ನವದೆಹಲಿ : ಭಾರತೀಯ ಸಂವಿಧಾನದ ಅಡಿಯಲ್ಲಿ ಇರುವ ಕಾನೂನು ನಿಬಂಧನೆಗಳನ್ನು ಪ್ರಶ್ನಿಸಲು ವಿದೇಶಿ ವಾಣಿಜ್ಯ ಸಂಸ್ಥೆಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಈ ಹಕ್ಕುಗಳು ಕೇವಲ ದೇಶದ ನಾಗರಿಕರಿಗೆ ಮಾತ್ರ ಲಭ್ಯವಿದೆ ಎನ್ನುವ ಮೂಲಕ ಕೇಂದ್ರ ಸರಕಾರ ವಾಟ್ಸಾಪ್ ಗೆ ಛೀಮಾರಿ ಹಾಕಿದೆ.
ಜಾಗತಿಕ ಮೆಸೇಜಿಂಗ್ ಜಾಲತಾಣವಾಗಿರುವ ವಾಟ್ಸಾಪ್ ಹಾಗೂ ಅದರ ಮಾತೃಸಂಸ್ಥೆ ಫೇಸ್ಬುಕ್ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮವನ್ನು ವಿರೋಧಿಸಿತ್ತು. ಈ ಕುರಿತು ವಾಟ್ಸಾಪ್ ದೆಹಲಿ ಹೈಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಿತ್ತು. ಈ ಕುರಿತು ತನ್ನ ನಿಲುವು ಪ್ರಕಟಿಸಿರುವ ಕೇಂದ್ರ ಸರಕಾರ ವಿದೇಶಿ ವಾಣಿಜ್ಯ ಸಂಸ್ಥೆಯಾಗಿರುವ ಫೇಸ್ಬುಕ್ ಹಾಗೂ ವಾಟ್ಸಾಪ್ಗೆ ಭಾರತದ ಸಾಂವಿಧಾನಿಕ ಕಾನೂನುಗಳನ್ನು ಪ್ರಶ್ನೆ ಮಾಡುವ ಅಧಿಕಾರವಿಲ್ಲ ಎನ್ನುವ ಮೂಲಕ ವಾಟ್ಸಾಪ್ ಮುಖಭಂಗ ಅನುಭವಿಸಿದೆ.
ಇದನ್ನೂ ಓದಿ: Facebook : ಇನ್ಮುಂದೆ ಇರಲ್ಲ ಫೇಸ್‌ಬುಕ್ : ಮಹತ್ವದ ನಿರ್ಧಾರ ಪ್ರಕಟಿಸಿದ ಜೂಕರ್‌ಬರ್ಗ್
ಹೊಸ ಐಟಿ ನಿಯಮ ಅಪರಾಧಗಳನ್ನು ತಡೆಯಲು ಕಾನೂನು ವ್ಯವಸ್ಥೆಗೆ ಸಹಕಾರಿಯಾಗಲಿದೆ. ಅಲ್ಲದೇ ಲೈಂಗಿಕ ಅಪರಾಧಗಳು ವರದಿಯಾದ ಸಂದರ್ಭದಲ್ಲಿ ಅಪರಾಧಿಗಳನ್ನು ಕಂಡುಹಿಡಿಯಲು ನೆರವಾಗಲಿದೆ. ಜೊತೆಗೆ ವಾಟ್ಸಾಪ್ ತನ್ನ ಹೊಸ ನಿಯಮಾವಳಿಯ ಪ್ರಕಾರ, ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಫೇಸ್ ಬುಕ್ ಗೆ ನೀಡುತ್ತದೆ. ಇದರಿಂದಾಗಿ ರಾಷ್ಟ್ರೀಯ ಭದ್ರತೆ ಹಾಗೂ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ವಾಟ್ಸಾಪ್ ಹಾಗೂ ಫೇಸ್ಬುಕ್ ಭಾರತದಲ್ಲಿ ಯಾವುದೇ ಕಚೇರಿಯನ್ನೂ ಹೊಂದಿಲ್ಲ. ಭಾರತದಲ್ಲಿ ಕೇವಲ ವಾಣಿಜ್ಯ ವ್ಯವಹಾರವನ್ನಷ್ಟೇ ನಡೆಸುತ್ತಿದೆ. ಭಾರತದಲ್ಲಿ ಸ್ವತಃ ಕಚೇರಿ ಹೊಂದಿಲ್ಲದ ಸಂಸ್ಥೆಗೆ ಭಾರತೀಯ ಕಾನೂನನ್ನು ಪ್ರಶ್ನಿಸುವ ಅಧಿಕಾರವಿಲ್ಲ ಎಂದು ನ್ಯಾಯಾಲಯಕ್ಕೆ ತನ್ನ ವಾದವನ್ನು ಮಂಡಿಸಿದೆ.
ಇದನ್ನೂ ಓದಿ: GMAIL DOWN : ಭಾರತದಲ್ಲಿ Gmail ಸೇವೆಗಳು ಬಂದ್ : ಇಮೇಲ್ ಕಳುಹಿಸಲು ಗ್ರಾಹಕರ ಪರದಾಟ
(Whatsapp faces flak: Centre says foreign company does not have the power to challenge Indian law)