ಇಂದಿನ ಮಾಡರ್ನ್ ಯುಗದಲ್ಲಿ ಮೊಬೈಲ್ ಇಲ್ಲದವರ ಸಂಖ್ಯೆ ತೀರಾನೆ ಕಡಿಮೆ. ಡಿಜಿಟಲೀಕರಣದಿಂದಾಗಿ ಮಕ್ಕಳ ಕೈಯಲ್ಲೂ ಮೊಬೈಲ್ ಓಡಾಡುತ್ತಿದೆ. ಆದರೆ ಮೊಬೈಲ್ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಪೋನ್ ನಾನಾ ಕಾರಣಗಳಿಂದ ಬ್ಲಾಸ್ಟ್ ಆಗುತ್ತಿದೆ. ಒಂದೊಂದು ಸಂದರ್ಭದಲ್ಲಿ ಒಂದೊಂದು ಕಾರಣಗಳು ಪತ್ತೆಯಾಗುತ್ತಿದೆ. ಆದರೆ ನಾವು ಮಾಡುವ ಸಣ್ಣ ತಪ್ಪುಗಳೇ ಇಂದು ಭಾರೀ ಅನಾಹುತವನ್ನು ಸೃಷ್ಟಿಸುತ್ತಿದೆ. ಅದ್ರಲ್ಲೂ ನೀವು ತಪ್ಪಿಯೂ ಹೀಗೆ ಮಾಡಬೇಡಿ. ಹೀಗೆ ಮಾಡಿದ್ದೇ ಆದ್ರೆ ನಿಮ್ಮ ಮೊಬೈಲ್ ಬ್ಲಾಸ್ಟ್ ಆಗೋದು ಗ್ಯಾರಂಟಿ. ಅಷ್ಟಕ್ಕೂ ಮೊಬೈಲ್ ಬ್ಲಾಸ್ಟ್ ಆಗೋ ಕಾರಣಗಳು ಯಾವುವು ಗೊತ್ತಾ..?

ಮೊಬೈಲ್ ಪೋನ್ ಚಾರ್ಜ್ ಮಾಡೋದಕ್ಕೆ ಬಳಕೆ ಮಾಡುವ ಜಾರ್ಜರ್ ಗಳು ಒಂದೇ ರೀತಿಯದ್ದಾಗುತ್ತದೆ. ಆದರೆ ಅದರಲ್ಲಿ ಅಳವಡಿಸಿರುವ ವ್ಯಾಟ್ಸ್ ನಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತದೆ. ಇಂದಿನ ದಿನಗಳಲ್ಲಿ ಫಾಸ್ಟ್ ಜಾರ್ಜರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಒಂದೊಮ್ಮೆ ಚಾರ್ಜರ್ ಕೆಟ್ಟು ಹೋದಾಗ ಒರಿಜಿನಲ್ ಜಾರ್ಜರ್ ಬದಲು ಹಣ ಉಳಿತಾದ ಸಲುವಾಗಿ ಕಳಪೆ ಗುಣಮಟ್ಟದ ಚಾರ್ಜ್ ಬಳಕೆ ಮಾಡುವುದರಿಂದ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತದೆ. ನಂತರ ಕ್ರಮೇಣ ಬ್ಯಾಟರಿ ಬ್ಲಾಸ್ಟರ್ ಆಗುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಮೊಬೈಲ್ ನಲ್ಲಿರುವ ಬ್ಯಾಟರಿ ಅತೀಯಾದ ಬಿಸಿಗೆ ಒಳಪಟ್ಟಾಗ ಬ್ಲಾಸ್ಟ್ ಆಗೋದು ಸರ್ವೇ ಸಾಮಾನ್ಯ. ಬಹುತೇಕ ಸಂದರ್ಭಗಳಲ್ಲಿ ನಾವು ಮೊಬೈಲ್ ನ್ನು ಚಾರ್ಜ್ ಹಾಕಿದ ನಂತರದಲ್ಲಿ ಮರೆತೆ ಬಿಟ್ಟಿರುತ್ತೇವೆ. ಈ ವೇಳೆಯಲ್ಲಿ ಮೊಬೈಲ್ ವಿದ್ಯುತ್ ಸಂಪರ್ಕದಲ್ಲಿಯೇ ಇರುವುದರಿಂದ ಚಾರ್ಜ್ ಪುಲ್ ಆದ ನಂತರದಲ್ಲಿ ಮೊಬೈಲ್ ಪೋನ್ ಬಿಸಿಯಾಗೋದಕ್ಕೆ ಶುರುವಾಗುತ್ತೆ. ತುಂಬಾ ಹೊತ್ತು ಹಾಗೆಯೇ ಬಿಡುವುದರಿಂದ ಮೊಬೈಲ್ ಬ್ಲಾಸ್ಟ್ ಆಗುವ ಸಾಧ್ಯತೆಯಿದೆ.

ಪ್ರಮುಖವವಾಗಿ ಮೊಬೈಲ್ ಬಳಕೆದಾರರು ಈ ಅಂಶವನ್ನು ಕಡ್ಡಾಯವಾಗಿ ನೆನಪಿನಲ್ಲಿಡಲೇ ಬೇಕು. ಬ್ಯಾಟಿರಿ ಬ್ಲಾಸ್ಟ್ ಆಗೋದಕ್ಕೆ ಬಹುಮುಖ್ಯವಾಗಿರುವ ಕಾರಣ ಬ್ಯಾಟರಿಯಲ್ಲಿನ ಲೀಥಿಯಂ. ಮೊಬೈಲ್ ಬ್ಯಾಟರಿ ಹಾಳಾಯ್ತು ಅಂದ್ರೆ ಸಾಕು ಬಹುತೇಕರು ಕಡಿಮೆ ಹಣಕ್ಕೆ ಸಿಗುವ ಬ್ಯಾಟರಿಗಳ ಮೊರೆ ಹೋಗುತ್ತಾರೆ. ಗುಣಮಟ್ಟದಲ್ಲದ ಬ್ಯಾಟರಿ ಬಳಕೆ ಮಾಡುವುದರಿಂದಲೂ ಬ್ಲಾಸ್ಟ್ ಆಗುವ ಸಾಧ್ಯತೆಯಿದ್ದು, ಮೊಬೈಲ್ ಮೇಲಿನಿಂದ ಕೆಳಗೆ ಬಿದ್ದಾಗಲೂ ಬ್ಯಾಟರಿ ಬ್ಲಾಸ್ಟ್ ಆಗುತ್ತೆ. ಹೀಗಾಗಿ ಮೊಬೈಲ್ ಬಳಕೆ ಮಾಡುವಾಗ ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಇಲ್ಲವಾದ್ರೆ ಅಪಾಯ ಎದುರಾಗೋದು ಗ್ಯಾರಂಟಿ.