ಸಾಮಾಜಿಕ ತಾಲತಾಣಗಳಾದ ವಾಟ್ಸಾಪ್ (WhatsApp), ಇನ್‌ಸ್ಟಾ ಗ್ರಾಂ (Instagram ) ಮತ್ತು ಫೇಸ್‌ಬುಕ್ ( Facebook ) ಇದ್ದಕ್ಕಿಂತೆಯೇ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದು ಬಳಕೆದಾರರು ಪರದಾಡುತ್ತಿದ್ದಾರೆ.
ಫೇಸ್‌ಬುಕ್, ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂಗಳು ಸೇವೆಯನ್ನು ಸ್ಥಗಿತಗೊಳಿಸಿರುವ ಕುರಿತು ಹಲವು ಬಳಕೆದಾರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಖಾತೆಯಲ್ಲಿ ಪೋಸ್ಟ್ ಮಾಡುವ ವೇಳೆಯಲ್ಲಿ ದೋಷ ಕಂಡುಬಂದಿದೆ. ಇನ್ನು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಹಾಗೂ ಸಂದೇಶ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇನ್‌ಸ್ಟಾಗ್ರಾಂ ನಲ್ಲಿಫೀಡ್ ಅನ್ನು ರಿಫ್ರೆಶ್ ಮಾಡಲು ಸಾಧ್ಯವಾಗಲಿಲ್ಲ. ಫೇಸ್ಬುಕ್ ಹೊಸ ಪುಟವು ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.
ಇನ್ನು ಡೌಂಡೆಟೆಕ್ಟರ್ ಡೇಟಾದ ಪ್ರಕಾರ, ವಾಟ್ಸಾಪ್ ಬಳಕೆದಾರರು ಆ್ಯಪ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡುತ್ತಿದ್ದಾರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. Downdetector ವೆಬ್‌ಸೈಟ್ WhatsApp ಗಾಗಿ ಸುಮಾರು 9,000 ಕ್ರ್ಯಾಶ್ ವರದಿಗಳನ್ನು ತೋರಿಸುತ್ತದೆ.
ಇದನ್ನೂ ಓದಿ : ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ಬಂದ್ !ಈ ಲಿಸ್ಟ್‌ನಲ್ಲಿ ನಿಮ್ಮ ಖಾತೆಯೂ ಇದೆಯಾ
ಪ್ರಮುಖವಾಗಿ ಸರ್ವರ್ ಸಮಸ್ಯೆ ಎದುರಾಗಿದೆ. ಸೇವೆಯನ್ನು ಪುನರ್ ಆರಂಭಿಸಲು ಕಂಪೆನಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಡಿಎನ್ಎಸ್ ಸರ್ವರ್ ಡೌನ್ ಇರುವ ಸಮಸ್ಯೆಯಾಗಿದೆ. ವೆಬ್‌ಸೈಟ್ ಅಥವಾ ಆಪ್‌ನಲ್ಲಿ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ಗೆ ಸಲ್ಲಿಸಿದ ರಿಫ್ರೆಶ್ ವಿನಂತಿಯು ಸಮಯ ಮೀರಿ ಹೊರಬರುತ್ತದೆ. ಆದರೆ ಇದುವರೆಗೂ ಫೇಸ್‌ಬುಕ್‌ನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ : ಪ್ಲೇ ಸ್ಟೋರ್‌ನಲ್ಲಿ ಗೂಗಲ್ ನಿಷೇಧಿಸಿದೆ 136 ಆಪ್ : ಈ ಆಪ್ ಬಳಸುವ ಮುನ್ನ ಎಚ್ಚರ !
(WhatsApp, Instagram and Facebook down for everyone )