ಹೆಚ್ಚಿದ ಕೊರೊನ, ಲಾಕ್ ಡೌನ್, ಆನ್ಲೈನ್ ಕ್ಲಾಸ್, ವರ್ಕ್ ಫ್ರಮ್ ಹೋಮ್ ಇವುಗಳಿಂದ ಭಾರತದಲ್ಲಿ ಸ್ಮಾರ್ಟ್ ಫೋನ್ ಬೇಡಿಕೆ ಹಾಗೂ ಬೆಲೆ ಎರಡೂ ಸಹ ಹೆಚ್ಚಿತ್ತು. ಪಟ್ಟಣಗಳಲ್ಲಿ ಮಾತ್ರ ಜಾಸ್ತಿ ಸೇಲ್ ಆಗುತ್ತಿದ್ದ ಈ ಸ್ಮಾರ್ಟ್ ಫೋನ್, ಇಂದು ಹಳ್ಳಿಯಲ್ಲೂ ಕಾಣಸಿಗುತ್ತವೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿಯ ಪ್ರಕಾರ, 2021 ರಲ್ಲಿ 169 ಮಿಲಿಯನ್ ಯೂನಿಟ್‌ಗಳಲ್ಲಿ ಅತ್ಯಧಿಕ ಮಾರುಕಟ್ಟೆ (Smartphone Market in India) ಭಾರತದಲ್ಲೇ ಇದೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ ಮಾರ್ಕೆಟ್ ಮಾನಿಟರ್ ಸೇವೆಯ ಪ್ರಾಥಮಿಕ ಮಾಹಿತಿಯು 2021 ರಲ್ಲಿ ಭಾರತದ ಸ್ಮಾರ್ಟ್‌ಫೋನ್ 169 ಮಿಲಿಯನ್ ಯುನಿಟ್‌ಗಳನ್ನು ದಾಟಿದೆ ಎನ್ನುತ್ತದೆ . ಇದು 2020 ರಲ್ಲಿ ಸುಮಾರು 152 ಮಿಲಿಯನ್ ಆಗಿತ್ತು. ಈ ರಿಪೋರ್ಟ್ ಪ್ರಕಾರ ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಅಧಿಕ ಬೆಳವಣಿಗೆಯನ್ನು ದಾಖಲಿಸಿದೆ.
ಒಂದು ವರ್ಷದಲ್ಲಿ ಮಾರುಕಟ್ಟೆಯು ಹೆಚ್ಚಿನ ಏರು ತಗ್ಗುಗಳನ್ನು ಕಂಡಿದೆ. ಕೊರೊನ ಎರಡು ಹಾಗೂ ಮೂರನೇ ಅಲೆ, ಲಾಕ್ ಡೌನ್ ಹೀಗೆ ಅನೇಕ ಕಾರಣಗಳಿಂದ ಮೊಬೈಲ್ ದರಗಳು ಸಹ ಏರಿವೆ. 5ಜಿ ಸ್ಮಾರ್ಟ್‌ಫೋನ್‌ಗಳು 2021 ರಲ್ಲಿ ಶೇಕಡಾ 17 ರಷ್ಟು ವಹಿವಾಟು ಆಗಿವೆ. ಕಳೆದ ವರ್ಷ 2020 ಕ್ಕೆ ಹೋಲಿಸಿದರೆ ಇದು 6x ಬೆಳವಣಿಗೆಯನ್ನು ದಾಖಲಿಸಿದೆ ಎಂದು ಹೇಳಬಹುದು.
ತೀವ್ರ ಪೈಪೋಟಿ, ಅಗ್ಗದ 5ಜಿ ಚಿಪ್‌ಸೆಟ್‌ಗಳ ಲಭ್ಯತೆ ಮತ್ತು 5ಜಿ ಸಾಧನಗಳ ಬೆಲೆಗಳು ಕಡಿಮೆಯಾಗುತ್ತಿರುವುದು, ಬ್ರ್ಯಾಂಡ್‌ಗಳು ಹೆಚ್ಚಿನ 5ಜಿ ಸಾಧನಗಳನ್ನು ಮಾರುಕಟ್ಟೆಗೆ ತಳ್ಳಲು ಅನುವು ಮಾಡಿಕೊಡುತ್ತದೆ. ಕಳೆದ ಆರು ತಿಂಗಳಲ್ಲಿ 5ಜಿ ಸಾಧನಗಳ ಬೆಲೆಯು ಶೇಕಡಾ 40 ರಷ್ಟು ಕಡಿಮೆಯಾಗಿದೆ. 5ಜಿ ಸಾಧನಗಳ ಲಭ್ಯತೆಯ ಹೆಚ್ಚಳವು ಹೆಚ್ಚಿನ 5ಜಿ ಸ್ಮಾರ್ಟ್‌ಫೋನ್ ಅಳವಡಿಕೆಗೆ ಪ್ರಮುಖ ಕಾರಣವಾಗಿದೆ.
ಗ್ರಾಹಕರ ಬೇಡಿಕೆಯು 2021 ರಲ್ಲಿ ಪ್ರೀಮಿಯಂ ಬೆಲೆ ಶ್ರೇಣಿಗಳಲ್ಲಿ (ರೂ. 30,000 ಕ್ಕಿಂತ ಹೆಚ್ಚು) ಹೆಚ್ಚಾಗಿರುತ್ತದೆ, ರೂ 10,000 ಕ್ಕಿಂತ ಕಡಿಮೆ ಇರುವ ವರ್ಗವು ಸಿ ನಿಂದ 30 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ — ಶೇಕಡಾ 5 ರಷ್ಟು ಕುಸಿದಿದೆ, ಆದರೆ 10,000-20,000 ವಿಭಾಗ (47 ಶೇಕಡಾ ಪಾಲು) ಶೇಕಡಾ 8 ರಷ್ಟು ಬೆಳೆದಿದೆ. ರೂ.20,000-30,000 ಶ್ರೇಣಿ (ಶೇ. 13) ಶೇ.95ರಷ್ಟು ಬೆಳವಣಿಗೆ ಕಂಡಿದೆ. ಚಿಲ್ಲರೆ ಎಎಸ್‌ಪಿ(ಸರಾಸರಿ ಮಾರಾಟದ ಬೆಲೆ) ಸಹ ಹೆಚ್ಚಿನ ಬೆಳವಣಿಗೆಯನ್ನು ತೋರಿಸಿದೆ.
ಮಧ್ಯಮ ಮಟ್ಟದ ಸ್ಮಾರ್ಟ್‌ಫೋನ್‌ಗಳಿಂದ ಉನ್ನತ ಮಟ್ಟದ 5ಜಿ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಕೊಡುಗೆಯೊಂದಿಗೆ ಮಾರುಕಟ್ಟೆಯು ಎರಡಂಕಿಗಳಿಂದ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಅನೇಕ ಮಾರಾಟಗಾರರಿಗೆ ಬೆಳೆಯಲು ಮತ್ತು ಸಹ-ಅಸ್ತಿತ್ವಕ್ಕೆ ದೊಡ್ಡ ಅವಕಾಶಗಳನ್ನು ನೀಡುವುದನ್ನು ಮುಂದುವರೆಸಿದೆ,” ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ
(Smartphone Market in India in 2021 growth and happening)