ಪಬ್ ಜೀ ಭಾರತದಲ್ಲಿ ಬ್ಯಾನ್ ಆಗಿದೆ. ಆದ್ರೀಗ ಹೊಸ ರೂಪದಲ್ಲಿ ಪಬ್ ಜೀ ಅವತರಿಸಿದೆ. ಇದೀಗ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬೇಟಾ ವರ್ಷನ್ ಬಿಡುಗಡೆಯಾಗಿದ್ದು, ಪ್ರೀ ರಜಿಸ್ಟ್ರರ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪ್ರಮುಖವಾಗಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಂಡ್ರಾಯ್ಡ್ ವರ್ಷನ್ ಮಾತ್ರವೇ ಬಿಡುಗಡೆಯಾಗಿದ್ದು, ಸುಮಾರು 600MB ಸ್ಪೇಸ್ ತೆಗೆದುಕೊಳ್ಳಲಿದೆ. ಹೀಗಾಗಿ ಹೆಚ್ಚುವರಿ ಸ್ಪೇಸ್ ನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಹೊಂದಿರಲೇ ಬೇಕು. ಅಷ್ಟೇ ಅಲ್ಲಾ ಕನಿಷ್ಠ ನಿಮ್ಮ ಮೊಬೈಲ್ ಅಂಡ್ರಾಯ್ಡ್ 5.1 ಅಪ್ಡೇಟ್ ಆಗಿದ್ದರೆ ಮಾತ್ರ ಬಳಕೆ ಮಾಡಬಹುದಾಗಿದೆ.
ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್ ಪೋನ್ ಗಳಲ್ಲಿಯೂ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಂಡ್ರಾಯ್ಡ್ ವರ್ಷನ್ ಬಳಕೆ ಮಾಡಬಹು ದಾಗಿದೆ. ನಿಮ್ಮ ಫೋನ್‌ನಲ್ಲಿನಲ್ಲಿ ಕನಿಷ್ಠ 2GB RAM ಹೊಂದಿರಬೇಕು. ಬೇಟಾ ವರ್ಷನ್ ಆಗಿರೋದ್ರಿಂದಾಗಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ನೀವು ಬಳಕೆ ಮಾಡುವ ಇಂಟರ್ ನೆಟ್ ಸ್ಪೀಡ್ ಹೆಚ್ಚಾಗಿಯೇ ಬೇಕು. ಅಲ್ಲೇ ಹೆಚ್ಚು RAM ಹೊಂದಿರುವ ಮೊಬೈಲ್ ಗಳಲ್ಲಿ ಉತ್ತಮ ಅನುಭವವನ್ನು ಪಡೆಯಬಹುದಾಗಿದೆ.
ಈಗಾಗಲೇ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಂಡ್ರಾಯ್ಡ್ ವರ್ಷನ್ ಆಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಆದರೆ 18 ವರ್ಷ ಕ್ಕಿಂತ ಕೆಳಗಿನ ವಯೋಮಾನದವರಿಗೆ ಪಬ್ ಜೀ ಆಡಲು ನಿರ್ಬಂಧ ವಿಧಿಸಲಾಗಿದೆ. 18 ವರ್ಷ ಮೇಲ್ಪಟ್ಟವರ ಹೆಸರಿನಲ್ಲಿಯೇ ಆಟವನ್ನು ನೋಂದಾಯಿಸಿಕೊಳ್ಳಬಹುದಾಗಿದೆ.