ಮಂಗಳವಾರ, ಏಪ್ರಿಲ್ 29, 2025
HometechnologySamsung Galaxy S21 FE: ಸ್ಯಾಮ್‌ಸಂಗ್‌ನ ಹೊಸ Galaxy S21 FE ಬಿಡುಗಡೆ; ರೇಟೆಷ್ಟು? ವಿಶೇಷತೆಯೇನು?

Samsung Galaxy S21 FE: ಸ್ಯಾಮ್‌ಸಂಗ್‌ನ ಹೊಸ Galaxy S21 FE ಬಿಡುಗಡೆ; ರೇಟೆಷ್ಟು? ವಿಶೇಷತೆಯೇನು?

- Advertisement -

ಭಾರತದ ಟಾಪ್ ಸೆಲ್ಲಿಂಗ್ ಫೋನ್ ಬ್ರಾಂಡ್ ಸ್ಯಾಮ್‌ಸಂಗ್ (Samsung) ಹೊಸ ಗಾಲಕ್ಸಿ ಎಸ್21 ಎಫ್ಇ (Galaxy S21 FE) ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್, ಎಸ್ 21 ಸರಣಿಯ ಕೊನೆಯ ಹಾಗೂ ಜನಪ್ರಿಯ ಎಸ್20 ಎಫ್ಇ ಮತ್ತು ಎಸ್21 ಎಫ್ಇ 5Gಯ ಇಂಪ್ರೂವ್ಡ್ ವರ್ಷನ್ ಆಗಿದೆ. ಮತ್ತು ಇದರ ವೈಶಿಷ್ಟ್ಯಗಳು ಅಪ್ಡೇಟ್ ಆಗಿವೆ. ಹೊಸ ಎಸ್21 ಎಫ್ಇ ಸ್ನಾಪ್‌ಡ್ರಾಗನ್ 888 ಚಿಪ್‌ಸೆಟ್, ಅಮೋಲ್ಡ್ ಸ್ಕ್ರೀನ್ ಮತ್ತು ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನಿನ ಇತರ ವಿಶೇಷತೆಗಳು ಏನೆಂಬುದನ್ನು ಈ ಕೆಳಗೆ ನೀಡಲಾಗಿದೆ.

ಫೋನ್ 6.4-ಇಂಚಿನ 2340×1080 ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ ಮತ್ತು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಸಪೋರ್ಟ್ ಮಾಡುತ್ತದೆ. ಇಲ್ಲಿ ಅಂಡರ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಇದೆ. ಇದರಲ್ಲಿ ಕ್ಯಾಮೆರಾ ಬಂಪ್ ಅನ್ನು ಮ್ಯಾಟ್-ಫಿನಿಶ್ ಬ್ಯಾಕ್ ಪ್ಯಾನೆಲ್‌ ಆಗಿದೆ. ಫೋನಿನ ಎಡ ಮತ್ತು ಮೇಲಿನ ಅಂಚುಗಳು ಫೋನ್‌ನ ಅಂಚುಗಳಿಗೆ ಎಕ್ಸ್ಟೆಂಡ್ ಮಾಡಲಾಗಿದೆ. ಆದಾಗ್ಯೂ, ಫ್ಲ್ಯಾಶ್ ಮಾಡ್ಯೂಲ್ ಅನ್ನು ಕ್ಯಾಮರಾ ಲೆನ್ಸ್ ಹೊರಗೆ ಇರಿಸಲಾಗಿದೆ.

ಫೋನ್ ಎಸ್21 ಸರಣಿಯಂತಹ ಕ್ವಾಲ್ ಕೋಮ್ ಸ್ನಾಪ್ ಡ್ರಾಗನ್ 888(Qualcomm Snapdragon 888) ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 5G ಅನ್ನು ಸಪೋರ್ಟ್ ಮಾಡುತ್ತದೆ. ನೀವು 25 ವ್ಯಾಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ 4,500 ಎಂ ಎ ಎಚ್ ಬ್ಯಾಟರಿ ಹೊಂದಿದೆ. ಈ ಫೋನಿನ ಇನ್ನೊಂದು ವಿಶೇಷವೆಂದರೆ ಇದು ಕೇವಲ 1777 ಗ್ರಾಂ ಮತ್ತು 7.9 ಎಂಎಂ ದಪ್ಪದಲ್ಲಿ ಹಗುರವಾದ ಮತ್ತು ಸ್ಲಿಮ್ ಫೊನ್ ಆಗಿದೆ.

ಇದು ಟ್ರಿಪಲ್ ರೇರ್ ಕ್ಯಾಮೆರಾ ಹೊಂದಿದ್ದು, 12 ಎಂಪಿ ಮೆಯಿನ್ ಸೆನ್ಸರ್, 12 ಎಂಪಿ ಅಲ್ಟ್ರಾ ವಾಯ್ಡ್ ಸೆನ್ಸರ್ ಹಾಗೂ 8 ಎಂಪಿ ಟೆಲಿ ಫೋಟೋ ಲೆನ್ಸ್ ಹೊಂದಿದೆ. ಫ್ರಂಟ್ ಕ್ಯಾಮೆರಾ 32 ಎಂಪಿ ಇದ್ದು ಸೆಲ್ಫಿ ತೆಗೆಯಲು ಇದು ಪರ್ಫೆಕ್ಟ್ ಫೋನ್ ಆಗಿರುತ್ತದೆ. ಈ ಎಸ್21 ಎಫ್ಇ ಸರಣಿಯಲ್ಲಿ ಕ್ಯಾಮೆರಾ ಹೆಚ್ಚು ಅಪ್ಡೇಟ್ ಆಗಿದೆ. ಇದರಲ್ಲಿ ಮಲ್ಟಿ ಕಾಮೆರ ರೆಕಾರ್ಡಿಂಗ್ ಸೌಲಭ್ಯ ಇರಲಿದೆ. ಅಂದರೆ ಒಂದೇ ಬಾರಿ ಫ್ರಾಂಟ್ ಹಾಗೂ ಬ್ಯಾಕ್ ಕಾಮೆರಾದಿಂದ ರೆಕಾರ್ಡಿಂಗ್ ಸಾಧ್ಯವಿದೆ. ಅಷ್ಟೇ ಅಲ್ಲದೇ ನೈಟ್ ಮೋಡ್ ಆಪ್ಶನ್ ಇದ್ದು ಒಮ್ಮೆಗೇ 14 ಫೋಟೋ ತೆಗೆಯಲು ಸಾಧ್ಯವಿದೆ. ಗ್ಯಾಲರಿಯಲ್ಲಿ “ಅಬ್ಜೆಕ್ಟ್ ಇರೆಸರ್” ಫೀಚರ್ ಇದ್ದು, ಫೋಟೋದಲ್ಲಿನ ಅನಗತ್ಯ ಅಬ್ಜೆಕ್ಟ್ ರಿಮೂವ್ ಮಾಡಬಹುದು.
ಇದರ ಬೆಲೆ 52,031 ಆಗಿದ್ದು, 6ಜಿಬಿ/128ಜಿಬಿ 8ಜಿಬಿ/128ಜಿಬಿ, ಹಾಗೂ 8ಜಿಬಿ/256ಜಿಬಿ ಹೀಗೆ ಮೂರು ವೆರೈಟಿಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: Yamaha FZS-Fi DLX: ಯಮಹಾದ ಈ ಹೊಸ ಬೈಕ್ ಮಾಡೆಲ್‌ಗಳು ಸುಂಟರಗಾಳಿ ಎಬ್ಬಿಸಲಿವೆ!

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

(Samsung Galaxy S21 FE release here is the specification and price details)

RELATED ARTICLES

Most Popular