Reliance Jio, Airtel : ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳು ರಿಚಾರ್ಜ್ ಪ್ಲಾನ್‌ಗಳ ದರಗಳನ್ನು ಏರಿಕೆ ಮಾಡಿವೆ. ಇದರಿಂದಾಗಿ ಕೋಟ್ಯಾಂತರ ಗ್ರಾಹಕರು ದುಬಾರಿ ಹಣ ನೀಡಿ ಮೊಬೈಲ್ ರಿಚಾರ್ಜ್ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಅದ್ರಲ್ಲೂ ರಿಲಯನ್ಸ್ ಜಿಯೋ ( Reliance Jio ) ಮತ್ತು ಭಾರ್ತಿ ಏರ್‌ಟೆಲ್ (Airtel) ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಪ್ಲಾನ್ ದರಗಳನ್ನು ಏರಿಕೆ ಮಾಡಿದೆ.

ಅಗ್ಗದ ಬೆಲೆಯಲ್ಲಿ ಇಂಟರ್‌ನೆಟ್, ಉಚಿತ ಕರೆಗಳನ್ನು ನೀಡಿದ್ದ ರಿಯಲನ್ಸ್ ಜಿಯೋ ಭಾರತದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿತ್ತು. ಇದರ ಬೆನ್ನಲ್ಲೇ ಐಡಿಯಾ- ವೊಡಪೋನ್ ಹಾಗೂ ಏರ್‌ಟೆಲ್ ಕಂಪೆನಿಗಳು ರಿಚಾರ್ಜ್ ದರದಲ್ಲಿ ಇಳಿಕೆಯನ್ನು ಮಾಡಿದ್ದವು. ಆದ್ರೀಗ ಜಿಯೋ ತಮ್ಮ ರಿಚಾರ್ಜ್ ಪ್ಲ್ಯಾನ್‌ಗಳ ದರದಲ್ಲಿ ಏರಿಕೆ ಮಾಡಿವೆ. ಇದರ ಬೆನ್ನಲ್ಲೇ ಭಾರ್ತಿ ಏರ್‌ಟೆಲ್ ಕೂಡ ದರಗಳನ್ನು ಏರಿಸಿದೆ.
ರಿಲಯನ್ಸ್ ಜಿಯೋದ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ನೋಡೋದಾದ್ರೆ, ಈ ಮೊದಲು 28 ದಿನಗಳಲ್ಲಿ 2GB ಡೇಟಾಗೆ 155 ರೂ.ಗೆ ಬೆಲೆಯಿದ್ದ ಎಂಟ್ರಿ-ಲೆವೆಲ್ ಮಾಸಿಕ ಪ್ಲಾನ್ ಈಗ ರೂ.189 ಆಗಿರುತ್ತದೆ. 1GB/ದಿನದ ಯೋಜನೆಯನ್ನು ಆಯ್ಕೆ ಮಾಡುವ ಬಳಕೆದಾರರು ಅದೇ ಮಾನ್ಯತೆಯ ಅವಧಿಯನ್ನು ಹೊಂದಿರಲಿದೆ, ಆದರೆ ಬೆಲೆ ರೂ.209 ರಿಂದ ರೂ.249ಕ್ಕೆ ಏರಿಕೆ ಆಗಿದೆ.

ಇನ್ನು 1.5GB/ದಿನದ ಪ್ಲಾನ್‌ನ ಬೆಲೆಯು ರೂ.239 ರಿಂದ ರೂ.299ಕ್ಕೆ ಏರಿಕೆಯಾಗಿದೆ. 2GB/ದಿನದ ಪ್ಲಾನ್ ಈಗ ರೂ.349 ಆಗಿದ್ದರೆ, 479ರೂ. ರಿಚಾರ್ಜ್ ಪ್ಲ್ಯಾನ್ ದರ ಇದೀಗ 579 ರೂ.ಕ್ಕೆ ಏರಿಕೆ ಕಂಡಿದೆ. ಇನ್ನು ಮೂರು ತಿಂಗಳ 6GB ಡೇಟಾ ಯೋಜನೆಯು ಈಗ ರೂ 479ಕ್ಕೆ ಏರಿಕೆಯಾಗಿದ್ದು, ಈ ಹಿಂದೆ ರೂ. 395 ಇತ್ತು. 2.5GB/ದಿನಕ್ಕೆ ನೀಡುವ ವಾರ್ಷಿಕ ಯೋಜನೆಯು ರೂ 2999 ರಿಂದ ರೂ 3599 ಕ್ಕೆ ಏರಿದೆ.
ಇದನ್ನೂ ಓದಿ : ಕೇವಲ ರೂ.10,999ಕ್ಕೆ 5G ಸ್ಮಾರ್ಟ್‌ಪೋನ್ : ಭಾರತದಲ್ಲಿ ಬಿಡುಗಡೆ ಆಯ್ತು Realme Narzo 70 5G, Narzo 70x 5G
ಏರ್‌ಟೆಲ್‌ನ ಪರಿಷ್ಕೃತ ಪ್ರಿಪೇಯ್ಡ್ ಯೋಜನೆಗಳಲ್ಲಿಯೂ ಕೂಡ ಭಾರೀ ಏರಿಕೆ ಕಂಡಿದೆ. ಈ ಹಿಂದೆ 2GB ಡೇಟಾದೊಂದಿಗೆ 28 ದಿನಗಳವರೆಗೆ ರೂ.179 ಬೆಲೆಯ ಬೇಸಿಕ್ ಅನಿಯಮಿತ ಕರೆ ಯೋಜನೆಯು ಆರಂಭಗೊಳ್ಳಲಿದೆ. ಇದೀಗ 1.5GB/ದಿನದ ಯೋಜನೆಯು ಈಗ ರೂ. 349, ಮತ್ತು 2.5GB/ದಿನದ ಯೋಜನೆ ರೂ. 409ಕ್ಕೆ ಏರಿಕೆಯಾಗಿದೆ. ಈ ಹಿಂದೆ ಈ ಯೋಜನೆಯ ದರ 359ರೂ. ಇತ್ತು.
ಇದನ್ನೂ ಓದಿ : Realme P1 5G, Realme P1 Pro 5G : ಭಾರತದಲ್ಲಿ ಬಿಡುಗಡೆ ಆಯ್ತು ರಿಯಲ್ ಮೀ P1 5G
ಅತ್ಯಧಿಕ ದೈನಂದಿನ ಡೇಟಾ ಪ್ಲಾನ್, 28 ಕ್ಕೆ 3GB/ದಿನ ನೀಡುತ್ತದೆ. ಇದು ದಿನಗಳಲ್ಲಿ 399 ರೂ.ನಿಂದ 449 ರೂ.ಗೆ ಏರಿಕೆಯಾಗಿದೆ. ದೀರ್ಘಾವಧಿಗೆ, 1.5GB/ದಿನದೊಂದಿಗೆ 56-ದಿನಗಳ ಯೋಜನೆಯು ಈಗ ರೂ 579 ಆಗಿದೆ, ರೂ 479 ರಿಂದ, ಮತ್ತು 2GB/ದಿನದ ಯೋಜನೆಯು ರೂ 549 ರಿಂದ ರೂ 649 ಕ್ಕೆ ಹೆಚ್ಚಾಗಿದೆ. 2GB/ದಿನವನ್ನು ನೀಡುವ ವಾರ್ಷಿಕ ಯೋಜನೆಯ ದರದಲ್ಲಿಯೂ ಏರಿಕೆ ಕಂಡಿದೆ.
ಇದನ್ನೂ ಓದಿ : ಏರ್‌ಟೆಲ್ Vs ಜಿಯೋ ರಿಚಾರ್ಜ್ : ಉಚಿತ ಕರೆ, ಅನ್‌ಲಿಮಿಟೆಡ್ ಡೇಟಾ, ಯಾವುದು ಬೆಸ್ಟ್
Reliance Jio, Airtel Will Launch New Prepaid Plan From July 3: Details