ರೆಡ್‌ಮಿ(Redmi Note 11) ಜಾಗತಿಕ ಮಾರುಕಟ್ಟೆಗೆ ತನ್ನ ಮೂರು ಹೊಸ 5ಜಿ ಸ್ಮಾರ್ಟ್‌ಫೋನ್‌ಗಳನ್ನು ರೆಡ್‌ಮಿ ನೋಟ್ 11 ಸೀರೀಸ್‌ನ ಅಡಿಯಲ್ಲಿ ಲಾಂಚ್ ಮಾಡಿದೆ. ಹೊಸದಾಗಿ ಪರಿಚಯಿಸಿದ ಸ್ಮಾರ್ಟ್‌ಫೋನ್‌ಗಳೆಂದರೆ ರೆಡ್‌ಮಿ ನೋಟ್ 11ಪ್ರೋ+ 5ಜಿ, ನೋಟ್ 11s 5ಜಿ ಮತ್ತು ರೆಡ್‌ಮಿ 10 5ಜಿ. ಕಂಪನಿ ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ವರ್ಚ್ಯುಲ್ ಈವೆಂಟ್ ಮೂಲಕ ಲಾಂಚ್ ಮಾಡಿದೆ.
ಬೆಲೆ ಮತ್ತು ಲಭ್ಯತೆ :
ಲಾಂಚ್ ಮಾಡಿದ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ರೆಡ್‌ಮಿ ನೋಟ್ 11ಪ್ರೋ + 5ಜಿ ಗೆ ಅತ್ಯಂತ ಹೆಚ್ಚಿನ ಪ್ರೀಮಿಯಂ ಕೊಡುಗೆ ನೀಡಿದೆ. ಇದರ ಬೇಸಿಕ್ ಮಾಡೆಲ್ 6ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿದ್ದರೆ, 8ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಮಧ್ಯಮ ರೇಂಜ್ ಆಗಿದೆ. ಈ ಸೀರೀಸ್‌ನ ಟಾಪ್ ಎಂಡ್ ಸ್ಮಾರ್ಟ್‌ಫೋನ್ 8ಜಿಬಿ RAM ಮತ್ತು 256 ಜಿಬಿ ಸ್ಟೋರೋಜ್ ಹೊಂದಿದೆ.
ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿರುವ ರೆಡ್‌ಮಿ ನೋಟ್ 11s ಬೇಸಿಕ್ ಮಾಡಲ್ 4ಜಿಬಿ RAM ಮತ್ತು 128ಜಿಬಿ ಸ್ಟೋರೇಜ್ ಇದೆ. ಇದರ ಟಾಪ್ ಎಂಡ್ ಸ್ಮಾರ್ಟ್‌ಫೋನ್ 6ಜಿಬಿ RAM ಮತ್ತು 128ಜಿಬಿ ಸ್ಟೋರೇಜ್ ಹೊಂದಿದೆ.
ಕೊನೆಯದಾಗಿ ರೆಡ್‌ಮಿ 105ಜಿ ಸ್ಮಾರ್ಟ್‌ಫೋನ್ 4ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹಾಗೂ 4ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಗಳಲ್ಲಿ ಲಭ್ಯವಾಗಲಿದೆ.
ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಎಪ್ರಿಲ್ 6 ರಿಂದ ಮಾರಾಟ ಪ್ರಾರಂಭಿಸುತ್ತವೆ ಮತ್ತು ಇವುಗಳ ಲಭ್ಯತೆ ಮತ್ತು ಬೆಲೆಯು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಬದಲಾಗುವುದು ಎಂದು ಕಂಪನಿ ತಿಳಿಸಿದೆ.
ರೆಡ್‌ಮಿ ನೋಟ್ 11 ಪ್ರೋ+ 5ಜಿ ವೈಶಿಷ್ಟ್ಯಗಳು :
ರೆಡ್‌ಮಿ ನೋಟ್ 11 ಪ್ರೋ+ 5ಜಿ 6.67 ಇಂಚ್‌ನ AMOLED ಪ್ಯಾನಲ್ 120 Hz ಹೈ ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರ ಜೊತೆಗೆ 920 ಚಿಪ್‌ಸೆಟ್ ಡೈಮೆನ್‌ಸಿಟಿಯ ಅನ್ನು 8ಜಿ RAM ಮತ್ತು 256 ಜಿಬಿ ಆನ್‌ಬೋರ್ಡ್ ಸ್ಟೋರೇಜ್ ನೊಂದಿಗೆ ಹೊಂದಿಸಲಾಗಿದೆ.
ಇನ್ನು ಕ್ಯಾಮರಾದ ವಿಷಯದಲ್ಲಿ 108 ಮೆಗಾಪಿಕ್ಸಲ್ ಪ್ರೈಮರಿ ಸೆನ್ಸಾರ್, 8 ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸಲ್ ಮ್ಯಾಕ್ರೋ ಸೆನ್ಸಾರ್‌ಗಳನ್ನು ಸಪೋರ್ಟ್ ಮಾಡುತ್ತದೆ. ಇದು ಸೆಲ್ಫೀ ಮತ್ತು ವಿಡಿಯೋ ಕಾಲ್‌ಗಾಗಿ 16 MP ಫ್ರಂಟ್ ಕ್ಯಾಮರಾ ಹೊಂದಿದೆ.
ಬ್ಯಾಟರಿಯ ಸಾಮರ್ಥ್ಯವು 4500mAH ಇದ್ದು, 120W ಹೈಪರ್ ಚಾರ್ಜ್ ವೈಶಿಷ್ಟ್ಯವಿರುವ ಸ್ಮಾರ್ಟ್‌ಫೋನ್ ಕೇವಲ 15 ನಿಮಿಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಬಹುದಾಗಿದೆ.
ಇದನ್ನೂ ಓದಿ: Charger for Smartphone ನೀವು ಆಯ್ದುಕೊಂಡ ಚಾರ್ಜರ್ ನಿಮ್ಮ ಮೊಬೈಲ್‌ಗೆ ಹೇಳಿಮಾಡಿಸಿದಂತಿದೆಯೇ?
ರೆಡ್‌ಮಿ ನೋಟ್ 11s 5ಜಿ ವೈಶಿಷ್ಟ್ಯಗಳು:
ರೆಡ್‌ಮಿ ನೋಟ್ 11s 5ಜಿ ಯು ಪೋಕೋ M4 ಪ್ರೋ 5ಜಿ ಯನ್ನೇ ಹೊಸದಾಗಿ ರೀಬ್ಯಾಡ್ಜ್ ಮಾಡಲಾಗಿದೆ ಎಂದು ಹೇಳಲಾಗಿದೆ. 6.6 ಇಂಚ್‌ನ IPS LCD ಫುಲ್ ಎಚ್‌ಡಿ+ ಡಿಸ್ಪ್ಲೇ ಹೊಂದಿದ್ದು 90 Hz ರಿಫ್ರೆಶ್ ರೇಟ್‌ಅನ್ನು ಒಳಗೊಂಡಿದೆ. ಇದು 810 ಚಿಪ್‌ಸೆಟ್‌ನ ಆಕ್ಟಾ–ಕೋರ್ ಡೈಮೆನ್ಸಿಟಿ ಯ 2.4GHz ನಿಂದ ಚಾಲಿತವಾಗಿದೆ. ಇದು 6ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ನಿಂದ ಜೋಡಿಸಲ್ಪಟ್ಟಿದೆ.
ಈ ಸ್ಮಾರ್ಟ‌್ಫೋನ್ 50 ಮೆಗಾಪಿಕ್ಸಲ್ ಮೈನ್ ಸ್ನಾಪರ್ ನ ಟ್ರಿಪ್ಪಲ್ ರಿಯರ್ ಕ್ಯಾಮರಾ ಹೊಂದಿದೆ. 8 ಮೆಗಾಪಿಕ್ಸಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸಲ್ ಮ್ಯಾಕ್ರೋ ಸೆನ್ಸಾರ್‌ಗಳನ್ನೊಳಗೊಂಡಿದೆ. ಸೆಲ್ಫಿಗಾಗಿ 16MPಯ ಫ್ರಂಟ್ ಕ್ಯಾಮರಾ ಹೊಂದಿದೆ.
33W ಫಾಸ್ಟ್‌ಚಾರ್ಜಿಂಗ್ ಬೆಂಬಲಿಸುವ 5000mAh ಬ್ಯಾಟರಿ ಸಾಮರ್ಥ್ಯ ಒಳಗೊಂಡಿದೆ.
ರೆಡ್‌ಮಿ 10 5ಜಿ ಯ ವೈಶಿಷ್ಟ್ಯಗಳು :
ರೆಡ್‌ಮಿ 10 5ಜಿ ಅನ್ನು ರೆಡ್‌ಮಿ ನೋಟ್ 11 ಸೀರಿಸ್ ಫೋನ್‌ಗಳ ಜೊತೆಗೆ ಕಂಪನಿ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಕೆಳೆದ ತಿಂಗಳು ಚೀನಾದಲ್ಲಿ ಲಾಂಚ್ ಮಾಡಿದೆ ರೆಡ್‌ಮಿ ನೋಟ್ 11E ಯ ವೈಶಿಷ್ಟ್ಯಗಳನ್ನೇ ಹೆಚ್ಚಾಗಿ ಹೋಲುತ್ತದೆ ಎನ್ನಲಾಗಿದೆ. ಇದು 5ಜಿ ಸಕ್ರೀಯಗೊಳಿಸಿದ 700ಚಿಪ್‌ಸೆಟ್ ಡೈಮೆನ್ಸಿಟಿ ಹೊಂದಿದೆ.
ರೆಡ್‌ಮಿ 10 5ಜಿ ಯು 90Hz ರೆಫ್ರೆಶ್ ರೇಟ್ ಬೆಂಬಲಿಸುವ 6.58 ಇಂಚ್‌ನ IPS LCD HD + ಡಾಟ್ ಡಿಸ್ಪ್ಲೇ ಮತ್ತು 50 ಮೆಗಾಪಿಕ್ಸಲ್ ಮೇನ್ ಲೆನ್ಸ‌್ ಮತ್ತು 2 ಮೆಗಾಪಿಕ್ಸಲ್ ಡೆಪ್ತ್ ಸೆನ್ಸಾರ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮರಾ ಸೆಟ್‌ಅಪ್ ಅನ್ನು ಹೊಂದಿದೆ. ಇದು ಸೆಲ್ಫಿಗಾಗಿ 8MP ಫ್ರಂಟ್ ಕ್ಯಾಮರಾ ಸಹ ಹೊಂದಿದೆ.
ಇದನ್ನೂ ಓದಿ: Fast Charging Smartphones: ಭಾರತದ ಟಾಪ್ 5 ಫಾಸ್ಟ್ ಚಾರ್ಜಿಂಗ್ ಫೋನುಗಳಿವು;
(Redmi Note 11 launched 3 smartphones globally check price and specification)