ನವದೆಹಲಿ : ISRO heaviest rocket: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ– ISRO) ಶನಿವಾರ ತಡರಾತ್ರಿ 12:07 ರ ಸುಮಾರಿಗೆ ತನ್ನ ಅತ್ಯಂತ ಭಾರವಾದ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಹೊಂದಿರುವ ಮೊದಲ ವಾಣಿಜ್ಯ ರಾಕೆಟ್‌ನ ಉಡಾವಣೆಯನ್ನು ನಡೆಸಿತು. ಇದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಇಸ್ರೋದ ಅಧ್ಯಕ್ಷ ವಿಜ್ಞಾನಿ ಎಸ್. ಸೋಮನಾಥ್ ಮಾತನಾಡಿ, ಇಸ್ರೋದ ರಾಕೆಟ್ ಎಲ್‌ವಿಎಂ3 (LVM3-M2) ಖಾಸಗಿ ಸಂವಹನ ಸಂಸ್ಥೆಯಾದ ಒನ್‌ವೆಬ್ (OneWeb) ನ 36 ಉಪಗ್ರಹಗಳನ್ನು ಹೊತ್ತೊಯ್ದಿದಿದೆ ಎಂದರು.
8,000 ಕೆ.ಜಿ.ವರೆಗಿನ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಂತ ಭಾರವಾದ ಉಪಗ್ರಹಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗಿದೆ. ಇದು ಸುಮಾರು 43.5 ಮೀಟರ್ ಉದ್ದದ ರಾಕೆಟ್‌ನ ಉಡಾವಣೆ ಆಗಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ. 36 OneWeb ಉಪಗ್ರಹಗಳ ಮತ್ತೊಂದು ಸೆಟ್ ಅನ್ನು LVM3 ಮುಂದಿನ ವರ್ಷದ ಮೊದಲಾರ್ಧದಲ್ಲಿ ಉಡಾವಣೆ ಮಾಡಲಿದೆ ಎಂದು ಅವರು ತಿಳಿಸಿದರು.
#WATCH | ISRO launches LVM3-M2/OneWeb India-1 Mission from Satish Dhawan Space Centre (SDSC) SHAR, Sriharikota
— ANI (@ANI) October 22, 2022
(Source: ISRO) pic.twitter.com/eBcqKrsCXn
ಇಸ್ರೋ ಉಡಾವಣೆ ಮಾಡಿರುವ LVM3 ಮೂರು ಹಂತದ ರಾಕೆಟ್ ಆಗಿದೆ. ಇದರಲ್ಲಿ ಎರಡು ಸಾಲಿಡ್ ಮೋಟಾರ‌್ ಸ್ಟೆಪ್‌ಗಳಿವೆ ಹಾಗೂ ಒಂದು ದ್ರವ ಪ್ರೊಪೆಲಂಟ್ ಕಾರ್ ಹಂತ ಮತ್ತು ಮಧ್ಯದಲ್ಲಿ ಕ್ರಯೋಜೆನಿಕ್ ಹಂತ ಹೊಂದಿದೆ. ಇದರ ಈ ಭಾರಿ ರೂಪದಿಂದಾಗಿ ಇದನ್ನು ಇಸ್ರೋದ ಬಾಹುಬಲಿ ಎಂದೂ ಕರೆಯುತ್ತಾರೆ. LVM 3-M2 ಮಿಷನ್ ಇದು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ಗೆ ಮೀಸಲಾದ ಮೊದಲ ವಾಣಿಜ್ಯ ಮಿಷನ್ ಆಗಿರುವುದರಿಂದ ಈ ಉಡಾವಣೆಯು ಇಸ್ರೋಗೆ ಬಹಳ ಮಹತ್ವಪೂರ್ಣವಾಗಿದೆ.
ISRO launches 36 satellites of OneWeb onboard #LVM3.
— All India Radio News (@airnewsalerts) October 22, 2022
The LVM3-M2 mission is a dedicated commercial mission for a foreign customer OneWeb, through NSIL
🚀First Indian rocket with 6 ton payload. pic.twitter.com/1Cj0vmAMAn
ಈ ಕಾರ್ಯಾಚರಣೆಯನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಬ್ರಿಟನ್ ಮೂಲದ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಒನ್‌ವೆಬ್ ಲಿಮಿಟೆಡ್) ನಡುವಿನ ವಾಣಿಜ್ಯ ವ್ಯವಸ್ಥೆಯ ಭಾಗವಾಗಿ ಕೈಗೊಳ್ಳಲಾಗಿದೆ. ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಒನ್‌ವೆಬ್‌ನ 36 ಉಪಗ್ರಹಗಳನ್ನು ಈ ಕಾರ್ಯಾಚರಣೆಯ ಅಡಿಯಲ್ಲಿ ಸಾಗಿಸಲಾಗಿದೆ. ಇದು 5,796 ಕೆಜಿಯಷ್ಟು ‘ಪೇಲೋಡ್’ ಅನ್ನು ಹೊತ್ತ ಮೊದಲ ಭಾರತೀಯ ರಾಕೆಟ್ ಆಗಿದೆ. ಒನ್‌ವೆಬ್ (OneWeb) ನಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಪ್ರಮುಖ ಹೂಡಿಕೆದಾರರಾಗಿದ್ದಾರೆ.
ಇದನ್ನೂ ಓದಿ : Reliance Jio Fixed-Line Service : ಬಿಎಸ್‌ಎನ್‌ಎಲ್ ಹಿಂದಿಕ್ಕಿದ ಜಿಯೋ : ಫಿಕ್ಸಡ್–ಲೈನ್ ಸರ್ವೀಸ್‌ನಲ್ಲೂ ಜಿಯೋದೇ ಪ್ರಾಬಲ್ಯ
(ISRO launches heaviest rocket lvm3-m2 OneWeb India-1 mission)