ಮಂಗಳವಾರ, ಏಪ್ರಿಲ್ 29, 2025
HometechnologyRedmi Note 11S: ಫೆಬ್ರವರಿ 9ರಂದು ರೆಡ್ಮಿ ನೋಟ್ 11ಎಸ್ ಬಿಡುಗಡೆ; ಲೀಕ್ ಆಯ್ತು ಫೀಚರ್

Redmi Note 11S: ಫೆಬ್ರವರಿ 9ರಂದು ರೆಡ್ಮಿ ನೋಟ್ 11ಎಸ್ ಬಿಡುಗಡೆ; ಲೀಕ್ ಆಯ್ತು ಫೀಚರ್

- Advertisement -

ತನ್ನ ವಿಭಿನ್ನ ವೈಶಿಷ್ಟ್ಯಗಳಿಗೆ ಹೆಸರುವಾಸಿ ಆಗಿರುವ ರೆಡ್‌ಮಿ ಸ್ಮಾರ್ಟ್ ಫೋನ್ ಬ್ರಾಂಡ್ ಮುಂದಿನ ತಿಂಗಳು ಇನ್ನೊಂದು ಹೊಸ ಫೋನ್ ರಿಲೀಸ್ ಮಾಡಲಿದೆ. ರೆಡ್ಮಿಯ ಮುಂದಿನ ಫೋನ್ ರೆಡ್ಮಿ ನೋಟ್ 11ಎಸ್ ಆಗಿದ್ದು (Redmi Note 11S) ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ. ರೆಡ್ಮಿ ಇಂಡಿಯಾದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ , ಕಂಪನಿಯು ರೆಡ್ಮಿ ನೋಟ್11ಎಸ್ ಸ್ಮಾರ್ಟ್‌ಫೋನ್ ಅನ್ನು (Redmi Note 11S) ಫೆಬ್ರವರಿ 9 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಘೋಷಿಸಿದೆ.

ಕಂಪನಿಯು ತನ್ನ ಅಧಿಕೃತ ವೆಬ್ಸೈಟ್‌ನಲ್ಲಿ (Mi.com) ರೆಡ್ಮಿ ನೋಟ್ 11 ಎಸ್‌ಗಾಗಿ ವಿಶೇಷ ಟೀಸರ್ ಪುಟವನ್ನು ಸಹ ರಚಿಸಿದೆ. ಮುಂದಿನ ದಿನಗಳಲ್ಲಿ ಮುಂದಿನ ಇತರ ವೈಶಿಷ್ಟ್ಯಗಳು ಮತ್ತು ಸ್ಪೆಸಿಫಿಕೇಶನ್ ಕುರಿತು ಕ್ರಮೇಣ ಬಹಿರಂಗಪಡಿಸುತ್ತದೆ ಎಂದು ಸೂಚಿಸುವ ‘ಸ್ಟೇ ಟ್ಯೂನ್ಡ್” ಎಂದು ಟ್ವೀಟ್ ಮಾಡಿದೆ. ಸ್ಪೆಸಿಫಿಕೇಶನ್ ಮತ್ತು ವೈಶಿಷ್ಟ್ಯಗಳು ಅಧಿಕೃತವಲ್ಲದಿದ್ದರೂ, ಈಗಾಗಲೇ ಸ್ಮಾರ್ಟ್‌ಫೋನ್ ಕುರಿತು ಹಲವು ವಿವರಗಳ ಲೀಕ್ ಆಗಿವೆ.

ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು
ಫೋಟೋ ಟೀಸರ್‌ನೊಂದಿಗೆ, ರೆಡ್ಮಿ ನೋಟ್ 11 ಎಸ್ ಪ್ರಾಥಮಿಕ ಕ್ಯಾಮೆರಾ ಮತ್ತು ಇತರ ಮೂರು ಸೆಕೆಂಡರಿ ಕ್ಯಾಮೆರಾಗಳೊಂದಿಗೆ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದಕ್ಕೂ ಮೊದಲು,ಲೀಕ್ ಆದ ಮಾಹಿತಿ ಪ್ರಕಾರ ಈ ಫೋನ್ 108 ಎಂಪಿ ಮುಖ್ಯ ಕ್ಯಾಮೆರಾ ಲೆನ್ಸ್ ಜೊತೆಗೆ 8 ಎಂಪಿ ಅಲ್ಟ್ರಾವೈಡ್, 2ಎಂಪಿ ಮ್ಯಾಕ್ರೋ ಕ್ಯಾಮೆರಾ ಮತ್ತು 2ಎಂಪಿ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ. ಮುಂಭಾಗದಲ್ಲಿ, ಇದು 13ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಕೆಲವು ವ್ಯತ್ಯಾಸಗಳಿದ್ದರೂ ರೆಡ್ಮಿ ನೋಟ್ 11ಎಸ್, ರೆಡ್ಮಿ ನೋಟ್ 10ಎಸ್ಗೆ ಹೋಲುತ್ತದೆ ಎಂದು ಲೀಕ್ ಆದ ವರದಿ ಸೂಚಿಸಿದೆ. ಇದು ಅಮೋಲ್ಡ್ ಪ್ಯಾನಲ್ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಅವರು ಹೇಳುತ್ತಾರೆ. ವಿಭಿನ್ನ ಸೋರಿಕೆಯಾದ ವಿವರಗಳಲ್ಲಿ ಇದು 90 ಹರ್ಟ್ಸ್ ಡಿಸ್ಪ್ಲೇ ಮತ್ತು ಮೀಡಿಯಾ ಟೆಕ್ ಚಿಪ್‌ಸೆಟ್‌ನೊಂದಿಗೆ ಬರಲಿದೆ ಎಂದು ಗಿಜ್ ಮೊ ಚೀನಾ ವರದಿ ಮಾಡಿದೆ. ಅಲ್ಲದೆ, ಇದು 64 ಜಿಬಿ ಮೆಮೊರಿ ಮತ್ತು 128 ಜಿಬಿ ಮೆಮೊರಿಯೊಂದಿಗೆ 6ಜಿಬಿ ರಾಮ್‌ನ ಮೂರು ಮೆಮೊರಿ ರೂಪಾಂತರಗಳಲ್ಲಿ ಮತ್ತು 128ಜಿಬಿ ಮೆಮೊರಿಯೊಂದಿಗೆ 8ಜಿಬಿ ರಾಮ್‌ನಲ್ಲಿ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: Realme 9i Review: ರಿಯಲ್‌ಮಿ 9i; ಕಾಸಿಗೆ ತಕ್ಕ ಕಜ್ಜಾಯ ಈ ಸ್ಮಾರ್ಟ್‌ಫೋನ್

ಇದನ್ನೂ ಓದಿ: Earn money from Apps: ಮನೆಯಿಂದಲೇ ಹಣ ಗಳಿಸಲು ಬೆಸ್ಟ್ ಆ್ಯಪ್‌ಗಳಿವು

(Redmi Note 11S leaked photo price and specification)

RELATED ARTICLES

Most Popular