ಆಧಾರ್ ಕಾರ್ಡ್ ಈ ದಿನಗಳಲ್ಲಿ ಬಹುತೇಕ ಎಲ್ಲೆಡೆ ಅಗತ್ಯವಿರುವ ಅತ್ಯಂತ ಅಗತ್ಯವಾದ ಗುರುತಿನ ಚೀಟಿಯಾಗಿದೆ. ಕೆಲವೊಮ್ಮೆ ನೀವು ಕೆಲವು ಅಧಿಕೃತ ಅಥವಾ ಸರ್ಕಾರಿ-ಸಂಬಂಧಿತ ಕೆಲಸಗಳಿಗಾಗಿ ನಿಮ್ಮ ಆಧಾರ್ ಅನ್ನು WhatsApp ಅಥವಾ ಇಮೇಲ್ ಮೂಲಕ ಪಡೆದುಕೊಳ್ಳಬೇಕಾದ ಸಂದರ್ಭ ಬರಬಹುದು. ಮನೆಗೆ ಫೋನ್ ಮಾಡಿ ಮನೆಯಲ್ಲಿ ಎಲ್ಲೋ ಇಟ್ಟಿರುವ ಆಧಾರ್ ಕಾರ್ಡನ್ನು ಹುಡುಕಿ ಫೋಟೊ ತೆಗೆದು ಕಳಿಸಿ ಎಂದು ಅಪ್ಪ ಅಮ್ಮನನ್ನೋ ಅಥವಾ ಹೆಂಡತಿ ಗಂಡನನ್ನೋ ದುಂಬಾಲು ಬೀಳಬೇಕಾದ ಸಂದರ್ಭ ಬರಬಹುದು. ಆದರೆ ಈ ಎಲ್ಲ ಸರ್ಕಸ್ ಮಾಡುವುದಕ್ಕಿಂತ ಆರಾಮಾಗಿ ಆಧಾರ್ ಕಾರ್ಡನ್ನು ನೀವು ಹೋದಲ್ಲೆಲ್ಲ ಒಯ್ಯಬಹುದಾದ ಒಂದು ಮಾರ್ಗವಿದೆ. ಸಾದೇ ಇ -ಆಧಾರ್ ಕಾರ್ಡ್. ಹೇಗಿದ್ದರೂ ನೀವೆಲ್ಲೇ ಹೋದರೂ ನಿಮ್ಮ ಕಿಸೆಯಲ್ಲಿ ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ( mobile simple tips ) ಅಂತೂ ಇದ್ದೇ ಇರುತ್ತದೆ. ನಿಮ್ಮ ಆಧಾರ್ ಕಾರ್ಡನ್ನೇ ಡೌನ್ಲೋಡ್ (How to Download Aadhar card) ಮಾಡಿಕೊಂಡು ಹೋದರೆ ಯಾವ ಚಿಂತೆಯಿಲ್ಲ. ಹಾಗಾದರೆ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ಎಂದುಕೊಂಡಿರಾ? ಇಲ್ಲಿದೆ ನೋಡಿ ಆಧಾರ್ ಕಾರ್ಡ್ ಒದಗಿಸುವ ಅಧಿಕೃತ ಸರ್ಕಾರಿ ವೆಬ್ಸೈಟ್ eaadhaar.uidai.gov.in ವಿಳಾಸಕ್ಕೆ (UIDAI) ಭೇಟಿ ನೀಡಿ.
1.ಡೌನ್ಲೋಡ್ ಎಲೆಕ್ಟ್ರಾನಿಕ್ ಕಾಪಿ ಆಫ್ ಯುವರ್ ಆಧಾರ್ ಲಿಂಕ್ ಕ್ಲಿಕ್ ಮಾಡಿ.
2.ಆಧಾರ್ ನಂಬರ್ ಆಯ್ಕೆಯನ್ನು ಕ್ಲಿಕ್ ಮಾಡಿ, 12 ಅಂಕಿಯ ನಿಮ್ಮ ಐಡಿಯನ್ನು ನಮೂದಿಸಿ.
3.ಮಾಸ್ಕ್ ಆಧಾರ್ ಕಾರ್ಡ್ ಬೇಕಾಗಿದ್ದಲ್ಲಿ, ಐ ವಾಂಟ್ ಮಾಸ್ಕಡ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.
4.ಸೆಂಡ್ ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದು ಆಧಾರ್ಗೆ ಲಿಂಕ್ ಮಾಡಲಾಗಿದ್ದ ಮೊಬೈಲ್ ಸಂಖ್ಯೆಗೆ ಒಂದು ಬಾರಿ ಬಳಸಬಹುದಾದ ಪಾಸ್ವರ್ಡ್ ಅಥವಶಾ ಒಟಿಪಿಯನ್ನು ನಿಮ್ಮ ಮೊಬೈಲ್ಗೆ ಕಳಿಸುತ್ತದೆ.
5.ನಿಮ್ಮ ಮೊಬೈಲ್ಗೆ ಬಂದ ಒಟಿಪಿಯನ್ನು ನಮೂದಿಸಿ. ಆಮೇಲೆ ಸಬ್ಮಿಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
6.ಒಟಿಪಿಯನ್ನು ನಮೂದಿಸಿದ ಬಳಿಕ ನಿಮ್ಮ ಆಧಾರ್ ಅನ್ನು ಪಿಡಿಎಫ್ ಆವೃತ್ತಿಯಲ್ಲಿ ಪಡೆಯಬಹುದು. ಒಟಿಪಿ ಸರಿಯಾಗಿ ಹಾಕದಿದ್ದರೆ ಪಿಡಿಎಫ್ ಸಿಗುವುದಿಲ್ಲ.
7.ಇದೀಗ ನೀವು ಪಾಸ್ವರ್ಡ್ ಹಾಕಬೇಕಾಗುತ್ತದೆ. ಇದರಿಂದ ನಿಮ್ಮ ಆಧಾರ್ ಅನ್ನು ಸುರಕ್ಷಿತವಾಗಿ ಮೊಬೈಲಿನಲ್ಲಿ ಬಳಸಬಹುದು. ನಿಮ್ಮ ಹುಟ್ಟಿದ ದಿನದ ಮೊದಲ ನಾಲ್ಕು ಅಂಕಿಗಳನ್ನು ಪಾಸ್ವರ್ಡ್ ಮಾಡುವುದರಿಂದ ಪಾಸ್ವರ್ಡ್ ನೆನಪಿಟ್ಟುಕೊಳ್ಳುವುದು ಕಷ್ಟವಾಗುವುದಿಲ್ಲ.
ಹೀಗೆ ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಆಧಾರ್ ಕಾರ್ಡನ್ನು ಭದ್ರವಾಗಿ ಇಟ್ಟುಕೊಳ್ಳಬಹುದು. ಅಗತ್ಯ ಬಿದ್ದಾಗ ಇ-ಆಧಾರ್ ಕಾರ್ಡ್ ಮೂಲಕವೇ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಬಹುದು. ಅಪ್ಪಿತಪ್ಪಿ ಆಧಾರ್ ಪಿಡಿಎಫ್ ಬೇರೆಯವರಿಗೆ ವಾಟ್ಸಾಪ್ ಅಥವಾ ಇನ್ಯಾವುದರ ಮೂಲಕ ಸೆಂಡ್ ಆದರೂ ಅವರು ನಿಮ್ಮ ಪಾಸ್ವರ್ಡ್ ಹಾಕದೇ ಅದನ್ನು ಓಪನ್ ಮಾಡಲು ಆಗುವುದಿಲ್ಲ. ತೀರಾ ಆದರೆ ನೆನಪು, ನೀವು ಜನ್ಮದಿನಾಂಕ ಅರ್ಥಾತ್ ಪಾಸ್ವರ್ಡ್ ಮರೆಯಬೇಡಿ.
ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್ ಕಾರ್ಡ್ ಮಾಹಿತಿ
ಇದನ್ನೂ ಓದಿ : Poco M3 battery explodes : ಪೋಕೊ M3 ಸ್ಮಾರ್ಟ್ಫೋನ್ ಸ್ಫೋಟದ ಸ್ಫೋಟಕ ಸುದ್ದಿಯಿದು
( How to Download Aadhar Card in your mobile simple tips in Kannada )