(Dual SIM features) ಹಿಂದಿನ ಟ್ರೆಂಡ್ನಲ್ಲಿ ಮೊಬೈಲ್ಗಳಲ್ಲಿ ಕೇವಲ ಒಂದೇ ಸಿಮ್ ಅನ್ನು ಬಳಸಲಾಗುತ್ತಿತ್ತು. ಆದರೆ ಕೆಲವೊಂದು ತಂತ್ರಜ್ಞಾನದ ಬೆಳವಣಿಗೆಗಳಿಂದ ನಂತರದಲ್ಲಿ ಸ್ಮಾರ್ಟ್ಫೋನ್ಗಳಲ್ಲಿ ಡ್ಯುಯಲ್ ಸಿಮ್ ಫೀಚರ್ಸ್ ಹೊರಹೊಮ್ಮಿತು. ಈ ಮೂಲಕ ಒಂದು ಸ್ಮಾರ್ಟ್ಫೋನ್ನಲ್ಲಿ ಎರಡು ಸಿಮ್ಗಳನ್ನು ಬಳಕೆ ಮಾಡಬಹುದಾಗಿತ್ತು. ನಂತರದಲ್ಲಿ ಡ್ಯುಯಲ್ ಸಿಮ್ ಬಳಕೆ ಟೆಲಿಕಾಂ ಕಂಪನಿಗಳ ಯುಗಕ್ಕೆ ಒಂದು ಹೊಸ ಟ್ರೆಂಡ್ ಅನ್ನು ಸೃಷ್ಟಿಸಿತು. ಸ್ಮಾರ್ಟ್ಫೋನ್ಗಳಲ್ಲಿ ಡ್ಯುಯಲ್ ಸಿಮ್ಗಳ ಬಳಕೆ ವ್ಯಾಪಕವಾಗಿ ಬೆಳೆಯಲು ಕಾರಣ ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡಿದ್ದ ರೀಚಾರ್ಜ್ ಪ್ಲಾನ್ಗಳು ಎಂದು ಹೇಳಬಹುದು. ಆದರೆ ಈಗ ಎಲ್ಲಾ ಸಿಮ್ಗಳ ರೀಚಾರ್ಜ್ ಪ್ಲಾನ್ಗಳು ಒಂದೇ ರೀತಿಯಲ್ಲಿದೆ. ಆದ ಕಾರಣ ಎಲ್ಲರೂ ಇತ್ತೀಚೆಗೆ ಒಂದೇ ಸಿಮ್ಗಳನ್ನು ಬಳಕೆ ಮಾಡುತ್ತಿದ್ದಾರೆ.
ರೀಚಾರ್ಜ್ ವ್ಯಾಲಿಡಿಟಿಯಲ್ಲಿ ಬದಲಾವಣೆ
ಹಿಂದೆ ಸಿಮ್ ಬಳಕೆ ಮಾಡಬೇಕಾಗಿದ್ದರೆ ಒಮ್ಮೆ ರೀಚಾರ್ಜ್ ಮಾಡಿದರೆ ಮತ್ತೆ ಯಾರಿಗೆ ಬೇಕಾದರು ಕಾಲ್ ಮಾಡಬಹುದಿತ್ತು. ಸಿಮ್(Dual SIM features) ಆಕ್ಟಿವ್ ಇರಲು ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯವಿರಲಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಟೆಲಿಕಾಂ ಕಂಪನಿಗಳು ಈ ನಿಯಮವನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿದ್ದು, ಒಂದು ಸಿಮ್ ಕಾರ್ಡ್ ಆಕ್ಟಿವ್ ಇರಬೇಕಾದರೆ ಪ್ರತೀ ತಿಂಗಳು ರೀಚಾರ್ಜ್ ಮಾಡಬೇಕು. ಇಲ್ಲದಿದ್ದರೆ ಯಾವುದೇ ಇಂಟರ್ನೆಟ್, ಕಾಲ್ ಸೌಲಭ್ಯಗಳು ದೊರೆಯುವುದಿಲ್ಲ ಎಂಬ ಹೊಸ ನಿಯಮಗಳನ್ನು ಜಾರಿ ಮಾಡಿತು. ಈ ಕಾರಣದಿಂದ ಡ್ಯುಯಲ್ ಸಿಮ್ ಹೊಂದಿರುವವರು ಪ್ರತಿ ಸಿಮ್ನ ರೀಚಾರ್ಜ್ ವ್ಯಾಲಿಡಿಟಿ ಮುಗಿದ ಕೂಡಲೇ ಸಿಮ್ಗಳಿಗೆ ಉತ್ತಮ ವ್ಯಾಲಿಡಿಟಿ ಹೊಂದಿರುವ ಡೇಟಾ, ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ಹೊಂದಿರುವ ರೀಚಾರ್ಜ್ ಅನ್ನು ಮಾಡಬೇಕು. ಒಂದು ವೇಳೆ ರೀಚಾರ್ಜ್ ಮಾಡದಿದ್ದರೆ ಸಿಮ್ಗೆ ಸಂಬಂಧಪಟ್ಟ ಟೆಲಿಕಾಂ ಕಂಪನಿಯಿಂದ ಕಾಲ್ ಮಾಡಿ ನಿಮ್ಮ ಸಿಮ್ನ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸುತ್ತಾರೆ. ನಮಗೆ ಯೋಜನೆಗಳು ಸ್ಥಗಿತಗೊಳಿಸಲಾಗದ ಕಾರಣ ಎರಡೂ ಸಿಮ್ಗೆ ಪ್ರತ್ಯೇಕವಾಗಿ ರೀಚಾರ್ಜ್ ಮಾಡಲೇ ಬೇಕಾಗುತ್ತದೆ.
ಎಲ್ಲಾ ಟೆಲಿಕಾಂ ಕಂಪನಿಗಳ ರೀಚಾರ್ಜ್ ಯೋಜನೆಗಳು ಒಂದೇ ರೀತಿಯಾಗಿವೆ
ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ಗಳು ಒಂದೇ ರೀತಿಯಾಗಿದೆ. ಅದ್ದರಿಂದ ಬಳಕೆದಾರರು ಹೆಚ್ಚಾಗಿ ಈಗ ಒಂದೇ ಸಿಮ್ ಅನ್ನು ಬಳಸಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಈ ವರ್ಷದ ಎಪ್ರಿಲ್‌ನಲ್ಲಿ ಸುಮಾರು 70 ಲಕ್ಷ ಜನರು ಸಿಮ್ ಬಳಸುವುದನ್ನೇ ನಿಲ್ಲಿಸಿದ್ದಾರೆ. ಇವುಗಳಲ್ಲಿ ವೊಡಾಫೋನ್-ಐಡಿಯಾ ಮೊದಲ ಸ್ಥಾನದಲ್ಲಿದ್ದರೆ, ಏರ್ಟೆಲ್ ಸಿಮ್ ದ್ವಿತೀಯ ಸ್ಥಾನದಲ್ಲಿದೆ.
ಇದನ್ನೂ ಓದಿ : Vivo Y02 : ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾದ ಅಗ್ಗದ ಸ್ಮಾರ್ಟ್‌ಫೋನ್ ವಿವೋ ವೈ02
ಇದನ್ನೂ ಓದಿ : DigiYatra in 3 Airports : 3 ಏರ್‌ಪೋರ್ಟ್‌ಗಳಲ್ಲಿ ಡಿಜಿಯಾತ್ರಾ ಸೇವೆ ಆರಂಭ: ನೋಂದಣಿ ಮಾಡಿಕೊಳ್ಳುವುದು ಹೇಗೆ…
ರೀಚಾರ್ಜ್ ದರದಲ್ಲಿ ಮತ್ತೆ ಹೆಚ್ಚಳ:
ಟೆಲಿಕಾಂ ಕಂಪನಿಗಳು ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಪ್ರೀಪೇಯ್ಡ್ ರೀಚಾರ್ಜ್ ಅನ್ನು ಹೆಚ್ಚಿಸಲಿದೆ ಎಂದು ವರದಿಯಾಗಿದೆ. ಈ ಏರಿಕೆಯಿಂದ ಮತ್ತೆ ಎರಡು ಸಿಮ್ಗಳನ್ನು ಹೊಂದಿರುವವರಿಗೆ ಹೊರೆಯಾಗಲಿದೆ. ಕಳೆದ ನವೆಂಬರ್ – ಡಿಸೆಂಬರ್ನಲ್ಲಿ ಕಂಪನಿಗಳು ತನ್ನ ರೀಚಾರ್ಜ್ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ ಈ ಸಂದರ್ಭ ಮತ್ತೆ ಮರುಕಳಿಸಲಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ 5ಜಿ ಸೇವೆ ಕೂಡ ಆರಂಭವಾಗುವುದರಿಂದ ರೀಚಾರ್ಜ್ ಪ್ಲಾನ್ ಹೆಚ್ಚಳವಾಗುವುದು ಮಾತ್ರ ನಿಶ್ಚಯ ಎಂದು ಕೆಲ ವರದಿಗಳು ಹೇಳಿವೆ.
ಈ ಎಲ್ಲಾ ಕಾರಣಗಳಿಂದ ಡ್ಯುಯಲ್ ಸಿಮ್ ಫೀಚರ್ಸ್ ನಿಂದ ಸಿಂಗಲ್ ಸಿಮ್ನ ಬಳಕೆಗೆ ಬದಲಾವಣೆಯಾಗಲಿದೆ.
(Dual SIM features) In the previous trend, only one SIM was used in mobiles. But due to some technological developments, dual SIM features emerged in smartphones later. Through this, two SIMs could be used in one smartphone.