ಭಾನುವಾರ, ಏಪ್ರಿಲ್ 27, 2025
HometechnologyGoogle Big Updates : ಈ ಆಂಡ್ರಾಯ್ಡ್‌ ಪೋನ್‌ನಲ್ಲಿ ಇನ್ಮುಂದೆ ಓಪನ್‌ ಆಗಲ್ಲ ಯೂಟ್ಯೂಬ್, ಗೂಗಲ್...

Google Big Updates : ಈ ಆಂಡ್ರಾಯ್ಡ್‌ ಪೋನ್‌ನಲ್ಲಿ ಇನ್ಮುಂದೆ ಓಪನ್‌ ಆಗಲ್ಲ ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಜಿಮೇಲ್ !

- Advertisement -

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತಾಂತ್ರಿಕತೆಯಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. ಗೂಗಲ್ ನಕ್ಷೆಗಳು, ಜಿಮೇಲ್, ಯೂಟ್ಯೂಬ್ ಮತ್ತು ಇತರ ಹಲವಾರು ಜನಪ್ರಿಯ ಆಪ್‌ಗಳಿಗೆ ಗೂಗಲ್ ತನ್ನ ಬೆಂಬಲವನ್ನು ವಾಪಾಸ್‌ ಪಡೆಯುತ್ತಿದೆ. ಹೀಗಾಗಿ ನೀವೇನಾದ್ರೂ ಆಂಡ್ರಾಯ್ಡ್‌ ಪೋನ್‌ ಹಳೆಯ ಆವೃತ್ತಿಯನ್ನು ಬಳಸುತ್ತಿದ್ರೆ ಇದೇ ಸೋಮವಾರದಿಂದ ಸೈನ್ ಇನ್ ಮಾಡಲು ಸಾಧ್ಯವಾಗುವುದಿಲ್ಲ.

ಆಂಡ್ರಾಯ್ಡ್ 2.3.7 ಅಥವಾ ಅದಕ್ಕಿಂತ ಕಡಿಮೆ ಇರುವ ಸ್ಮಾರ್ಟ್ ಫೋನ್ ಗಳು ಇನ್ನು ಮುಂದೆ ಗೂಗಲ್ ನ ಸೂಟ್ ಆಪ್ ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಮೊಬೈಲ್ ಆಪರೇಟಿಂಗ್ ಸಿಸ್ಟಂನ ಈ ಆವೃತ್ತಿಯನ್ನು ಡಿಸೆಂಬರ್ 2010 ರಲ್ಲಿ ಪ್ರಾರಂಭಿಸಲಾಗಿದೆ. ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ, ಆಂಡ್ರಾಯ್ಡ್ 2.3.7 ಅಥವಾ ಕಡಿಮೆ ಇರುವ ಆಂಡ್ರಾಯ್ಡ್ ಸಾಧನಗಳಲ್ಲಿ ಸೈನ್ ಇನ್ ಮಾಡಲು Google ಇನ್ನು ಮುಂದೆ ಅನುಮತಿಸುವುದಿಲ್ಲ ಎಂದು ಹೇಳಿದೆ.

ನಿಮ್ಮ ಸಾಧನಕ್ಕೆ ಸೈನ್ ಇನ್ ಮಾಡಿದರೆ, ನೀವು ಜಿಮೇಲ್, ಯೂಟ್ಯೂಬ್ ಮತ್ತು ಮ್ಯಾಪ್‌ಗಳಂತಹ ಗೂಗಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಲು ಪ್ರಯತ್ನಿಸಿದಾಗ ಬಳಕೆದಾರರ ಹೆಸರು ಅಥವಾ ಪಾಸ್‌ವರ್ಡ್ ದೋಷಗಳನ್ನು ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಯೂಟ್ಯೂಬ್, ಗೂಗಲ್ ಪ್ಲೇ ಸ್ಟೋರ್, ಗೂಗಲ್ ಮ್ಯಾಪ್ಸ್, ಜಿಮೇಲ್, ಗೂಗಲ್ ಕ್ಯಾಲೆಂಡರ್ ಸೇರಿದಂತೆ ಹಲವು ಸಾಧನಗಳು ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ.

ಆಂಡ್ರಾಯ್ಡ್ 3.0 ಅಥವಾ ಅದಕ್ಕಿಂತ ಹೆಚ್ಚಿನದನ್ನು ಅಪ್‌ಡೇಟ್ ಮಾಡುವಂತೆ ಗೂಗಲ್ ತನ್ನ ಬಳಕೆದಾರರನ್ನುಒತ್ತಾಯಿಸಿದೆ. ಆಂಡ್ರಾಯ್ಡ್ ಓಎಸ್‌ನ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಲು ಸಾಧ್ಯವಾಗುವುದಿಲ್ಲ. ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಪ್ರಯತ್ನಿಸುವಾಗ ಸೈನ್ ಇನ್ ದೋಷಗಳಿಗೆ ಕಾರಣವಾಗುತ್ತದೆ. ಅದ್ರಲ್ಲೂ Sony Xperia Advance, Lenovo K800, Sony Xperia Go, Vodafone Smart II, Samsung Galaxy S2, Sony Xperia P, LG Spectrum ಮತ್ತು Sony Xperia S ಮೊಬೈಲ್‌ ಬಳಕೆ ಮಾಡುತ್ತಿರುವವರು ಈ ಸಮಸ್ಯೆ ಯನ್ನು ಅನುಭವಿಸುವ ಸಾಧ್ಯತೆಯಿದೆ. ಅಲ್ಲದೇ ಎಲ್‌ಜಿ ಪ್ರಾಡಾ 3.0, ಹೆಚ್ಟಿಸಿ ವೆಲಾಸಿಟಿ, ಹೆಚ್ಟಿಸಿ ಇವೊ 4 ಜಿ, ಮೊಟೊರೊಲಾ ಫೈರ್ ಮತ್ತು ಮೊಟೊರೊಲಾ ಎಕ್ಸ್‌ಟಿ 532 ನಲ್ಲಿ ಗೂಗಲ್‌ ತನ್ನ ಕೆಲಸವನ್ನು ನಿಲ್ಲಿಸಲಿದೆ.

ಆಂಡ್ರಾಯ್ಡ್ 3.0 ಅಥವಾ ಹೆಚ್ಚಿನದಕ್ಕೆ ಅಪ್‌ಡೇಟ್ ಮಾಡಲಾಗದ ಬಳಕೆದಾರರು ತಮ್ಮ ಸಾಧನದ ವೆಬ್ ಬ್ರೌಸರ್‌ನಲ್ಲಿ ತಮ್ಮ Google ಖಾತೆಗೆ ಲಾಗ್ ಇನ್ ಮಾಡಲು ಪ್ರಯತ್ನಿಸ ಬಹುದು. ನಿಮ್ಮ ಸಾಧನದ ವೆಬ್ ಬ್ರೌಸರ್‌ನಲ್ಲಿ Google ಗೆ ಲಾಗ್ ಇನ್ ಮಾಡಿದಾಗಲೂ ನೀವು ಕೆಲವು Google ಸೇವೆಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : ಇಂಟರ್‌ನೆಟ್‌ ಇಲ್ಲದೇ ಮಾಡಬಹುದು ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಯುಪಿಐ ವಹಿವಾಟು

ಇದನ್ನೂ ಓದಿ : ಗೂಗಲ್‌ ಸರ್ಚ್‌ ಹಿಸ್ಟರಿಯನ್ನು ರಕ್ಷಣೆ ಮಾಡುವುದು ಹೇಗೆ ?

( Google Big Update: YouTube, Google Maps, Gmail and other popular app stop working from Monday in these Mobile phones )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular