ಭಾನುವಾರ, ಏಪ್ರಿಲ್ 27, 2025
HometechnologyGmail Voice Call: ಜೀಮೇಲ್‌ನಲ್ಲಿ ಇದೀಗ ಕರೆ ಮಾಡಬಹುದು, ಹೇಗೆ ಎಂದು ತಿಳಿದು ನೀವೂ...

Gmail Voice Call: ಜೀಮೇಲ್‌ನಲ್ಲಿ ಇದೀಗ ಕರೆ ಮಾಡಬಹುದು, ಹೇಗೆ ಎಂದು ತಿಳಿದು ನೀವೂ ಪ್ರಯತ್ನಿಸಿ

- Advertisement -

ಜಿಮೈಲ್ ( Gmail app ) ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಅದೇನೆಂದರೆ ಈಗ ನಿಮಗೆ ಜಿಮೇಲ್ (Gmail Voice Call) ಮೂಲಕ ವಿಡಿಯೋ ಹಾಗೂ ಆಡಿಯೋ ಕರೆಗಳನ್ನು ಮಾಡಲು ಅನುಮತಿಸುತ್ತದೆ ! ಹಲವು ಬಾರಿ, ಸ್ವಲ್ಪ ಸ್ಪಷ್ಟತೆ ಪಡೆಯಲು ಅಥವಾ ಮೇಲ್ ಮಾಡಿದ್ದನ್ನು ನೆನಪಿಸಲು ಇಮೇಲ್ ಕಳುಹಿಸುವವರಿಗೆ ತ್ವರಿತವಾಗಿ ಕರೆ ಮಾಡಲು ಸಾಧ್ಯ ಆಗಿದ್ದರೆ ಒಳ್ಳೆಯದಿತ್ತು ಎಂದು ಎಲ್ಲರೂ ಒಂದಲ್ಲ ಒಂದು ಬಾರಿ ಭಾವಿಸಿರುತ್ತೇವೆ.ಜಿಮೇಲ್‌ಗೆ ಇತ್ತೀಚಿನ ನವೀಕರಣದೊಂದಿಗೆ ಗೂಗಲ್ ( Google )ಇದೀಗ ಕರೆ ಮಾಡಲು ಅವಕಾಶ ನೀಡುತ್ತದೆ.

ಮುಂದೆ, ಮೇಲ್ ಕಳುಹಿಸುವವರು ಜಿಮೇಲ್ ಅಪ್ಲಿಕೇಶನ್‌ನಿಂದ ಮೇಲ್ ಸ್ವೀಕರಿಸುವವರಿಗೆ ಅಥವಾ ಸ್ವೀಕರಿಸುವವರು ಕಳುಹಿಸಿದ ವ್ಯಕ್ತಿಗೆ ಕರೆ ಮಾಡಬಹುದು. ಹೊಸ ಅಪ್‌ಡೇಟ್‌ನಲ್ಲಿ ಈಗ ಬಳಕೆದಾರರು ಅಪ್ಲಿಕೇಶನ್‌ನಿಂದಲೇ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಸಾಧ್ಯವಿದೆ ಎಂದು ಗೂಗಲ್ ಹೇಳುತ್ತದೆ. ಜಿಮೇಲ್ ಅಪ್ಲಿಕೇಶನ್‌ನಲ್ಲಿ, ಬಳಕೆದಾರರು ಈಗ ಚಾಟ್‌ಗಳ ಟ್ಯಾಬ್‌ನ ಅಡಿಯಲ್ಲಿ ಆಡಿಯೊ ಮತ್ತು ವೀಡಿಯೊ ಕರೆ ಆಯ್ಕೆಗಳನ್ನು ನೋಡಬಹುದು. ಬಳಕೆದಾರರು ಈ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಒಮ್ಮೆ ಕ್ಲಿಕ್ ಮಾಡಿದರೆ, ಅವರು ಸಂಬಂಧಪಟ್ಟ ವ್ಯಕ್ತಿಯೊಂದಿಗೆ ಅನೇಕ ಬಾರಿ ಕರೆ ಮಾಡಲು ಸಾಧ್ಯವಾಗುತ್ತದೆ. ಆದರೆ ಗೂಗಲ್ ಇನ್ನೂ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೂಪ್ ಕರೆಗಳನ್ನು ಅನುಮತಿಸಿಲ್ಲ.

ಜಿಮೇಲ್ ಕರೆಗಳನ್ನು(Gmail Voice Call) ಮಾಡೋದು ಹೇಗೆ?

ಜಿಮೇಲ್ ಮೂಲಕ ಕಾಲ್ ಮಾಡುವುದು ತುಂಬ ಸುಲಭ. ಈ ಕೆಳಗಿನ ಒಂದಷ್ಟು ಮಾಹಿತಿ ನೆನಪಿಟ್ಟರೆ ಸಾಕು. ಮೊದಲಿಗೆ ಜಿಮೇಲ್ ನ ಹೊಸ ಅಪ್‌ಡೆಟ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಸೆಟ್ಟಿಂಗ್ ನಲ್ಲಿರುವ ಚಾಟ್ಸ್ ಆಪ್ಷನ್ ಕ್ಲಿಕ್ ಮಾಡಿ. ಅಲ್ಲಿ ಕಾಣುವ ಯಾವುದಾದರೂ ಚಾಟ್ ಒಂದನ್ನು ಸೆಲೆಕ್ಟ್ ಮಾಡಿ. ನಂತರ ಬರುವ ವಿಂಡೋದಿಂದ ಕಾಲ್ ಅಥವಾ ವಿಡಿಯೋ ಕಾಲ್ ಆಪ್ಷನ್ ಸೆಲೆಕ್ಟ್ ಮಾಡಿ. ನಿಮಗೆ ಯಾರದ್ದಾದರು ಕಾಲ್ ಬಂದಾಗ ಜಿಮೇಲ್ ನೋಟಿಫಿಕೇಶನ್ ನೀಡುತ್ತದೆ. ಜೊತೆಗೆ ಮಿಸ್ಸ್ಡ್ ಕಾಲ್ಅಲರ್ಟ್ ಅನ್ನು ಕೊಡುತ್ತದೆ.

ಪ್ರಸ್ತುತ ಈ ಫೀಚರ್ ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ವೆಬ್ ಆವೃತ್ತಿಯಲ್ಲಿ ಈ ಫೀಚರ್ ಸದ್ಯದಲ್ಲೇ ಲಭಿಸಲಿದೆ ಎಂದು ಕಂಪೆನಿ ತಿಳಿಸಿದೆ.

ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

ಇದನ್ನೂ ಓದಿ : Smartphone Battery life : ಸ್ಮಾರ್ಟ್‌ಫೋನ್ ಚಾರ್ಜ್ ಉಳಿಸಲು ಸ್ಮಾರ್ಟ್ ಸಲಹೆಗಳು

ಇದನ್ನೂ ಓದಿ : Meta Digital Safety: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಮಹಿಳೆ- ಮಕ್ಕಳ ಸುರಕ್ಷತೆಗೆ ಹೊಸ ಯೋಜನೆ ಘೋಷಣೆ

ಇದನ್ನೂ ಓದಿ : Reliance Jio Prepaid Plans : ಡಿಸ್ನಿ+ಹಾಟ್ ಸ್ಟಾರ್ ಪ್ರಿಪೇಯ್ಡ್ ಶುಲ್ಕ ಏರಿಸಿದ ರಿಲಯನ್ಸ್ ಜಿಯೋ: ಯಾವ ಪ್ಲಾನಿಗೆ ಏನೇನು ಸಿಗುತ್ತೆ?

( Gmail Voice Call : Google Gmail app now lets you make voice and video calls)

RELATED ARTICLES

Most Popular