ಮಂಗಳವಾರ, ಏಪ್ರಿಲ್ 29, 2025
HometechnologyNetflix: ನೆಟ್ ಫ್ಲಿಕ್ಸ್ ಪಾಸ್ ವರ್ಡ್ ಶೇರ್ ಮಾಡುವ ಮುನ್ನ ಎಚ್ಚರ: ಯಾಮಾರಿದ್ರೆ ಜೇಬಿಗೆ ಬೀಳುತ್ತೆ...

Netflix: ನೆಟ್ ಫ್ಲಿಕ್ಸ್ ಪಾಸ್ ವರ್ಡ್ ಶೇರ್ ಮಾಡುವ ಮುನ್ನ ಎಚ್ಚರ: ಯಾಮಾರಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ

- Advertisement -

Netflix password : ಅದೊಂದು ಕಾಲವಿತ್ತು. ಒಂದು ಸಿನಿಮಾ ನೋಡ್ಬೇಕಾದ್ರೆ ಭಾನುವಾರಕ್ಕೆ ಕಾಯ್ತಾ ಕೂತಿರಬೇಕಿತ್ತು. ಆಮೇಲೆ ಪ್ರತಿ ಮನೆಯಲ್ಲಿ ಟಿವಿ ಬಂತು. ನೂರೆಂಟು ಚಾನೆಲ್ ಗಳು ಬಂದವು. ಇದರ ಜೊತೆಗೆ ತಮ್ಮಿಷ್ಟದ ಹೀರೋ ಮೂವಿ ರಿಲೀಸ್ ಆದಾಗೆಲ್ಲಾ ಜನ ಥಿಯೇಟರ್ ಗೆ ಧಾವಿಸೋಕೆ ಶುರು ಮಾಡಿದ್ರು. ಅದೆಲ್ಲಾ ಹೋಗಿ ಈಗ ಓಟಿಟಿ ಪ್ಲಾಟ್ ಫಾರ್ಮ್‍ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಕೈಯಲ್ಲೊಂದು ಆಂಡ್ರಾಯ್ಡ್ ಮೊಬೈಲ್ ಇದ್ರೆ ಸಾಕು.. ಓಟಿಟಿಗೆ ಹಣ ಕಟ್ಟಿ ಅದರಲ್ಲಿ ಬರುವ ವೆಬ್ ಸೀರೀಸ್, ಮೂವಿಗಳು, ಸೀರಿಯಲ್ ಗಳನ್ನು ಎಷ್ಟು ಬೇಕಾದ್ರೂ ನೋಡಬಹುದು. ಬರೀ ಒಬ್ಬರೇ ಅಲ್ಲ. ಒಂದು ಮೊಬೈಲ್ ಗೆ ಓಟಿಟಿಗೆ ಹಣ ಕಟ್ಟಿದ್ರೆ ಎಷ್ಟು ಜನರಿಗೆ ಬೇಕಾದ್ರೂ ಶೇರ್ ಮಾಡಿ ಅವರು ಎಲ್ಲಿಯೋ ಕೂತು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಅವರಿಗೆ ಇಷ್ಟಬಂದಿದ್ದನ್ನು ನೋಡಬಹುದಿತ್ತು. ಆದರೆ ಇದೀಗ ಸದ್ಯದಲ್ಲೇ ಜನರ ಜೇಬಿಗೆ ಕತ್ತರಿ ಬೀಳಲಿದೆ.

ಇನ್ಮುಂದೆ ನೆಟ್ ಫ್ಲಿಕ್ಸ್ ಅಕೌಂಟ್ ಪಾಸ್ ವರ್ಡ್ ಶೇರ್ ಮಾಡುವ ಮುನ್ನ ಸ್ವಲ್ಪ ಯೋಚಿಸಬೇಕು. ಯಾಕಂದ್ರೆ ಸ್ವಲ್ಪ ಯಾಮಾರಿದ್ರೂ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ತಾಣ ನೆಟ್ ಫ್ಲಿಕ್ಸ್ ವೀಕ್ಷಕರು ಇನ್ಮುಂದೆ ಅಕೌಂಟ್ ಪಾಸ್ ವರ್ಡ್ ಹಂಚಿಕೊಳ್ಳಲು ಹೆಚ್ಚುವರಿ ಹಣ ಪಾವತಿಸಬೇಕು. ತಮ್ಮ ಮನೆಯವರನ್ನು ಹೊರತುಪಡಿಸಿ ಬೇರೆ ಯಾವುದೇ ಸದಸ್ಯರ ಜೊತೆ ಪಾಸ್ ವರ್ಡ್ ಹಂಚಿಕೊಂಡಾಗ ಹೆಚ್ಚುವರಿ ಹಣ ಪಾವತಿಸಬೇಕೆಂದು ನೆಟ್ ಫ್ಲಿಕ್ಸ್ ಸಂಸ್ಥೆ ತಿಳಿಸಿದೆ. ಈ ಹಣವನ್ನು ಬಿಲ್ಲಿಂಗ್ ಲಿಸ್ಟ್ ನಲ್ಲಿ ಹೆಚ್ಚುವರಿ ಸದಸ್ಯ ಎಂದು ಸೇರಿಸಲಾಗುತ್ತದೆ ಎಂದು ಅದು ಹೇಳಿದೆ.

ನೆಟ್ ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ಇನ್ನೊಬ್ಬರಿಗೆ ಶೇರ್ ಮಾಡುವ ಮೂಲಕ ಹಣಗಳಿಸುವ ವಿಧಾನ ತರಲಿದ್ದೇವೆ. 2023ರ ಆರಂಭದಲ್ಲಿ ಇದನ್ನು ವಿಶಾಲವಾಗಿಸುವ ಆಲೋಚನೆಯಿದೆ. ಗ್ರಾಹಕರ ಪ್ರತಿಕ್ರಿಯೆ ಗಮನಿಸಿ ಬಳಿಕ ಕೆಲ ಬದಲಾವಣೆ ತರುವ ಬಗ್ಗೆಯೂ ಆಲೋಚಿಸುತ್ತೇವೆ ಎಂದು ನೆಟ್ ಫ್ಲಿಕ್ಸ್ ಸಂಸ್ಥೆ ತಿಳಿಸಿದೆ. ಸದ್ಯ ನೆಟ್ ಫ್ಲಿಕ್ಸ್ ಅಕೌಂಟ್ ಪಾಸ್ ವರ್ಡ್ ಶೇರ್ ಮಾಡಿಕೊಂಡಾಗ ಹೆಚ್ಚುವರಿ ಹಣ ಪಾವತಿಸುವಂತೆ ನೆಟ್ ಫ್ಲಿಕ್ಸ್ ಹೇಳಿದೆ ಆದರೆ ಎಷ್ಟು ಹಣ ಪಾವತಿಸಬೇಕೆಂಬ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Kannada Rajyotsava 2022: ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಬಗ್ಗೆ ನಿಮಗೆಷ್ಟು ಗೊತ್ತು

ಇದನ್ನೂ ಓದಿ: Tuition Center Registration : ಮನೆ ಮನೆಯಲ್ಲಿ ಟ್ಯೂಶನ್ ಮಾಡುವಂತಿಲ್ಲ: ಹೊರಬಿತ್ತು ಶಿಕ್ಷಣ ಇಲಾಖೆ ಆದೇಶ

Netflix: think twice before sharing your netflix account password with others

RELATED ARTICLES

Most Popular