(Electric water heater) ಭಾರತದಲ್ಲಿ ಚಳಿಗಾಲದ ಸಮಯದಲ್ಲಿ ವಾಟರ್ ಹೀಟರ್‌ಗಳನ್ನು ಜನರು ಹೆಚ್ಚಾಗಿ ಬಳಸುತ್ತಾರೆ. ನೀವೇನಾದರೂ ಹೊಸ ವರ್ಷದಲ್ಲಿ ವಾಟರ್ ಹೀಟರ್ ಖರೀದಿ ಮಾಡಲು ಯೋಚನೆ ನಡೆಸಿದ್ದಲ್ಲಿ ಈ ಮಾಹಿತಿಯನ್ನು ತಪ್ಪದೇ ಓದಿ. ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು, ಜನವರಿ ಒಂದರಿಂದ ಸಿಂಗಲ್ ಸ್ಟಾರ್ ವಾಟರ್ ಹೀಟರ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಇಂಧನ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಿದೆ.
ಹೌದು, ಭಾರತ ಸರ್ಕಾರದ ಇಂಧನ ಸಚಿವಾಲಯವು ಎಲೆಕ್ಟ್ರಿಕ್ ವಾಟರ್ ಹೀಟರ್(Electric water heater)ಗಳಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಿಂಗಲ್ ಸ್ಟಾರ್ ಎಂದರೆ ಒಂದು ಸ್ಟಾರ್ ರೇಟಿಂಗ್ ಹೊಂದಿರುವ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು 1 ಜನವರಿ 2023 ರಿಂದ 31 ಡಿಸೆಂಬರ್ 2025 ರವರೆಗೆ ಮಾರಾಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಿಂಗಲ್ ಸ್ಟಾರ್ ವಾಟರ್ ಹೀಟರ್‌ಗಳು ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತವೆ. ಇದರಿಂದಾಗಿ, ಜನಸಾಮಾನ್ಯರ ಬಜೆಟ್ ಮೇಲೆ ಹೊರೆ ಬೀಳಲಿದ್ದು, ಇದು ಅವರ ಖರ್ಚನ್ನು ಹೆಚ್ಚಿಸುತ್ತವೆ. ಅದೇ ಉದ್ದೇಶದಿಂದ 6 ಲೀಟರ್‌ನಿಂದ 200 ಲೀಟರ್ ಸಾಮರ್ಥ್ಯದ ಸಿಂಗಲ್ ಸ್ಟಾರ್ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳನ್ನು 1 ಜನವರಿ 2023 ರಿಂದ ಬ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಭಾರತ ಸರ್ಕಾರದ ಇಂಧನ ಸಚಿವಾಲಯವು ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಈ ಕೋಷ್ಟಕದಲ್ಲಿ ಸ್ಟಾರ್ ರೇಟಿಂಗ್‌ನೊಂದಿಗೆ ಹೀಟರ್‌ನ ಮೌಲ್ಯೀಕರಣವನ್ನು ವಿವರಿಸಲಾಗಿದೆ. ಸರಕಾರದ ಅಧಿಸೂಚನೆ ಪ್ರಕಾರ, ಶೇಖರಣಾ ಮಾದರಿಯ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳ ಶಕ್ತಿಯ ಕಾರ್ಯಕ್ಷಮತೆಯ ಮಟ್ಟವನ್ನು ನವೀಕರಿಸುವ ಅವಶ್ಯಕತೆಯಿದ್ದು, ಇದು ಕಡಿಮೆ ಶಕ್ತಿಯನ್ನು ಬಳಸುವಂತಿರಬೇಕು.
ಇದನ್ನೂ ಓದಿ : Nokia C31 : ಬಜೆಟ್–ಫ್ರೆಂಡ್ಲಿ ಫೋನ್ ಪರಿಚಯಿಸಿದ ನೋಕಿಯಾ: C31 ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯತೆಗಳು
ಇದನ್ನೂ ಓದಿ : Realme 10 Pro Plus 5G ಇಂದಿನಿಂದ ಭಾರತದಲ್ಲಿ ಮಾರಾಟ ಪ್ರಾರಂಭ; ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು
(Electric water heater) Water heaters are mostly used by people during winters in India. If you are planning to buy a water heater in the new year, read this information without fail. The government has issued a new notification banning the use of single star water heaters from January 1, the Ministry of Energy said in a notification.