ಭಾನುವಾರ, ಏಪ್ರಿಲ್ 27, 2025
HomebusinessMark Zuckerberg loss: ಫೇಸ್‌ಬುಕ್ ಷೇರು ಪತನ; ಕೆಲವೇ ನಿಮಿಷದಲ್ಲಿ ಝುಕರ್‌ಬರ್ಗ್‌ಗೆ 2.31 ಲಕ್ಷ...

Mark Zuckerberg loss: ಫೇಸ್‌ಬುಕ್ ಷೇರು ಪತನ; ಕೆಲವೇ ನಿಮಿಷದಲ್ಲಿ ಝುಕರ್‌ಬರ್ಗ್‌ಗೆ 2.31 ಲಕ್ಷ ಕೋಟಿ ಲಾಸ್

- Advertisement -

ಕೆಲವು ಕೆಲವು ನಿಮಿಷಗಳಲ್ಲಿ ಏನಾಗುತ್ತೆ ಅಂತ ಎಷ್ಟೋ ಸಲ ನಾವು ಸಮಯವನ್ನು ಕಡೆಗಣಿಸುತ್ತೇವೆ. ಆದರೆ ಕೆಲವೇ ಕೆಲವು ನಿಮಿಷಗಳಲ್ಲಿ ಕೋಟ್ಯಾಂತರ ಹಣವನ್ನು ಕಳೆದುಕೊಂಡ ಅಥವಾ ಗಳಿಸಿದ ಉದಾಹರಣೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಫೇಸ್‌ಬುಕ್‌ನ (Facebook Share Loss) ಮಾರ್ಕ್ ಝುಕರ್‌ಬರ್ಗ್ (Mark Zuckerberg loss) ಇದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಅಮೆರಿಕದ ಷೇರುಪೇಟೆಯಲ್ಲಿ ಮೆಟಾ ಪ್ಲಾಟ್‌ಫಾರ್ಮ್ ಇಂಕ್ ಕಂಪನಿಯ ಷೇರು ಮೌಲ್ಯ ಇಳಿಕೆ ಆಗಿದ್ದರಿಂದ ಈ ಕಂಪನಿಯ ಒಡೆತನಕ್ಕೆ ಒಳಪಡುವ ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್‌ ಸಂಪತ್ತು 2.31 ಲಕ್ಷ ಕೋಟಿ ರೂಪಾಯಿ (31 ಬಿಲಿಯನ್ ಡಾಲರ್) ಕುಸಿತವಾಗಿದೆ. ಇದರಿಂದಾಗಿ 2015ರ ಜುಲೈ ನಂತರದಲ್ಲಿ ವಿಶ್ವದ 10 ಅತಿ ಶ್ರೀಮಂತರ ಪಟ್ಟಿಯಿಂದ ಝುಕರ್‌ಬರ್ಗ್‌ಹೊರಗುಳಿಯುವಂತಾಗಿದೆ.

ಫೇಸ್ಬುಕ್‌ನ ಮಾತೃಸಂಸ್ಥೆ ಮೆಟಾ ಪ್ಲಾಟ್‌ಫಾರಂ ಇಂಕ್ ಷೇರು ಮೌಲ್ಯ ಪತನವಾಗಿದ್ದರಿಂದ ಇದರ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ ಸಂಪತ್ತು 2.31 ಲಕ್ಷ ಕೋಟಿ ರೂಪಾಯಿ (31 ಬಿಲಿಯನ್ ಡಾಲರ್) ಇಳಿಕೆ ಆಗಿದೆ.

ಮೆಟಾ ಪ್ಲಾಟ್‌ಫಾರ್ಮ್‌ ಷೇರು ಬೆಲೆ ಗುರುವಾರ ವಹಿವಾಟಿನಲ್ಲಿ ಶೇ. 22ರಷ್ಟು ಇಳಿಕೆ ಆಗಿದೆ. ಇದರಿಂದ ಹೂಡಿಕೆದಾರರಿಗೆ ಕೆಲವು ನಿಮಿಷಗಳ ಅಂತರದಲ್ಲಿ 1.50 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದು ಒಂದೇ ದಿನದಲ್ಲಿ ಜಾಗತಿಕವಾಗಿ ಆಗಿರುವ ದೊಡ್ಡ ನಷ್ಟ. ಫೇಸ್‌ಬುಕ್ ತ್ರೈಮಾಸಿಕ ಲೆಕ್ಕಪತ್ರವನ್ನು ಗುರುವಾರ ಪ್ರಕಟಿಸಿದ್ದು, ಬಳಕೆದಾರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಈ ರೀತಿಯ ಆಗಿರುವುದು ಇದೇ ಮೊದಲು. ತತ್ಪರಿಣಾಮ ಆತಂಕಕ್ಕೆ ಒಳಗಾದ ಷೇರುದಾರರು ಷೇರು ಮಾರಾಟಕ್ಕೆ ತೊಡಗಿದ್ದರಿಂದ ಮೆಟಾ ಪ್ಲಾಟ್‌ಫಾರ್ಮ್‌ ನಷ್ಟ ಅನುಭವಿಸಿತು.

ಟೆಸ್ಲಾ ಕಂಪನಿಯ ಮಾಲಿಕ ಎಲಾನ್ ಮಸ್ಕ್ 2.61 ಲಕ್ಷ ಕೋಟಿ ರೂಪಾಯಿ (35 ಬಿಲಿಯನ್ ಡಾಲರ್) ನಷ್ಟ ಅನುಭವಿಸಿ ಜಾಗತಿಕ ಅತಿ ಶ್ರೀಮಂತರ ಪಟ್ಟಿಯ ಮೊದಲ ಸ್ಥಾನದಿಂದ ಕೆಳಗೆ ಇಳಿದಿದ್ದರು. ಕಳೆದ ವಾರ ಕೂಡ ಮಸ್ಕ್ ಅವರ ಸಂಪತ್ತು 1.92 ಲಕ್ಷ ಕೋಟಿ ರೂಪಾಯಿ (25.8 ಬಿಲಿಯನ್ ಡಾಲರ್) ಕುಸಿದಿತ್ತು.

ಇತ್ತೀಚಿಗೆ ಫೇಸ್‌ಬುಕ್ ಬಿಡುಗಡೆಗೊಳಿಸಿದ ಅಪ್‌ಡೇಟ್ ಏನು?
ಫೇಸ್‌ಬುಕ್ ಮೆಸೆಂಜರ್‌ನಲ್ಲಿ (Facebook Messenger Update) ಹೊಸದೊಂದು ಅಪ್‌ಡೇಟ್ ಮಾಡಲಾಗಿದೆ. ಸೀಕ್ರೆಟ್ ಮೆಸೇಜ್ ಫೀಚರ್‌ನಲ್ಲಿ ಹೊದೊಂದು ಅಪ್‌ಡೇಟ್ ನವೀಕರಿಸಲಾಗಿದೆ. ಇದು ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ (E2EE) ಸಂವಹನ ಮಾಡುವ ಅವಕಾಶ ನೀಡುತ್ತದೆ. ಮೆಸೆಂಜರ್ ಒಳಗೆ ಸ್ಕ್ರೀನ್‌ಶಾಟ್‌ಗಳನ್ನು ತೆಗೆದರೆ ಬಳಕೆದಾರರಿಗೆ ತಿಳಿಸುತ್ತದೆ. ಇದು ಈಗ ಮೆಸೇಜ್ ರಿಯಾಕ್ಷನ್, ಜಿಐಎಫ್‌ಗಳು ಮತ್ತು ಸ್ಟಿಕ್ಕರ್‌ಗಳಂತಹ ಸಾಮಾನ್ಯ ಸಂಭಾಷಣೆಗಳನ್ನು ಸಹ ಸಪೋರ್ಟ್ ಮಾಡುತ್ತದೆ.

ಇದನ್ನೂ ಓದಿ: Facebook Messenger Update: ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಹೊಸ ಅಪ್‌ಡೇಟ್; ಸ್ಕ್ರೀನ್‌ಶಾಟ್ ತೆಗೆದರೆ ಥಟ್ಟನೆ ಗೊತ್ತಾಗುತ್ತೆ!

(Mark Zuckerberg loss 29 dollars billion loss facebook Meta share crash)

RELATED ARTICLES

Most Popular