Desh Bhakti ‘Offer’ :ಭಾರತ ಹಾಗೂ ಚೀನಾ ನಡುವೆ ಗಡಿ ಮಾತ್ರವಲ್ಲದೇ ಅನೇಕ ವಿಚಾರಗಳಲ್ಲಿ ಬಿಕ್ಕಟ್ಟು ಇದೆ. ಭಾರತ ಎಷ್ಟೇ ತಾಳ್ಮೆಯಿಂದ ವರ್ತಿಸಿದರೂ ಚೀನಾ ಒಂದಿಲ್ಲೊಂದು ರೀತಿಯಲ್ಲಿ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಲೇ ಇರುತ್ತದೆ. ಹೀಗಾಗಿ ಚೀನಾದ ಪ್ರಾಡಕ್ಟ್ಗಳಿಗೆ ನಿರ್ಬಂಧ ಹೇರುವ ಮೂಲಕ ಅದಕ್ಕೆ ಸರಿಯಾದ ಪಾಠ ಕಲಿಸಬೇಕು ಎಂಬ ಕೂಗು ಸಹ ಹಲವು ಬಾರಿ ಕೇಳಿ ಬಂದಿದೆ. ಇದೇ ಕಾರಣಕ್ಕೆ ಅನೇಕರು ಸ್ವದೇಶಿ ನಿರ್ಮಿತ ವಸ್ತುಗಳನ್ನೇ ಬಳಕೆ ಮಾಡಲು ಆರಂಭಿಸಿದ್ದಾರೆ.
ಆದರೆ ಮೊಬೈಲ್ಗಳ ವಿಚಾರಕ್ಕೆ ಬಂದರೆ ಕಡಿಮೆ ದರದಲ್ಲಿ ಹೆಚ್ಚಿನ ಸೌಕರ್ಯ ನೀಡುವುದು ಚೀನಾ ಕಂಪನಿಯ ಮೊಬೈಲ್ಗಳು. ಹೀಗಾಗಿ ಇದೊಂದು ವಿಚಾರದಲ್ಲಿ ಮಾತ್ರ ಭಾರತೀಯರಿಗೆ ಸ್ವದೇಶಿ ವಸ್ತುಗಳಿಗೆ ಮೊರೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ ಈ ಸಮಸ್ಯೆಗೂ ಇದೀಗ ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ಲಾವಾ ಪರಿಹಾರವೊಂದನ್ನು ಕಂಡು ಹಿಡಿದಿದೆ.
‘ದೇಶ ಭಕ್ತಿ’ಯ ಅಸ್ತ್ರವನ್ನು ಬಳಸಿ ತನ್ನ ಕಂಪನಿಯ ಲಾವಾ ಅಗ್ನಿ ಫೈವ್ ಜಿ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಚೀನಾ ಮೊಬೈಲ್ ಕಂಪನಿಯ ನಿರ್ದಿಷ್ಟ ಬ್ರ್ಯಾಂಡ್ನ ಸ್ಮಾರ್ಟ್ ಫೋನ್ ಹೊಂದಿರುವವರು ಉಚಿತವಾಗಿಯೇ ತಮ್ಮ ಈ ಚೀನಾ ಫೋನ್ಗಳನ್ನು ಲಾವಾ ಅಗ್ನಿ 5ಜಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದೊಂದು ಹೊಸ ರೀತಿಯ ಮಾರ್ಕೆಟಿಂಗ್ ವಿಧಾನವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.
ಹೌದು..! ನೀವು ಉಚಿತವಾಗಿ ಲಾವಾ 5 ಜಿ ಸ್ಮಾರ್ಟ್ಫೋನ್ ಪಡೆಯಬೇಕು ಅಂತಿದ್ದರೆ ಇದಕ್ಕಾಗಿ ನಿಮ್ಮ ಬಳಿ ಒಂದು ನಿರ್ದಿಷ್ಟವಾದ ಸ್ಮಾರ್ಟ್ಫೋನ್ ಇರಬೇಕು. ರಿಯಲ್ ಮಿ ಕಂಪನಿಯ ರಿಯಲ್ ಮೀ 8 ಎಸ್ ಸ್ಮಾರ್ಟ್ಫೋನ್ ಹೊಂದಿರುವವರಿಗೆ ಲಾವಾ ಅಗ್ನಿ 5 ಜಿ ಮೊಬೈಲ್ ಫೋನ್ ಉಚಿತ ವಿನಿಮಯಕ್ಕೆ ಸಿಗಲಿದೆ. ಇದಕ್ಕಾಗಿ ನೀವು ಲಾವಾ ಮೊಬೈಲ್ಸ್ನಲ್ಲಿ ಜನವರಿ 7 ನೇ ತಾರೀಖಿನ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು.
ಭಾರತದ ಮೊದಲ 5ಜಿ ಸ್ಮಾರ್ಟ್ ಫೋನ್ ಎಂದು ಹೇಳಿಕೊಂಡಿರುವ ಲಾವಾ ಕಂಪನಿಯು ಭಾರತ ನನ್ನ ದೇಶ. ಆದರೆ ನನ್ನ ಸ್ಮಾರ್ಟ್ ಫೋನ್ ಚೈನೀಸ್ ಆಗಿದೆ ಎಂದ ಘೋಷ ವಾಕ್ಯದ ಮೂಲಕ ಈ ರೀತಿ ಸ್ಮಾರ್ಟ್ ಫೋನ್ ವಿನಿಮಯಕ್ಕೆ ಮುಂದಾಗಿದೆ.
ಮ್ಯಾಟ್ ಫಿನಿಶ್ ಅನ್ನು ಹೊಂದಿರುವ ಲಾವಾ ಅಗ್ನಿ 5ಜಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಯಿಂದ 8GB RAM ಮತ್ತು 128GB ಮೆಮೊರಿ ಹೊಂದಿದೆ. ಇದರಲ್ಲಿ ನೀವು 256 ಜಿಬಿಯವೆರೆಗೆ ಹೆಚ್ಚುವರಿ ಸಂಗ್ರಹಣೆಯನ್ನೂ ಮಾಡಬಹುದು. 6.78-ಇಂಚಿನ ಪೂರ್ಣ-HD+ ಡಿಸ್ಪ್ಲೇಯ ಹಾಗೂ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.
Desh Bhakti ‘Offer’: This Indian Mobile Brand Will Replace Your ‘Chinese Phone’ For Free
ಇದನ್ನೂ ಓದಿ : Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ