ಭಾನುವಾರ, ಏಪ್ರಿಲ್ 27, 2025
HometechnologyFacebook Profile Lock : ಫೇಸ್‌ಬುಕ್ ಅಕೌಂಟ್ ಲಾಕ್ ಮಾಡುವುದು ಹೇಗೆ ?

Facebook Profile Lock : ಫೇಸ್‌ಬುಕ್ ಅಕೌಂಟ್ ಲಾಕ್ ಮಾಡುವುದು ಹೇಗೆ ?

- Advertisement -

ಫೇಸ್‌ಬುಕ್ (Facebook) ಸಾಮಾಜಿಕ ಜಾಲತಾಣಗಳ ದೈತ್ಯ ಕಂಪನಿ. ಬರೇ ಸಾಮಾಜಿಕ ಜಾಲತಾಣಗಳ ಮೂಲಕವೇ ಫೇಸ್‌ಬುಕ್ ಗಳಿಸಿರುವ ಬಳಕೆದಾರರು ಅಪಾರ. ಸಾಮಾಜಿಕ ಜಾಲತಾಣ ಫೇಸ್‌ಬುಕ್ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಪಾಯವೂ ಸಹ ಇದ್ದೇ ಇದೆ. ಏಕೆಂದರೆ ನಮ್ಮ ಅಕೌಂಟನ್ನು ನಾವೆಷ್ಟೇ ಸುರಕ್ಷಿತವಾಗಿರಿಸಿಕೊಂಡರೂ ಅದು ಕಡಿಮೆಯೇ ಆಗುತ್ತದೆ. ನಮ್ಮ ಗೆಳೆಯರಿಗಷ್ಟೇ ನಮ್ಮ ಫೇಸ್‌ಬುಕ್ ಖಾತೆ ಕಾಣಿಸಬೇಕೆ ಅಥವಾ ಇಡೀ ಜಗತ್ತು ನಮ್ಮ ಫೇಸ್‌ಬುಕ್ ಗೋಡೆಯನ್ನು  ಇಣುಕಿ ಇಣುಕಿ ನೋಡಬಹುದೇ ಎಂದು ನಿರ್ಧರಿಸುವುದಿದೆಯಲ್ಲಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಅದರಷ್ಟು ಮುಖ್ಯ ಮತ್ಯಾವುದಿಲ್ಲ. ಹಾಗಾದರೆ ಫೇಸ್‌ಬುಕ್ ಖಾತೆಯನ್ನು ಲಾಕ್ (Facebook Profile Lock ) ಮಾಡುವುದು ಹೇಗೆ ?

ನೀವು ನಿಮ್ಮ ಮೊಬೈಲ್‌ನಿಂದಲೂ ಫೇಸ್‌ಬುಕ್ ಅಕೌಂಟನ್ನು ಲಾಕ್ ಮಾಡಬಹುದು. ಆದರೆ ಕಂಪ್ಯೂಟರ್/ ಲ್ಯಾಪ್‌ಟಾಪ್‌ನಿಂದ ನಿಮ್ಮ ಫೇಸ್‌ಬುಕ್ ಖಾತೆಯನ್ನು ಲಾಕ್ ಮಾಡಲು ಸಾಧ್ಯವಿಲ್ಲ. ಲಾಕ್ ಮಾಡುವುದರಿಂದ ನಿಮ್ಮ ಗೆಳೆಯರಷ್ಟೇ ನಿಮ್ಮ ಅಕೌಂಟ್‌ನಲ್ಲಿ ನೀವು ಹಾಕುವ ಪೋಸ್ಟ್‌ಗಳನ್ನು ವೀಕ್ಷಿಸಲು ಸಾಧ್ಯ, ಇಲ್ಲದಿದ್ದರೆ ನೀವು ಪೋಸ್ಟಿರುವ ಎಲ್ಲವನ್ನೂ ಯಾರು ಬೇಕಾದರೂ ಇಣುಕಿ ನೋಡಬಹುದು.

ಹಾಗಾದರೆ ಮೊಬೈಲ್‌ ಆ್ಯಪ್‌ನಲ್ಲಿ ಫೇಸ್‌ಬುಕ್ ಲಾಕ್ ಮಾಡುವ ವಿಧಾನಗಳು ಹೀಗಿವೆ
* ಫೇಸ್‌ಬುಕ್ ಆ್ಯಪ್‌(Facebook Mobile App Lock) ಓಪನ್ ಮಾಡಿ ಮತ್ತು ನಿಮ್ಮ ಪ್ರೊಫೈಲ್ ಆಯ್ಕೆಮಾಡಿ
* ಆ್ಯಡ್‌ ಸ್ಟೋರಿ ಅಂತ ಕಾಣಿಸುವಲ್ಲಿ ಆ್ಯಡ್ ಟು ಸ್ಟೋರಿ (Add to Story) ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ
* ಅಲ್ಲಿ ನಿಮಗೆ ಮೂರು ಚುಕ್ಕಿಗಳ (3 Dots) ಆಯ್ಕೆಯೊಂದು ಕಾಣಿಸುತ್ತದೆ. ಅದನ್ನು ಆರಿಸಿಕೊಳ್ಳಿ
* ಮುಂದಿನ ಹಂತದಲ್ಲಿ ನಿಮಗೆ ಪ್ರೊಫೈಲ್ ಲಾಕ್ (Facebook Profile Lock) ಮಾಡುವ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆಮಾಡಿ.
* ಮುಂದಿನ ಹಂತದಲ್ಲಿ ನಿಮಗೆ ಫೇಸ್‌ಬುಕ್ ಪ್ರೋಫೈಲ್ ಲಾಕ್ ಆದರೆ ಏನೆಲ್ಲ ಆಗುತ್ತದೆ? ಏನೇನು ಆಗುವುದಿಲ್ಲ ಎಂಬುದನ್ನು ನೀವು ನೋಡಬಹುದು
* ನಿಮಗೆ ಪ್ರೋಫೈಲ್ ಲಾಕ್ ಮಾಡಬೇಕಾದಲ್ಲಿ ಅಲ್ಲೇ ಕಾಣಿಸುವ ಲಾಕ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಪ್ರೊಫೈಲ್ ಲಾಕ್ ಆಗುತ್ತದೆ.

ಅಂದಹಾಗೆ ನೀವು ನಿಮ್ಮ ಫೇಸ್‌ಬುಕ್ ಖಾತೆಯನ್ನು ಕಂಪ್ಯೂಟರ್‌ನಲ್ಲಿ ಬಳಸುತ್ತಿದ್ದರೆ ಪ್ರೋಫೈಲ್ ಲಾಕ್ ಮಾಡಲು ಸಾಧ್ಯವಾಗುವುದಿಲ್ಲ. ಮೊಬೈಲ್‌ ಆ್ಯಪ್‌ನಲ್ಲಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೌಸರ್( ಕ್ರೋಮ್ ಇತ್ಯಾದಿ) ಬಳಸಿ ಮಾತ್ರ ಲಾಕ್ ಮಾಡಬಹುದು. ನೆನಪಿಡಿ, ನೀವು ಫೇಸ್‌ಬುಕ್ ಖಾತೆಯನ್ನು ಲಾಕ್ ಮಾಡಿದಲ್ಲಿ ನಿಮ್ಮ ಗೆಳೆಯರು ಮಾತ್ರ ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ವೀಕ್ಷಿಸಬಹುದು. ಅದು ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ, ಅಂದರೆ ದಾರಿಯಲ್ಲಿ ಹೋಗಿ ಬರುವ ಯಾರ್ಯಾರೋ ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ನೊಡಲು ಸಾಧ್ಯವಾಗದು.

ಇದನ್ನೂ ಓದಿ: Jobs: ಮನೆಯಲ್ಲೇ ಕುಳಿತು ಇಂಗ್ಲಿಷ್ ಕಲಿಯಿರಿ ಮತ್ತು ಉದ್ಯೋಗ ಪಡೆಯಿರಿ

ಇದನ್ನೂ ಓದಿ : Google Play Games : ವಿಂಡೋಸ್‌ನಲ್ಲೂ ಆಟ ಆಡಿ!ವಿಂಡೋಸ್ 10 ಮತ್ತು 11 ನಲ್ಲೂ ಬರಲಿದೆ ಗೂಗಲ್ ಗೇಮ್ಸ್

(Facebook profile lock how to step guide android desktop)

RELATED ARTICLES

Most Popular