ಕೆಲವು ತಿಂಗಳುಗಳಿಂದ ಭಾರತದ ಹಲವಾರು ಟೆಲಿಕಾಂ ಆಪರೇಟರ್ಗಳು ಪ್ರಿಪೇಯ್ಡ್(Prepaid) ಮತ್ತು ಪೋಸ್ಟ್ಪೇಡ್(Postpaid) ಪ್ಲಾನ್ಗಳ ದರವನ್ನು ಹೆಚ್ಚಿಸುತ್ತಿವೆ. BSNL ಸಹ 399 ಮತ್ತು 1499 ರೂಪಾಯಿಗಳ ಪ್ರಯೋಜನಗಳನ್ನು ಕಡಿತಗೊಳಿಸಿದೆ. ಆದರೆ, ದೇಶದ ಪ್ರಮುಖ ಟೆಲಿಕಾಂ ಆಪರೇಟರ್ಗಳಲ್ಲಿ ಒಂದಾದ ಏರ್ಟೆಲ್ ತನ್ನ ಪ್ರಿಪೇಯ್ಡ್ ಪ್ಲಾನ್ (Airtel Prepaid Plan) ನ ಪ್ರಯೋಜನಗಳನ್ನು ಹೆಚ್ಚಿಸಿದೆ.
ಬದಲಾವಣೆಯಾದ ಏರ್ಟೆಲ್ನ 265 ರೂ. ಪ್ರಿಪೇಯ್ಡ್ ಪ್ಲಾನ್ನ ಪ್ರಯೋಜನಗಳು :
ಏರ್ಟೆಲ್, ಪ್ರತಿದಿನ 1ಜಿಬಿ ಡಾಟಾ ಮತ್ತು 28 ದಿನಗಳ ವ್ಯಾಲಿಡಿಟಿ ನೀಡುವ 265 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿತ್ತು. ಅಂದರ ತಿಂಗಳಿಗೆ 28 ಜಿಬಿಗಳ ಡಾಟಾ ನೀಡಿತ್ತು. ಈ ಪ್ಯಾಕ್ ಬಳಕೆದಾರರಿಗೆ 2 ಜಿಬಿ ಮೌಲ್ಯದ ಉಚಿತ ಡಾಟಾ ಕೂಪನ್ ಅನ್ನು ನೀಡಿತ್ತು. ಅದನ್ನು 28 ದಿನಗಳ ವ್ಯಾಲಿಡಿಟಿಯಲ್ಲಿ ಬಳಸಬಹುದಾಗಿತ್ತು. ಈ ಸೌಲಭ್ಯಗಳ ಹೊರತಾಗಿ ಅನಿಯಮಿತ ಧ್ವನಿ ಕರೆ ಮತ್ತು ದಿನವೊಂದಕ್ಕೆ 100 SMS ನೀಡಿತ್ತು.
ಈಗ ಏರಟೆಲ್ ನ ರೂ. 265 ಪ್ರಿಪೇಯ್ಡ್ ಪ್ಲಾನ್30 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತಿದೆ. ಅಂದರೆ ಮೊದಲಿನ ಪ್ಯಾಕ್ ಗಿಂತ 2 ದಿನಗಳ ಹೆಚ್ಚಿವರಿ ವ್ಯಾಲಿಡಿಟಿ ಇದಾಗಿದೆ. ಇದರ ಜೊತೆಗೆ ಡಾಟಾ ಪ್ರಯೋಜನಗಳನ್ನು ದಿನವೊಂದಕ್ಕೆ 1.5 ಜಿಬಿ ವರೆಗೆ ಹೆಚ್ಚಿಸಿದೆ. ಪರಿಣಾಮವಾಗಿ ತಿಂಗಳಿಗೆ 45 ಜಿಬಿಗಳ 4ಜಿ ಹೈ–ಸ್ಪೀಡ್ ಡಾಟಾ ಬಳಕೆದಾರರಿಗೆ ಲಭಿಸಲಿದೆ. ಕಂಪನಿಯು ಹೆಚ್ಚಿವರಿಯಾಗಿ 17ಜಿಬಿ ಡಾಟಾ ವನ್ನು ಈ ಪ್ರಿಪೇಡ್ ಪ್ಲಾನ್ನಲ್ಲಿ ಒದಗಿಸಿದೆ.
ಇದನ್ನೂ ಹೊರತಾಗಿಯೂ,ಏರ್ಟೆಲ್ನ 265 ರೂ.ಗಳ ರಿಚಾರ್ಜ್ ಪ್ಲಾನ್ ಹೆಲೋಟ್ಯೂನ್ ಮತ್ತು ಫ್ರೀ Wync ಮ್ಯೂಸಿಕ್ ಅನ್ನು ನೀಡಿದೆ. ಈ ಪ್ರಯೋಜನಗಳು ಮೊದಲಿನ ಪ್ಯಾಕ್ನಂತೆಯೇ ಇದೆ. ಏರ್ಟೆಲ್ ಹೊಸ ರಿಚಾರ್ಜ್ ಯೋಜನೆಯನ್ನು ಹಂತಹಂತವಾಗಿ ಹೊರಬರಲಿದೆ.
ಇದನ್ನೂ ಓದಿ : Oppo A97 5G : ಒಪ್ಪೋ ನ ಹೊಸ A97 5G ಸ್ಮಾರ್ಟ್ಫೋನ್ ಅನಾವರಣ! ಬೆಲೆ ಮತ್ತು ವಿಶೇಷತೆಗಳು ಹೀಗಿದೆ…
ಇದನ್ನೂ ಓದಿ : Smartphones to Launch : ಭಾರತದಲ್ಲಿ ಈ ವಾರ ಬಿಡುಗಡೆ ಮತ್ತು ಮಾರಾಟಕ್ಕೆ ಸಿದ್ಧವಾಗಿರುವ ಸ್ಮಾರ್ಟ್ಫೋನ್ಗಳು!!
(Airtel new prepaid plan is just rs 265 and offers extra Benefits)