀಗ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಸಡ್ಡು ಹೊಡೆಯಲು ಬಿಎಸ್‌ಎನ್‌ಎಲ್ ಮುಂದಾಗಿದೆ. ಇದೇ ಕಾರಣದಿಂದಲೇ ಭರ್ಜರಿ ಆಫರ್ ಘೋಷಣೆ ಮಾಡಿದೆ.
ಕೇವಲ 397 ರೂಪಾಯಿಗೆ 150 ದಿನ ಅಂದರೆ 5 ತಿಂಗಳ ವ್ಯಾಲಿಡಿಟಿಯನ್ನು ನೀಡಿದೆ. ಇಷ್ಟೇ ಅಲ್ಲ ಅನಿಯಮಿತ ಕರೆಗಳು ಮತ್ತು ಡೇಟಾ ಆಫರ್ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. BSNL ಘೋಷಿಸಿರುವ ರೂ.397 ಯೋಜನೆಯಲ್ಲಿ ಹಲವು ವಿಶೇಷತೆಗಳಿವೆ. ಮುಖ್ಯವಾಗಿ, BSNL ಸಿಮ್ ಅನ್ನು ಎರಡನೇ ಸಿಮ್ ಆಗಿ ಬಳಸುತ್ತಿರುವ ಗ್ರಾಹಕರಿಗೆ ಈ ಯೋಜನೆಯನ್ನು ನೀಡಲಾಗುತ್ತದೆ.
ಇದನ್ನೂ ಓದಿ : ಟ್ರಾಯ್‌ನಿಂದ ಹೊಸ ರೂಲ್ಸ್ : 59 ಸಾವಿರ SIM Card ರದ್ದು ! ನೀವೂ ಮಾಡಬೇಡಿ ಈ ತಪ್ಪು
ಈ ಯೋಜನೆಯನ್ನು ರೀಚಾರ್ಜ್ ಮಾಡಿದರೆ, ಗ್ರಾಹಕರು ಮೊದಲ 30 ದಿನಗಳವರೆಗೆ ಅನಿಯಮಿತ ಕರೆಗಳನ್ನು ಪಡೆಯುತ್ತಾರೆ. ಆರಂಭಿಕ 30 ದಿನಗಳವರೆಗೆ ನೀವು ದಿನಕ್ಕೆ 2 GB ಯಂತೆ 60 GB ಡೇಟಾವನ್ನು ಪಡೆಯುತ್ತೀರಿ. ಆರಂಭಿಕ 30 ದಿನಗಳವರೆಗೆ ದಿನಕ್ಕೆ 100 SMS ಉಚಿತವಾಗಿರುತ್ತದೆ. ದೇಶಾದ್ಯಂತ 150 ದಿನಗಳವರೆಗೆ ರೋಮಿಂಗ್ ಶುಲ್ಕವಿಲ್ಲ. 150 ದಿನಗಳ ಮಾನ್ಯತೆಯಿಂದಾಗಿ, ಒಳಬರುವ ಕರೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಅನಿಯಮಿತ ಕರೆಗಳ ಅವಧಿ ಮುಗಿದ ನಂತರ, ಟಾಪ್-ಅಪ್ ಅನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ.

ಡೇಟಾ ರೀಚಾರ್ಜ್‌ಗೂ ಇದು ಅನ್ವಯಿಸುತ್ತದೆ. ಐದು ತಿಂಗಳಿಗೆ 397 ರೂಪಾಯಿ ರೀಚಾರ್ಜ್ ಮಾಡಿದರೆ ತಿಂಗಳಿಗೆ ಸರಾಸರಿ 80 ರೂಪಾಯಿ ರೀಚಾರ್ಜ್ ಆಗುತ್ತದೆ. ಇದು ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಅಗ್ಗದ ರೀಚಾರ್ಜ್ ಯೋಜನೆಯಾಗಿದೆ. BSNL ಈಗಾಗಲೇ 4G ಸೇವೆಯನ್ನು ಜಾರಿಗೆ ತಂದಿದೆ. ಖಾಸಗಿ ಕಂಪನಿಗಳ ಪೈಪೋಟಿಯಿಂದಾಗಿ ಬಿಎಸ್ ಎನ್ ಎಲ್ ಗೆ ಹೊಸ ಕಾಯಕಲ್ಪ ಸಿಕ್ಕಿದೆ.
ಇದನ್ನೂ ಓದಿ : ಹೊಸ ರೂಲ್ಸ್ : ಅತೀ ಹೆಚ್ಚು ಸಿಮ್ ಹೊಂದಿದ್ರೆ 3 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ
ಕೇಂದ್ರ ಸರ್ಕಾರ ಭಾರಿ ಹೂಡಿಕೆ ಮಾಡಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟೆಲಿಕಾಂ ಸೇವೆಯನ್ನು ಬದಲಾಯಿಸಿದೆ. ಇದೀಗ 5ಜಿ ಸೇವೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕೆಲವು ವಿಶೇಷ ಕೊಡುಗೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಇದನ್ನೂ ಓದಿ : Jio offer : ರಿಲಯನ್ಸ್ ಜಿಯೋ ಬಂಪರ್ ಆಫರ್ : ಕೇವಲ ರೂ 75 ಅನ್‌ಲಿಮಿಟೆಡ್ ರಿಚಾರ್ಜ್
BSNL Bumper Offer 5 months unlimited data, calls for just Rs 397