ವಿಶ್ವದ ಪ್ರಖ್ಯಾತ ಸರ್ಚ್ ಇಂಜಿನ್ ( Google Seach engine) ಎನಿಸಿಕೊಂಡಿರುವ ಗೂಗಲ್ ಆರಂಭಗೊಂಡು ಇಂದಿಗೆ 25 ವರ್ಷಗಳೇ ಕಳೆದಿದೆ. ಇದೀಗ ಗೂಗಲ್ ಡೂಡಲ್ (Google Doodle) ಗೂಗಲ್ ಸಂಸ್ಥೆಯ ಹುಟ್ಟುಹಬ್ಬವನ್ನು (Google’s 25th Birthday Celbration) ವಿಶಿಷ್ಠವಾಗಿ ಆಚರಿಸಿದೆ. ಇನ್ನು ಗೂಗಲ್ ಲೋಗೋ (Google Logo) ಹುಟ್ಟಿನ ಹಿಂದೆ ರೋಚಕ ಕಹಾನಿ ಇದೆ. ಬ್ಯಾಕ್ ರಬ್ (back Rub) ಗೂಗಲ್ (Google) ಆಗಿ ಬದಲಾಗಿದ್ದು ಹೇಗೆ ಅನ್ನೋ ಸ್ಟೋರಿ ಇಲ್ಲಿದೆ.
ಡಾಕ್ಟರಲ್ ವಿದ್ಯಾರ್ಥಿಗಳಾದ ಸೆರ್ಗೆ ಬ್ರಿನ್ (Sergey Brin) ಮತ್ತು ಲ್ಯಾರಿ ಪೇಜ್ (Larry page ) 1990ರ ದಶಕದಲ್ಲಿ ಕಂಪ್ಯೂಟರ್ ವಿಜ್ಞಾನ ಕಾರ್ಯಕ್ರಮ ದಲ್ಲಿ ಭೇಟಿಯಾಗಿದ್ದರು. ಇಬ್ಬರೂ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ನಂತರದಲ್ಲಿ ಇಬ್ಬರ ಸಂಶೋಧನೆಯ ಫಲವಾಗಿ ಬ್ಯಾಕ್ ರಬ್ (Back Rub) ಸಂಸ್ಥೆಯ ಹುಟ್ಟಿಗೆ ಕಾರಣವಾಗಿತ್ತು.
ತಾವು ಸಿದ್ದಪಡಿಸಿ ಸರ್ಚ್ ಇಂಜಿನ್ ಅನ್ನು ಸಾಕಷ್ಟು ಬದಲಾವಣೆಯನ್ನು ತಂದರು. 1998 ರಲ್ಲಿ ಮೊದಲ ಬಾರಿಗೆ ಗೂಗಲ್ ಸಂಸ್ಥೆಯ ಹುಟ್ಟಿಗೆ ಕಾರಣರಾದರು. ಅಲ್ಲದೇ ಸೆಪ್ಟೆಂಬರ್ 27, 1998 ರಂದು Google Inc. ಸಂಸ್ಥೆಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಜೊತೆಗೆ ಗೂಗಲ್ ತನ್ನ ಸ್ವತಃ ಕಚೇರಿಗೆ ಸ್ಥಳಾಂತರ ಗೊಂಡಿತ್ತು.

ಗೂಗಲ್ ಸಂಸ್ಥೆಯು ತನ್ನ ಗೂಗಲ್ ಡೂಡಲ್ ಮೂಲಕ ತನ್ನ ಹುಟ್ಟುಹಬ್ಬವನ್ನು ಜಗತ್ತಿನಾದ್ಯಂತ ಇರುವ ಗ್ರಾಹಕರಿಗೆ ನೆನಪಿಸಿದೆ. ಸಾಮಾನ್ಯವಾಗಿ ಗೂಗಲ್ ಡೂಡಲ್ ಮಹಾನ್ ವ್ಯಕ್ತಿಗಳ ಹುಟ್ಟುಹಬ್ಬ, ವಿಶೇಷ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಲೇ ಬರುತ್ತಿದೆ. ಇದೀಗ ಗೂಗಲ್ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದು, ವಿಶೇಷವಾಗಿತ್ತು.
ಸೆಪ್ಟೆಂಬರ್ 25 ರಂದು ಬಿಡುಗಡೆಯಾದ ಕೊನೆಯ ಡೂಡಲ್‌ನಲ್ಲಿ, ದಕ್ಷಿಣ ಆಫ್ರಿಕಾದ ಜಾಝ್ ಪಿಯಾನೋ ವಾದಕ, ಸಂಯೋಜಕ ಮತ್ತು ಪತ್ರಕರ್ತ ಟಾಡ್ ಮತ್ಶಿಕಿಜಾ ಹುಟ್ಟು ಹಬ್ಬವನ್ನು ಆಚರಿಸಿತ್ತು.
ಇದನ್ನೂ ಓದಿ : 72 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್ : ನಿಮ್ಮ ಖಾತೆ ಬ್ಯಾನ್ ಆಗುತ್ತಾ ಚೆಕ್ ಮಾಡಿ
ಗೂಗಲ್ ಲೋಗೋ (Google Logo History) ಹಿಂದಿದೆ ರೋಚಕ ಕಹಾನಿ :
ಗೂಗಲ್ ಕಂಪೆನಿ ಆರಂಭಗೊಂಡು ಇಂದಿಗೆ 25 ವರ್ಷಗಳೇ ಕಳೆದಿದೆ. ಈ ನಡುವಲ್ಲೇ ಗೂಗಲ್ ಹಲವು ಬಾರಿ ತನ್ನ ಲೋಗೋದಲ್ಲಿ ಬದಲಾವಣೆಯನ್ನು ಮಾಡಿದೆ. ಬ್ಯಾಕ್ ರಬ್ ಕಂಪೆನಿ ಗೂಗಲ್ ಆಗಿ ಬದಲಾಗಿದ್ದು, ಒಂದು ರೋಚಕ ಜರ್ನಿ.
ವಿಶ್ವದ ಸರ್ಚ್ ಇಂಜಿನ್ ದೈತ್ಯ ಗೂಗಲ್ ಈಗಾಗಲೇ ಹಲವು ಬಾರಿ ತನ್ನ ಲೋಗೋವನ್ನು ಮರು ಬ್ರ್ಯಾಂಡ್ ಮಾಡಿದೆ. ಗೂಗಲ್ ಕಂಪೆನಿಯು 1997ರಲ್ಲಿ ಕಂಪೆನಿ ಆರಂಭದಲ್ಲಿ ಬ್ಯಾಕ್ ರಬ್ ಹೆಸರಿನಿಂದ ಕರೆಯಿಸಿಕೊಂಡಿತ್ತು. ನಂತರದಲ್ಲಿ ಇದು ಗೂಗಲ್ ಆಗಿ ಮರುಬ್ರ್ಯಾಂಡ್ ಆಗಿತ್ತು. ಸದ್ಯ ವಿಶ್ವದ ನಂ. ಟೆಕ್ ಕಂಪೆನಿಯಾಗಿ ಹೊರಹೊಮ್ಮಿದೆ.
1997ರಲ್ಲಿ ಗೂಗಲ್‌ನ(Google Birth)ಹುಟ್ಟು :
ಗೂಗಲ್ ಆರಂಭದಲ್ಲಿ ಬ್ಯಾಕ್ ರಬ್ ಎಂದಾಗಿತ್ತು. ಕಪ್ಪು ಕೆಂಪು ಲೋಗೋದೊಂದಿಗೆ ಗೂಗಲ್ ಕಾಣಿಸಿಕೊಂಡಿತ್ತು. ಅಂದು ಬ್ಯಾಕ್ ರಬ್ ವೆಬ್ ಕ್ರಾಲರ್ ಆಗಿ ಕೆಲಸ ಮಾಡುತ್ತಿತ್ತು. ನಂತರದಲ್ಲಿ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಲೋಗೋದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯನ್ನು ಮಾಡಿಕೊಂಡಿತ್ತು.
1997 ರಲ್ಲಿ ಮೊದಲ ಬಾರಿಗೆ ಬ್ಯಾಕ್ ರಬ್ ಕಂಪೆನಿಯು Google ಹೆಸರಿನಿಂದ ಮರು ಬ್ರ್ಯಾಂಡ್ ಆಗಿ ಪರಿವರ್ತನೆ ಹೊಂದಿದೆ. ಗೂಗಲ್ ತನ್ನ ಮೊದಲ ಲೋಗೋವನ್ನು ಸ್ಟ್ಯಾನ್‌ಪೋರ್ಡ್ ವಿಶ್ವ ವಿದ್ಯಾನಿಲಯದ ಸರ್ವರ್‌ಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.
1998 ರಲ್ಲಿ ಮೊದಲ ಬಾರಿಗೆ ಗೂಗಲ್ ಹೆಚ್ಚು ಅತ್ಯಾಧುನಿಕವಾಗಿತ್ತು. ಲೋಗೋದಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯನ್ನು ಮಾಡಲಾಯಿತು. 1999 ರ ಸುಮಾರಿಗೆ, ಗೂಗಲ್ ತನ್ನ ಈಗಿನ ಈಗಿನ ವಿನ್ಯಾಸದಲ್ಲಿ 3D ಮುದ್ರಣದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಅಲ್ಲದೇ ಗೂಗಲ್ ಹೆಸರಿನ ಎದುರಲ್ಲಿ ಪ್ರಶ್ನಾರ್ಥಕ ಚಿಹ್ನೆ ಕಾಣಿಸಿಕೊಂಡಿತ್ತು.

ಆದರೆ 1999 ರಲ್ಲಿ ಲೋಗೋ ವಿನ್ಯಾಸಕ ರುತ್ ಕೇದಾರ್ 3D ಜೊತೆಗೆ ಲೋಗದ ಬಣ್ಣದಲ್ಲಿಯೂ ಬದಲಾವಣೆಯನ್ನು ತಂದರು. ಇದೇ ಹೊತ್ತಲ್ಲೇ ಗೈಗಲ್ ಒಂದು ಶಕ್ತಿಶಾಲಿ ಸರ್ಚ್ ಇಂಜಿನ್ ಆಗಿ ಪರಿವರ್ತನೆಗೊಂಡಿತ್ತು. ಸುಮಾರು ಹತ್ತು ವರ್ಷಗಳ ಕಾಲ ಗೂಗಲ್ ಲೋಗೋದಲ್ಲಿ ಬದಲಾವಣೆ ಮಾಡದೆ ಸೇವೆಯನ್ನು ನೀಡಿದೆ.
ಇದನ್ನೂ ಓದಿ : ಕೇವಲ ರೂ.2999ಕ್ಕೆ ಐಪೋನ್ ಖರೀದಿಸಿ : ಐಪೋನ್ 15 ಲಾಂಚ್ ಬೆನ್ನಲ್ಲೇ ಐಪೋನ್ 11ರ ಮೇಲೆ ಬಾರೀ ಡಿಸ್ಕೌಂಟ್
ಆದರೆ 2009 ರಲ್ಲಿ ಅಂದ್ರೆ ಬರೋಬ್ಬರಿ ಹತ್ತು ವರ್ಷಗಳ ನಂತರದಲ್ಲಿ ಗೂಗಲ್ ತನ್ನ ಅಕ್ಷರ ವಿನ್ಯಾಸದಲ್ಲಿ ಕೊಂಚ ಮಟ್ಟಿನ ಬದಲಾವಣೆಯನ್ನು ತಂದಿತ್ತು. ಅಲ್ಲದೇ ವಿಶ್ವದ ದೈತ್ಯ ಸರ್ಚ್ ಇಂಜಿನ್ ಆಗಿ ರೂಪುಗೊಂಡಿದೆ.
2013 ರಲ್ಲಿ ಗೂಗಲ್ ಮತ್ತೆ ತನ್ನ ಲೋಗೋದಲ್ಲಿ ಬದಲಾವಣೆಯನ್ನು ತಂದಿದೆ. ಲೋಗೋ ಆಕಾರವನ್ನು ಸ್ವಲ್ಪ ದಪ್ಪವಾಗಿ ಮಾಡಿದ್ದು, ಅದೇ ಬಣ್ಣವನ್ನೇ ಮುಂದುವರಿಸಿತ್ತು. ಗೂಗಲ್‌ನ ಈ ಲೋಗೋ ಗ್ರಾಹಕರಿಗೆ ಹೆಚ್ಚು ಇಷ್ಟವಾಗಿತ್ತು. ಅಲ್ಲದೇ 2015 ರಲ್ಲಿಯೂ ಗೂಗಲ್ ತನ್ನ ಲೋಗೋವನ್ನು ಇನ್ನಷ್ಟು ದಪ್ಪವಾಗಿಸಿತ್ತು.
ಸದ್ಯ 2015 ರಲ್ಲಿ ಬದಲಾವಣೆ ಮಾಡಲಾಗಿರುವ ಲೋಗೋವನ್ನೇ ಇಂದಿಗೂ ಬಳಕೆ ಮಾಡಲಾಗುತ್ತಿದೆ. ಸಣ್ಣ ಸ್ಕ್ರೀನ್‌ಗಳಲ್ಲಿಯೂ ಗೂಗಲ್ ಲೋಗೋ ಸುಂದರವಾಗಿ ಕಾಣುತ್ತಿದೆ. ಗೂಗಲ್ ಕೆಲವೊಂದು ಕಡೆಗಳಲ್ಲಿ ಕೇವಲ ಜಿಯನ್ನು ಮಾತ್ರವೇ ಬಳಕೆ ಮಾಡುತ್ತಿದೆ.
ಗೂಗಲ್ ಸಂಸ್ಥೆ ಆರಂಭವಾದ ದಿನದಿಂದ ಹಿಡಿದು ಇಲ್ಲಿಯ ವರಗೆಎ ಒಟ್ಟು 12 ಬಾರಿ ಬದಲಾವಣೆಯಾಗಿದೆ. ಆದರೆ ಆರಂಭದ ಎರಡು ಬದಲಾವಣೆಯನ್ನು ಹೊರತು ಪಡಿಸಿ ಉಳಿದ ಸಂದರ್ಭದಲ್ಲಿ ಬಣ್ಣಗಳಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ. ಈನ್ನು ವಿನ್ಯಾಸ ಸಾಕಷ್ಟು ಸರಳವಾಗಿರುವುದು ವಿಶೇಷ.
Google’s 25th Birthday Celbration Google Doodle interesting story behind the Google logo