Reliance Jio Bumper offer : ಭಾರತದ ಟೆಲಿಕಾಂ ಕಂಪೆನಿಗಳು ಏಕಾಏಕಿ ರಿಚಾರ್ಜ್ ದರ ಏರಿಕೆ ಮಾಡಿವೆ. ಇದರಿಂದಾಗಿ ಗ್ರಾಹಕರು ಕಂಗಾಲಾಗಿದ್ದರು. ಆದ್ರೀಗ ರಿಲಯನ್ಸ್ ಜಿಯೋ (Ji0) ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಕೇವಲ 75 ರೂಪಾಯಿಗಳಿಗೆ ಬೊಂಬಾಟ್ ರಿಚಾರ್ಜ್ ಫ್ಲ್ಯಾನ್ ಪರಿಚಯಿಸಿದೆ.
ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಉಚಿತವಾಗಿ ಇಂಟರ್‌ನೆಟ್ ಸೇವೆಯನ್ನು ಪರಿಚಯಿಸಿದ್ದ ಜಿಯೋ ನಂತರದಲ್ಲಿ ಅಗ್ಗದ ದರದಲ್ಲಿಯೂ ಇಂಟರ್‌ನೆಟ್ ಸೇವೆಯನ್ನು ನೀಡಿದೆ. ಆದ್ರೆ 5ಜಿ ಟೆಕ್ನಾಲಜಿ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಡೇಟಾ ಫ್ಲ್ಯಾನ್‌ಗಳ ದರದಲ್ಲಿ ಏರಿಕೆ ಮಾಡಿದೆ.

ಭಾರತದ ಇತರ ಟೆಲಿಕಾಂ ಕಂಪೆನಿಗಳಿಗೆ ಪೈಪೋಟಿ ನೀಡುವ ನಡುವಲ್ಲೇ ಜಿಯೋ ಮತ್ತೊಂದು ಬಂಪರ್ ಆಫರ್ ಘೋಷಣೆ ಮಾಡಿದೆ. ಈ ರಿಚಾರ್ಜ್ ಪ್ಲ್ಯಾನ್ ಕೂಡ ಗ್ರಾಹಕರ ಗಮನ ಸೆಳೆದಿದೆ. ರಿಲಯನ್ಸ್ ಜಿಯೋ ಇದೀಗ ಕೇವಲ 75 ರೂ. ಅನಿಯಮಿತ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.
ಇದನ್ನೂ ಓದಿ : ಹೊಸ ರೂಲ್ಸ್ : ಅತೀ ಹೆಚ್ಚು ಸಿಮ್ ಹೊಂದಿದ್ರೆ 3 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ
ಕೇವಲ 75 ರೂಪಾಯಿ ರೀಚಾರ್ಜ್ ಯೋಜನೆಯ ಅಡಿಯಲ್ಲಿ ಗ್ರಾಹಕರಿಗೆ 23 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತಿದೆ. ಇದರಲ್ಲಿ ಉಚಿತ ಕರೆಯ ಜೊತೆಗೆ ಡೇಟಾ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಜಿಯೋ 75 ರೀಚಾರ್ಜ್ ಯೋಜನೆಯು 23 ದಿನಗಳ ಮಾನ್ಯತೆಯ ಜೊತೆಗೆ 2GB ಹೆಚ್ಚಿನ ವೇಗದ ಡೇಟಾವನ್ನು ನೀಡುತ್ತದೆ. ದಿನಕ್ಕೆ 100MB ದೈನಂದಿನ ಡೇಟಾ ಮಿತಿ ಮತ್ತು ಹೆಚ್ಚುವರಿ 200MB ಬೋನಸ್ ಒದಗಿಸುತ್ತಿದೆ.
ಜಿಯೋ ಪರಿಚಯಿಸಿದ ಹೊಸ ರೀಚಾರ್ಜ್ ಫ್ಲ್ಯಾನ್‌ನಲ್ಲಿ ಅನಿಯಮಿತ ಕರೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ 50 SMS ಕಳುಹಿಸಬಹುದಾಗಿದೆ. ಜಿಯೋ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಫ್ಲ್ಯಾನ್ ಜೊತೆಗೆ ಕಡಿಮೆ ದರದಲ್ಲಿ ಒಟಿಟಿ ಫ್ಲ್ಯಾನ್ ಕೂಡ ಪರಿಚಯಿಸಿದೆ. Jio ಗ್ರಾಹಕರು ಕೇವಲ 175 ರೂಗಳಲ್ಲಿ ಡೇಟಾ ಯೋಜನೆಯ ಜೊತೆಗೆ 12 OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ : ಕೇವಲ 51 ರೂ.ಗೆ ಅನಿಯಮಿತ 5G ಡೇಟಾ : ರಿಲಯನ್ಸ್ ಜಿಯೋ ಹೊಸ ಯೋಜನೆ
ಈ ಯೋಜನೆಯ ಅಡಿಯಲ್ಲಿ ಗ್ರಾಹಕರಿಗೆ ಅನಿಯಮಿತ ಡೇಟಾ ನೀಡಲಾಗುತ್ತದೆ. ಆದರೆ ನಿತ್ಯದ ಕೋಟಾ ಮುಗಿದ ನಂತರದಲ್ಲಿ ವೇಗವು 64kbpsಗೆ ಇಳಿಕೆಯಾಗಲಿದೆ. ಈ ಯೋಜನೆಯಲ್ಲಿಯೂ ಗ್ರಾಹಕರು 50 SMS ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
75 ರೂ.ಗಳ ಯೋಜನೆಯೊಂದಿಗೆ ರೂ.125 ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು 23 ದಿನಗಳ ವ್ಯಾಲಿಡಿಟಿಯನ್ನು ಸಹ ಹೊಂದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿರುತ್ತದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡಲು ಅನುಮತಿಸಲಾಗಿದೆ. ಇದರೊಂದಿಗೆ ಪ್ರತಿದಿನ 500MB ಡೇಟಾ ಉಚಿತವಾಗಿ ದೊರೆಯಲಿದೆ. ಉಚಿತ SMS ಸೌಲಭ್ಯವನ್ನೂ ಒದಗಿಸಲಾಗಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಮತ್ತು ಜಿಯೋ ಸೆಕ್ಯುರಿಟಿ ಚಂದಾದಾರಿಕೆಯು ರೂ 125 ರೀಚಾರ್ಜ್ ಯೋಜನೆಯಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ : ಕೇವಲ ರೂ.10,999ಕ್ಕೆ 5G ಸ್ಮಾರ್ಟ್‌ಪೋನ್ : ಭಾರತದಲ್ಲಿ ಬಿಡುಗಡೆ ಆಯ್ತು Realme Narzo 70 5G, Narzo 70x 5G
ಇತ್ತೀಚೆಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ಒಂದೆಡೆ BSNL 4G ಸೇವೆಯ ಮೂಲಕ ಹಲವು ಕೊಡುಗೆಗಳನ್ನು ನೀಡಿದೆ. BSNL ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಈಗ ಕಡಿಮೆ ದರದ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಇದರ ಜೊತೆಗೆ ಇತರ ಟೆಲಿಕಾಂ ಸೇವೆಗಳು ಪೈಪೋಟಿ ನೀಡುತ್ತಿವೆ.
Reliance Jio Bumper offer Just Rs 75 unlimited recharge plan