Facebook, Instagram, YouTube Server Down: ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಂ (instagram) ಹಾಗೂ ಯೂಟ್ಯೂಬ್ (Youtube) ಸರ್ವರ್ ಡೌನ್ (Server Down) ಆಗಿದೆ. ಇದರಿಂದಾಗಿ ವಿಡಿಯೋ ಬ್ರೌಸ್ (video Browsing) ಮಾಡಲು ಸಾಧ್ಯವಾಗದೇ ಕೋಟ್ಯಾಂತರ ಗ್ರಾಹಕರು ಪರದಾಡುತ್ತಿದ್ದಾರೆ. ಇನ್ನು ಲಕ್ಷಾಂತರ ಬಳಕೆದಾರರು ಫೇಸ್ ಬುಕ್ ಖಾತೆ ಲಾಗೌಟ್ ಆಗಿದೆ. ಇದರಿಂದಾಗಿ ಬಳಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಒಂದು ಗಂಟೆಗೂ ಅಧಿಕ ಸಮಯದಿಂದಲೂ ಮೆಟಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಸ್ಟ್ರೀಮಿಂಗ್ ಸೈಟ್ ಕೆಲಸ ಮಾಡುತ್ತಿಲ್ಲ. ಈ ಕುರಿತು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : Mobile Users Alert … ! ಈ ಸೆಟ್ಟಿಂಗ್ ಬದಲಾಯಿಸದೇ ಇದ್ರೆ ನಿಮ್ಮ ಮೊಬೈಲ್ ಹ್ಯಾಕ್ ಆಗೋದು ಪಕ್ಕಾ ..!
ರಾತ್ರಿ ೯ ಗಂಟೆಯಿಂದಲೇ ಸರ್ವರ್ ಸ್ಥಗಿತದ ಕುರಿತು ವರದಿಗಳು ಆಗುತ್ತಿದ್ದು, ಯೂಟ್ಯೂಬ್‌ಗೆ ಸಂಬಂಧಿಸಿದ ವರದಿಗಳು ರಾತ್ರಿ 9ಗಂಟೆಯ ನಂತರ ಹೆಚ್ಚು ವರದಿಯಾಗಿತ್ತು. Downdetector.com ಹೆಚ್ಚು ವರದಿಯನ್ನು ಮಾಡಿತ್ತು. ಇನ್ನು ಒಂದು ಗಂಟೆಯ ಹಿಂದೆ, ಮೆಟಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್, ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಡೌನ್ ಆಗಿದೆ ಎಂದು ವರದಿಯಾಗಿದೆ.

ಫೇಸ್‌ಬುಕ್‌ಗೆ 300,000 ಕ್ಕೂ ಹೆಚ್ಚು ಮಂದಿ ಸ್ಥಗಿತವಾಗಿರುವ ಕುರಿತು ರಿಪೋರ್ಟ್ ಮಾಡಿದ್ದಾರೆ. ಇನ್ನು Instagram ನಲ್ಲಿ 20,000 ಕ್ಕೂ ಹೆಚ್ಚು ವರದಿಗಳಾಗಿವೆ. ವೆಬ್‌ಸೈಟ್ ಪ್ರಕಾರ, ಬಳಕೆದಾರರು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸುವ ಮೂಲಕ ಸ್ಥಗಿತಗಳನ್ನು ಟ್ರ್ಯಾಕ್ ಮಾಡುತ್ತದೆ.
ಇದನ್ನೂ ಓದಿ : Airtel 49 Rs Recharge Plan : ಕೇವಲ 49 ರೂಪಾಯಿಗೆ ಅನ್‌ಲಿಮಿಟೆಡ್ ಡೇಟಾ, ಉಚಿತ ಕರೆ : ಏರ್‌ಟೆಲ್ ಹೊಸ ರಿಚಾರ್ಜ್ ಫ್ಲ್ಯಾನ್
ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳನ್ನು ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಫೇಸ್‌ಬುಕ್ ಖಾತೆಗಳು ಲಾಗ್ ಔಟ್ ಆಗಿದೆ. ಮತ್ತೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಬಳಕೆದಾರರು ಇಂಟರ್‌ನೆಟ್ ಸಮಸ್ಯೆ ಎಂದು ಭಾವಿಸಿದ್ದರು. ಆದರೆ ಲಾಗಿನ್ ಮಾಡಲು ಸಾಧ್ಯವೇ ಆಗದಿದ್ದಾಗ ವರದಿ ಮಾಡಲು ಆರಂಭಿಸಿದ್ದರು.
Facebook, Instagram, YouTube Server Down