ನವದೆಹಲಿ : ಡಿಜಿಟಲ್ ಪೇಮೆಂಟ್ಗಳ ದೈತ್ಯ ವೀಸಾ ಹಾಗೂ ಇನ್ನೋವಿಟಿ ಪೇಮೆಂಟ್ ಸೊಲ್ಯೂಷನ್ಸ್ ಭಾರತದಲ್ಲಿ ಆಫ್ಲೈನ್ ಪಾವತಿಗಳಿಗೆ ಅವಕಾಶ ಒದಗಿಸುವ ಸಲುವಾಗಿ ಪಿಓಸಿ ಚಾಲನೆ ಮಾಡಲು ಪಾಲುದಾರಿಕೆ ಮಾಡಿಕೊಂಡಿದೆ. ಯಸ್ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಪಿಓಸಿಯನ್ನು ಕಾರ್ಯಗತಗೊಳಿಸಲಾಗಿದೆ.
ಆಫ್ಲೈನ್ ಪೇಮೆಂಟ್ ಟೆಕ್ನಾಲಜಿಯಿಂದ ಗ್ರಾಮೀಣ ಭಾಗಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಡಿಜಿಟಲ್ ಪಾವತಿಗಳ ವ್ಯಾಪ್ತಿಯನ್ನು ಸುಧಾರಿಸಲಿದೆ. ಚಿಪ್ ಆಧಾರಿತ ವೀಸಾ ಡೆಬಿಟ್, ಕ್ರೆಡಿಟ್ ಹಾಗೂ ಪ್ರೀಪೇಯ್ಡ್ ಕಾರ್ಡ್ಗಳ ಮೂಲಕ ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಹಣ ಪಾವತಿ ಮಾಡಬಹುದಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲು ಆರ್ಥಿಕತೆಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಶಾಪಿಂಗ್ ಪ್ರಿಯರಿಗೆ ಬಿಗ್ ಶಾಕ್ : ಶಾಪಿಂಗ್ ಮಾಡಲು ಪಾನ್ ಜೊತೆ ಆಧಾರ್ ಲಿಂಕ್ ಕಡ್ಡಾಯ
ಇಂಟರ್ನೆಟ್ ಸಂಪರ್ಕದ ವಿಚಾರದಲ್ಲಿ ಭಾರತದ ಗ್ರಾಮೀಣ ಭಾಗಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತದೆ. ಇಂಟರ್ನೆಟ್ ಸಮಸ್ಯೆಯಿಂದಾಗಿ ದೇಶದ ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ಪಾವತಿಗಳನ್ನು ನಂಬಿಕೊಂಡು ಕೂರಲು ಸಾಧ್ಯವೇ ಇಲ್ಲ. ಆದರೆ ಈ ಆಫ್ಲೈನ್ ಪಾವತಿ ತಂತ್ರಜ್ಞಾನವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ನಿಲ್ಲಲಿದೆ ಎಂಬ ನಂಬಿಕೆ ಇದೆ. ಆಫ್ಲೈನ್ ಡಿಜಿಟಲ್ ಪಾವತಿಯ ಮೂಲಕ ವ್ಯಾಪಾರಿಗಳು ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಇನ್ನೋವಿಟಿ ಹೇಳಿಕೆ ನೀಡಿದೆ.
ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್ ಕೊಟ್ಟ ಗ್ಯಾಸ್ ದರ : 15 ದಿನದಲ್ಲಿ 50 ರೂಪಾಯಿ ಹೆಚ್ಚಳ
ಹೊಸ ವೀಸಾ ಡೆಬಿಟ್ ಕಾರ್ಡ್ನಲ್ಲಿರುವ ಚಿಪ್ ದೈನಂದಿನ ಖರ್ಚು ಮಿತಿಯ 2000 ರೂಪಾಯಿ ಸಂಗ್ರಹಣಾ ಮೌಲ್ಯವನ್ನು ಹೊಂದಿರುತ್ತದೆ. ಆರ್ಬಿಐನ ನಿರ್ದೇಶನದಂತೆ ಪ್ರತಿ ವಹಿವಾಟು ಮಿತಿಯು 200 ರೂಪಾಯಿ ಆಗಿದೆ. ಇ ವ್ಯಾಲೆಟ್ಗಳಲ್ಲಿ ಮೊದಲೇ ಹಣವನ್ನು ಲೋಡ್ ಮಾಡಿದ ರೀತಿಯಲ್ಲೇ ಇದು ಕಾರ್ಯ ನಿರ್ವಹಿಸುತ್ತದೆ. ಚಿಪ್ನಲ್ಲಿ ಹಣ ಇಲ್ಲದೇ ಇದ್ದಾಗ ಪಾವತಿ ರದ್ದಾಗುತ್ತದೆ. ಪಾವತಿ ಅಡಚಣೆಯ ಸಮಸ್ಯೆಯಿಂದ ಪಾರಾಗುವ ಮೂಲಕ ವ್ಯಾಪಾರಿಗಳು ಕೂಡ ಗ್ರಾಹಕರನ್ನು ಕಳೆದುಕೊಳ್ಳುವ ಪ್ರಮೇಯ ಇರುವುದಿಲ್ಲ. ಗ್ರಾಹಕರಿಗೂ ಕೂಡ ಎಟಿಎಂ ಅಲೆಯಬೇಕು ಎಂಬ ಸಮಸ್ಯೆ ಕೂಡ ಇರೋದಿಲ್ಲ.
(Digital payment can be done without Internet : Do you know how?)