ನವದೆಹಲಿ : ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಮೆಸೆಂಜರ್ ಸೇವೆ ನಿನ್ನೆ ರಾತ್ರಿ ವ್ಯತ್ಯಯವಾಗಿತ್ತು. ಜಾಗತಿಕವಾಗಿ ಕೋಟ್ಯಾಂತರ ಗ್ರಾಹಕರು ಸೇವೆ ಸಿಗದೆ ಪರದಾಡಿದ್ದರು. ಆದ್ರೆ 6 ಗಂಟೆಯ ಬಳಿಕ ಸಾಮಾಜಿಕ ಜಾಲತಾಣಗಳು ಮತ್ತೆ ಸೇವೆ ಆರಂಭಿಸಿವೆ. ಈ ನಡುವಲ್ಲೇ ಫೇಸ್‌ಬುಕ್ ಗ್ರಾಹಕರಲ್ಲಿ ಕ್ಷಮೆ ಕೋರಿದೆ.
ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಮೆಸೇಂಜರ್ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಗ್ರಾಹಕರು ತಮ್ಮದೇ ಇಂಟರ್‌ನೆಟ್ ಸಮಸ್ಯೆ ಆಗಿದೆ ಅಂತಾನೇ ಭಾವಿಸಿಕೊಂಡಿದ್ದರು. ಫೇಸ್‌ಬುಕ್ ಹೊಸ ಪೇಜ್ ಲೋಡ್ ಆಗದೇ ಇದ್ರೆ, ವಾಟ್ಸಾಪ್ ಯಾವುದೇ ಮೆಸೇಜ್ ಸೆಂಡ್ ಹಾಗೂ ರಿಸೀವ್ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿತ್ತು. ಇನ್ನು ಮಸೇಂಜರ್ ಹಾಗೂ ಇನ್‌ಸ್ಟಾ ಗ್ರಾಂ ಕೂಡ ಬಳಕೆದಾರರಿಗೆ ಲಭ್ಯವಾಗುತ್ತಿರಲಿಲ್ಲ.
ಸ್ವಲ್ಪ ಹೊತ್ತಲ್ಲೇ ಫೇಸ್‌ಬುಕ್ ಟ್ವೀಟರ್ ಮೂಲಕ ತಾಂತ್ರಿಕ ದೋಷವಾಗಿರುವುದನ್ನು ಖಚಿತ ಪಡಿಸಿದೆ. ಮಾತ್ರವಲ್ಲ ತನ್ನ ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯವಾಗಿರುವುದಕ್ಕೆ ಕ್ಷಮೆಯಾಚನೆ ಮಾಡಿದೆ. ಆದರೆ ಫೇಸ್ ಬುಕ್, ವಾಟ್ಸಪ್ ಮತ್ತು ಇನ್ ಸ್ಟಾಗ್ರಾಮ್ ಕನಿಷ್ಠ 6 ಗಂಟೆಗಳ ಸ್ಥಗಿತದ ನಂತರ ಜಾಗತಿಕ ಇಂಟರ್ನೆಟ್ ಗೆ ಭಾಗಶಃ ಮರುಸಂಪರ್ಕಹೊಂದಿವೆ.
ಫೇಸ್ ಬುಕ್ ಮಾಲೀಕತ್ವದ ಮೂರು ಪ್ಲಾಟ್ ಫಾರ್ಮ್ ಗಳು ವಿಶ್ವದ ಹಲವು ರಾಷ್ಟ್ರಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು ಎಂದು ಬಳಕೆದಾರರು ಟ್ವೀಟರ್ ಮೂಲಕ ಸಮಸ್ಯೆ ಯನ್ನು ತಿಳಿಸಿದ್ದಾರೆ. ಸುಮಾರು ೪೦೦ ಮಿಲಿಯನ್ ಜನರು ಭಾರತದಲ್ಲಿ ಈ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ.
ಫೇಸ್ ಬುಕ್ ಸಂವಹನ ಕಾರ್ಯನಿರ್ವಾಹಕ ಆಂಡಿ ಸ್ಟೋನ್ ಸ್ವತಃ ಟ್ವಿಟರ್ ನಲ್ಲಿ ಈ ಸಂದೇಶವನ್ನು ಭಾರತ ಸಮಯ ರಾತ್ರಿ 9.37 ಕ್ಕೆ ಪೋಸ್ಟ್ ಮಾಡಿದ್ದಾರೆ. ಕೆಲವರು ನಮ್ಮ ಅಪ್ಲಿಕೇಶನ್ ಗಳು ಮತ್ತು ಉತ್ಪನ್ನಗಳನ್ನು ಪ್ರವೇಶಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಸಾಧ್ಯವಾದಷ್ಟು ಬೇಗ ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಕೆಲಸ ಮಾಡುತ್ತಿದ್ದೇವೆ, ಮತ್ತು ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸರ್ವರ್ ಡೌನ್ : ಬಳಕೆದಾರರ ಪರದಾಟ
ಭಾರತವು ಫೇಸ್ ಬುಕ್ ಗೆ ಅತಿದೊಡ್ಡ ಬಳಕೆದಾರರ ನ್ನು ಹೊಂದಿದೆ ಮತ್ತು 410 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ವಾಟ್ಸಪ್, ಮೆಸೇಜಿಂಗ್ ಪ್ಲಾಟ್ ಫಾರ್ಮ್ 530 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಇನ್ನುಇನ್ ಸ್ಟಾಗ್ರಾಮ್ 210 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ.
ಇದನ್ನೂ ಓದಿ : Google bans 136 apps : ಪ್ಲೇ ಸ್ಟೋರ್‌ನಲ್ಲಿ ಗೂಗಲ್ ನಿಷೇಧಿಸಿದೆ 136 ಆಪ್ : ಈ ಆಪ್ ಬಳಸುವ ಮುನ್ನ ಎಚ್ಚರ !
( WhatsApp, Facebook, Instagram recover After Almost six hours outage )