ಭಾನುವಾರ, ಏಪ್ರಿಲ್ 27, 2025
HometechnologyGMAIL DOWN : ಭಾರತದಲ್ಲಿ Gmail ಸೇವೆಗಳು ಬಂದ್ : ಇಮೇಲ್‌ ಕಳುಹಿಸಲು ಗ್ರಾಹಕರ ಪರದಾಟ

GMAIL DOWN : ಭಾರತದಲ್ಲಿ Gmail ಸೇವೆಗಳು ಬಂದ್ : ಇಮೇಲ್‌ ಕಳುಹಿಸಲು ಗ್ರಾಹಕರ ಪರದಾಟ

- Advertisement -

ನವದೆಹಲಿ : ಸಾಮಾಜಿಕ ಜಾಲತಾಣಗಳ ಸರ್ವರ್‌ ಡೌನ್‌ ಆಗಿರುವ ಬೆನ್ನಲ್ಲೇ ಇದೀಗ ಭಾರತದ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಜಿಮೇಲ್‌ ಡೌನ್‌ ಆಗಿದೆ. ಮಧ್ಯಾಹ್ನ 3 ಗಂಟೆಯಿಂದ ಈ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಲಕ್ಷಾಂತರ ಗ್ರಾಹಕರು ಜಿಮೇಲ್‌ ಮೂಲಕ ಇಮೇಲ್‌ ಕಳುಹಿಸಲಾಗದೆ ಪರದಾಡುತ್ತಿದ್ದಾರೆ. ‌

Google bans 136 malicious apps from play store: Details
ಸಾಂದರ್ಭಿಕ ಚಿತ್ರ

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿನ ಜನರು ಹೆಚ್ಚಾಗಿ ಗೂಗಲ್‌ ನ ಇಮೇಲ್‌ ಸೇವೆ ಜಿಮೇಲ್‌ ಬಳಕೆ ಮಾಡುತ್ತಿದ್ದಾರೆ. ಆದರೆ ದೇಶದ ಕೆಲವು ಭಾಗಗಳಲ್ಲಿ ಉಚಿತ ಇಮೇಲ್‌ ಸೇವೆ ಸ್ಥಗಿತಗೊಂಡಿದೆ. ಶೇ. 68 ರಷ್ಟು ಬಳಕೆದಾರರಿಗೆ ಇಮೇಲ್‌ ಕಳುಹಿಸಲು ಹಾಗೂ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಶೇ. 18 ರಷ್ಟು ಜನರು Gmail ಸರ್ವರ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ. 14 ರಷ್ಟು ಗ್ರಾಹಕರು ಜಿಮೇಲ್‌ ಲಾಗಿನ್‌ ಮಾಡೋದಕ್ಕೆ ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಡೌನ್‌ ಡಿಟಕ್ಟರ್‌ ವೆಬ್‌ಸೈಟ್‌ ಮಾಹಿತಿಯನ್ನು ನೀಡಿದೆ.

ಜಿಮೇಲ್‌ ಸ್ಥಗಿತದ ಕುರಿತು ಗೂಗಲ್ ಇನ್ನೂ ಯಾವುದೇ ಅಧಿಕೃತ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.ಆದರೆ ಟೆಕ್ ದೈತ್ಯರು ಸಮಸ್ಯೆಯನ್ನು ಒಪ್ಪಿಕೊಳ್ಳುತ್ತಾರೆ. ಇನ್ನು #GmailDown ನಂತಹ ಹ್ಯಾಶ್‌ಟ್ಯಾಗ್‌ಗಳು ಮತ್ತು ಇನ್ನೂ ಕೆಲವು ಸಂಬಂಧಿತವುಗಳು Twitter ನಲ್ಲಿ ಟ್ರೆಂಡ್ ಆಗುತ್ತಿವೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜಿಮೇಲ್ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ಗೆ ವೇದಿಕೆಯನ್ನು ಪ್ರವೇಶಿಸುವಾಗ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಲು ತೆಗೆದುಕೊಂಡಿದ್ದಾರೆ. ಭಾರತದ ಜೊತೆಗೆ, ಇತರ ಕೆಲವು ದೇಶಗಳಲ್ಲಿಯೂ Gmail ಸ್ಥಗಿತಗೊಂಡಿತು.

https://twitter.com/AnilGos33696201/status/1447841887063199744

ಇದನ್ನೂ ಓದಿ : DREAM 11 BAN : ಕರ್ನಾಟಕದಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಡ್ರೀಮ್‌ 11

ಇದನ್ನೂ ಓದಿ : Facebook ಮಕ್ಕಳಿಗೆ ಹಾನಿಕರ ಎಂದ ಫೇಸ್‌ಬುಕ್‌ ಮಾಜಿ ದತ್ತಾಂಶ ತಜ್ಞೆ

( Gmail not working for in India, users unable to send or receive emails )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular