ಈ Google Map ಅನ್ನು ಇಂಟರ್‌ನೆಟ್ ಇಲ್ಲದೆಯೂ (No Internet) ಬಳಸಬಹುದು ಎಂಬುದು ನಿಮಗೆ ಗೊತ್ತೇ? ನೀವು ಎಲ್ಲಾದರು ಪ್ರವಾಸಕ್ಕೆ ಹೋಗಿರುತ್ತೀರಿ, ಅಥವಾ ಪ್ರಯಾಣ ಮಾಡುತ್ತಿರುತ್ತೀರಿ. ಆದರೆ ಉತ್ತಮ ಮೊಬೈಲ್ ಸಿಗ್ನಲ್ (Mobile Signal) ಅಲ್ಲಿ ಸಿಗುವುದಿಲ್ಲ. ಆದರೆ ಅದೇ ಸಂದರ್ಭದಲ್ಲಿ ನಿಮಗೆ ನೀವು ತಲುಪಬೇಕಿರುವ ಜಾಗ ಇನ್ನೂ ಎಷ್ಟು ದೂರವಿದೆ ಎಂದು ನೋಡಬೇಕಿದೆ. ಈಗ ಮಾಡುವುದಾದರೂ ಏನು? ಗೂಗಲ್ ಮ್ಯಾಪ್ ನೋಡಬೇಕಿತ್ತು, ಆದರೆ ಇಂಟರ್‌ನೆಟ್ ಇಲ್ಲ ಎಂದು ಬೇಸರಿಸಬೇಡಿ, ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ (Google Map Without Internet) ಬಳಸಬಹುದು! ಅದು ಹೇಗೆಂದು ತಿಳಿಯಲು ಈ ಸ್ಟೋರಿಯನ್ನು ತಪ್ಪದೇ ಕೊನೆಯವರೆಗೂ ಓದಿ.
Google Maps ಅಪ್ಲಿಕೇಶನ್ ನಮ್ಮೆಲ್ಲರಿಗೂ ದಾರಿ ತೋರಿಸುವ ಮಾರ್ಗದರ್ಶಕನಾಗಿದೆ ಎಮದರೂ ತಪ್ಪಾಗಲಾರದು. ಹೊಸದಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಭೇಟಿ ನೀಡಲಿ ಅಥವಾ ಗುರುತು ಪರಿಚಯವಿಲ್ಲದ ಊರಾಗಲಿ, ಗೂಗಲ್ ಮ್ಯಾಪ್ ಇದ್ದರೆ ಯಾವ ಜಾಗಕ್ಕೆ ಬೇಕಾದರೂ ತಲುಪಬಹುದು. ಆದರೆ ದಾರಿ ಹುಡುಕುವಾಗ ಗೂಗಲ್
ನೀವು Android ಸ್ಮಾರ್ಟ್‌ಫೋನ್ ಮತ್ತು iOS ಗಳಲ್ಲಿ Google Maps ಆಫ್‌ಲೈನ್ ಫೀಚರ್ ಬಳಸಬಹುದು. ಇದನ್ನು ಸಕ್ರಿಯಗೊಳಿಸಲು, ನಿಮ್ಮ ಸಾಧನದಲ್ಲಿ Google Map ಅಪ್ಲಿಕೇಶನ್‌ಗೆ ಹೋಗಿ.
ಈ ಫೀಚರ್‌ನ್ನು ಸಕ್ರಿಯಗೊಳಿಸಲು ನಿಮಗೆ ಇಂಟರ್‌ನೆಟ್ ಸಂಪರ್ಕ ಅತ್ಯಗತ್ಯ. ಮತ್ತು ಸ್ಮಾರ್ಟ್‌ಫೋನ್ ಇನ್‌ಕಾಗ್ನಿಟೋ ಮೋಡ್‌ನಲ್ಲಿ ಇರಬಾರದು.
ಇದೀಗ ಗೂಗಲ್ ಮ್ಯಾಪ್ ಅಪ್ಲಿಕೇಶನ್‌ನ ಬಲಭಾಗದ ಮೇಲ್ತುದಿಯನ್ನು ಗಮನಿಸಿ, ಅಲ್ಲಿ ನಿಮಗೆ ನಿಮ್ಮ ಪ್ರಪಫೈಲ್ ಪಿಕ್ಚರ್ ಕಾಣಿಸುತ್ತದೆ. ಜೊತೆಗೆ ಅಲ್ಲೆ ನಿಮಗೆ ಸರ್ಚ್ ಬಾರ್ ಕಾಣಿಸುತ್ತದೆ. ಅದನ್ನು ಸೆಲೆಕ್ಟ್ ಮಾಡಿ
ನಂತರ ನಿಮಗೆ Select Your Offline Map ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಸೆಲೆಕ್ಟ್ ಮಾಡಿ. ನಂತರ Select Your Own Map ಆಯ್ಕೆ ಮಾಡಿ.
ಇದೀಗ ಗೂಗಲ್ ಮ್ಯಾಪ್‌ನಲ್ಲಿ ತೋರಿಸುವ ನೀಲಿ ಗುರುತಿನೊಳಗೆ ನಿಮಗೆ ಅಗತ್ಯವಿರುವ ಎಲ್ಲ ಪ್ರದೇಶಗಳನ್ನೂ ಆಯ್ಕೆಮಾಡಿಕೊಳ್ಳಿ. ಅಂದರೆ ನಿಮಗೆ ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಎಲ್ಲೆಲ್ಲಿ ಬೇಕು ಎಂದು ಆ ನೀಲಿ ಸರ್ಕಲ್‌ನಲ್ಲಿ ಸೇರಿಸಿ.
ನಂತರ ಆಯ್ಕೆಮಾಡಿಕೊಂಡ ಪ್ರದೇಶಗಳ ಮ್ಯಾಪ್‌ನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಯೆಸ್ ! ಇದೀಗ ನೀವು ಡೌನ್‌ಲೋಡ್ ಮಾಡಿಕೊಂಡ ಆಫ್‌ಲೈನ್ ಮ್ಯಾಪ್ ಮೂಲಕ ನೀವು ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು. ಅಂದಹಾಗೆ ನಿಧಾನವಾಗಿ ಪ್ರಯಾಣಿಸಿ, ಹ್ಯಾಪಿ ಜರ್ನಿ!
ಇದನ್ನೂ ಓದಿ: UPI : ಇಂಟರ್‌ನೆಟ್ ಇಲ್ಲದೇ ಮಾಡಬಹುದು ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಯುಪಿಐ ವಹಿವಾಟು
(How to use Google Map Without Internet download offline map tips in Kannada)