ಸ್ಯಾಮ್‌ಸಂಗ್ ತನ್ನ ಉತ್ಪನ್ನವೊಂದರಲ್ಲಿ ಸೈಬರ್ ಭದ್ರತಾ (Cyber Breach) ಉಲ್ಲಂಘನೆಯಾಗಿದೆ ಎಂದು ಸೋಮವಾರ ಅಧಿಕೃತವಾಗಿ ದೃಢಪಡಿಸಿದೆ ದಕ್ಷಿಣ ಕೊರಿಯಾದ (South Korea) ತಂತ್ರಜ್ಞಾನ ದೈತ್ಯ ಕಂಪನಿಯಾದ ಸ್ಯಾಮ್‌ಸಂಗ್ Samsung Galaxy ಸ್ಮಾರ್ಟ್‌ಫೋನ್‌ಗಳಲ್ಲಿನ ಕೋಡ್ ಅನ್ನು ಸಹ ಸೇರಿ ಹ್ಯಾಕಿಂಗ್ (sung Galaxy Smartphone Hack) ಗುಂಪೊಂದು ಹಲವು ಮಾಹಿತಿಗಳನ್ನು ಕದ್ದಿದೆ ಎಂದು ಖಚಿತಪಡಿಸಿದೆ.
ಆದರೆ ಗ್ರಾಹಕರು ಅಥವಾ ಅದರ ಉದ್ಯೋಗಿಗಳ ವೈಯಕ್ತಿಕ ಡೇಟಾ ಅಥವಾ ಮಾಹಿತಿಯ ಮೇಲೆ ಯಾವುದೇ ಪರಿಣಾಮವನ್ನೂ ಇದು ಬೀರಲಿಲ್ಲ. Lapsus$ ಹ್ಯಾಕಿಂಗ್ ಗುಂಪು ಈ ಹಿಂದೆ ನಡೆದ ಸೈಬರ್ ಸುರಕ್ಷತೆ ಉಲ್ಲಂಘನೆಯ ಹೊಣೆಗಾರಿಕೆಯನ್ನು ಹೊತ್ತಿತ್ತು. ಮುಂದೆ ಈ ರೀತಿ ಆಗದಂತೆ ಭವಿಷ್ಯದಲ್ಲಿ ಉಲ್ಲಂಘನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಸೋಮವಾರ, ಸ್ಯಾಮ್‌ಸಂಗ್ ಬ್ಲೂಮ್‌ಬರ್ಗ್ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ಕೆಲವು ಆಂತರಿಕ ಕಂಪನಿ ಡೇಟಾಗೆ ಸಂಬಂಧಿಸಿದಂತೆ ಸೈಬರ್ ಸುರಕ್ಷತೆ ಉಲ್ಲಂಘನೆಯನ್ನು ಉಂಟಾಗಿದೆ ಎಂದು ದೃಢಪಡಿಸಿದೆ. ಹೇಳಿಕೆಯಲ್ಲಿ ಹ್ಯಾಕಿಂಗ್ ಮಾಡಿದ ಗುಂಪನ್ನು ಕಂಪನಿ ಗುರುತಿಸಿಲ್ಲ. ನಮ್ಮ ಆರಂಭಿಕ ವಿಶ್ಲೇಷಣೆಯ ಪ್ರಕಾರ, ಈ ಸೈಬರ್ ಉಲ್ಲಂಘನೆಯು Galaxy ಸಾಧನಗಳ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲವು ಮೂಲ ಕೋಡ್ ಅನ್ನು ಒಳಗೊಂಡಿರುತ್ತದೆ, ಆದರೆ ನಮ್ಮ ಗ್ರಾಹಕರು ಅಥವಾ ಉದ್ಯೋಗಿಗಳ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿಲ್ಲ. ಪ್ರಸ್ತುತ, ನಮ್ಮ ವ್ಯಾಪಾರ ಅಥವಾ ಗ್ರಾಹಕರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಯಾಮ್‌ಸಂಗ್ ಹೇಳಿಕೆಯಲ್ಲಿ ವಿವರಿಸಿದೆ.
ಇದನ್ನೂ ಓದಿ: Lava ex2 : ಲಾವ ಎಕ್ಸ್2 ಭಾರತದಲ್ಲಿ ಬಿಡುಗಡೆ; ಬಜೆಟ್ ಬೆಲೆಗೆ ಗ್ರಾಹಕರ ಕೈ ಸೇರಲಿದೆ ಈ ಸ್ಮಾರ್ಟ್ ಫೋನ್
ಈ ಹಿಂದೆ ಲ್ಯಾಪ್ಸಸ್$ ಹ್ಯಾಕಿಂಗ್ ಗುಂಪು Nvidiaವನ್ನು ಸುಲಿಗೆ ಮಾಡಲು ಪ್ರಯತ್ನಿಸಿತ್ತು. ಅದು ತನ್ನ ಗ್ರಾಫಿಕ್ಸ್ ಡ್ರೈವರ್‌ಗಳನ್ನು ಓಪನ್ ಸೋರ್ಸ್ ಮಾಡದ ಹೊರತು ಕಂಪನಿಯ ಡೇಟಾವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ಕೆಲವು ಜಿಪಿಯುಗಳಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ಮಿತಿಗಳನ್ನು ನಿಷ್ಕ್ರಿಯಗೊಳಿಸಿತ್ತು. ಆನ್‌ಲೈನ್‌ನಲ್ಲಿ ಡೇಟಾವನ್ನು ಪ್ರಕಟಿಸುವ ಮೊದಲು ಹ್ಯಾಕಿಂಗ್ ಗುಂಪು ಯಾವುದೇ ಬೇಡಿಕೆಗಳನ್ನು ಇಟ್ಟಿತ್ತೇ ಎಂಬುದನ್ನು ಸ್ಯಾಮ್‌ಸಂಗ್ ಬಹಿರಂಗಪಡಿಸಿಲ್ಲ. ಆದಾಗ್ಯೂ, ಕಳವು ಆದ ಡೇಟಾವು ಉದ್ಯೋಗಿಗಳ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿಲ್ಲ ಎಂದು ಕಂಪನಿ ಹೇಳಿದೆ. ಮುಂದೆ ಇಂತಹ ಘಟನೆಗಳನ್ನು ತಡೆಗಟ್ಟಲು ನಾವು ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಗ್ರಾಹಕರಿಗೆ ಅಡ್ಡಿಯಿಲ್ಲದೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ ಎಂದು ಕಂಪನಿಯು ಬ್ಲೂಮ್‌ಬರ್ಗ್‌ಗೆ ತನ್ನ ಹೇಳಿಕೆಯನ್ನು ತಿಳಿಸಿದೆ.
(Samsung Galaxy Smartphone Hack confirmed by company)