ಸೋಮವಾರ, ಏಪ್ರಿಲ್ 28, 2025
HometechnologyTwitter Account Safety : ಮೋದಿಯ ಅಕೌಂಟೇ ಹ್ಯಾಕ್ ಆಯ್ತು! ನಮ್ಮ ನಿಮ್ಮದು? ಟ್ವಿಟರ್ ಅಕೌಂಟ್...

Twitter Account Safety : ಮೋದಿಯ ಅಕೌಂಟೇ ಹ್ಯಾಕ್ ಆಯ್ತು! ನಮ್ಮ ನಿಮ್ಮದು? ಟ್ವಿಟರ್ ಅಕೌಂಟ್ ಹ್ಯಾಕ್ ಆಗದಿರಲು ಈ ಸ್ಟೆಪ್ಸ್ ಅನುಸರಿಸಿ

- Advertisement -

ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಸಾಮಾಜಿಕ ಜಾಲತಾಣ ನೋಡಿಕೊಳ್ಳುವ ಅಧಿಕಾರಿಗಳು ಅಥವಾ ಸಿಬ್ಬಂದಿ ವರ್ಗಕ್ಕೆ ಸರಿಯಾದ ನಿದ್ದೆಯಿಲ್ಲ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೊದಿ ಟ್ವಿಟರ್ ಖಾತೆ ಹ್ಯಾಕ್!. ಅರೇ, ಪ್ರಧಾನಿಯವರ ಟ್ವಿಟರ್ ಅಕೌಂಟೇ ಹ್ಯಾಕ್ (PM Narendra Modi Twitter Account Hack) ಆದರೆ ನಮ್ಮ ನಿಮ್ಮಂತವರ ಅಕೌಂಟ್‌ಗಳ ಗತಿಯೇನು? ತೆಬಿಸಿ ಬೇಕಿಲ್ಲ, ನಿಮ್ಮ ಟ್ವಿಟರ್ ಅಕೌಂಟ್ ಭದ್ರಪಡಿಸಲು (Twitter Account Safety) ಈ ಸ್ಟೋರಿಯಲ್ಲಿರುವ ಮಾಹಿತಿ ಅನುಸರಿಸಿ

ಟ್ವಿಟರ್ ವಿಶ್ವದ ನಂಬರ್ ಒನ್ ಮೈಕ್ರೋಬ್ಲಾಗಿಂಗ್ ಸೈಟ್ ಆಗಿದೆ. ಇದನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬಳಕೆ ಮಾಡುತ್ತಿದ್ದಾರೆ. ನಮ್ಮ ದೈನಂದಿನ ಜೀವನದಲ್ಲಿ ಟ್ವಿಟರ್ ಬಹಳ ಮುಖ್ಯವಾದ ಪಾತ್ರ ಹೊಂದಿವೆ. ಆದರೆ ಇದನ್ನು ಬಳಸುವಾಗ ಸಾಕಷ್ಟು ಜಾಗ್ರತೆಯಿಂದ ವಹಿಸಬೇಕು. ಇಲ್ಲವಾದಲ್ಲಿ ಅದು ಹ್ಯಾಕ್ ಆಗಿ ದೊಡ್ಡ ಅನಾಹುತಕ್ಕೆ ಅಡಿಪಾಯ ಆಗಬಹುದು.

ಟ್ವಿಟರ್ ಖಾತೆ ಹ್ಯಾಕ್ ಆಗದಂತೆ ಏನೆಲ್ಲ ಮಾಡಬಹುದು? (Secure Your Twitter Account)
ಈಗಾಗಲೇ ಅದೆಷ್ಟೋ ಸೆಲಿಬ್ರಿಟಿಗಳ ಅಕೌಂಟ್ ಹ್ಯಾಕ್ ಆಗಿ ಕೆಲವು ಪರ್ಸನಲ್ ಮೆಸೇಜ್, ಫೋಟೋ ಹಾಗೂ ವಿಡಿಯೋಗಳು ಲೀಕ್ ಆಗಿವೆ. ಇದು ಒಬ್ಬರ ಖಾಸಗಿ ಲೈಫ್ ಗೆ ಧಕ್ಕೆ ತರುತ್ತದೆ. ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರ ಟ್ವಿಟರ್ ಅಕೌಂಟ್ ಕೂಡ ಹ್ಯಾಕ್ ಆಗಿದ್ದನ್ನು ಗಮನಿಸಬಹುದು. ಇದೆಲ್ಲದರಿಂದ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಕೆಳಗಿನ ಟಿಪ್ಸ್ ಬಳಸಿ.

2 ಫ್ಯಾಕ್ಟರ್ ಅಥೆಂಟಿಕೇಶನ್: ಇದು ಸೆಕ್ಯೂರಿಟಿಯ ಬೇಸಿಕ್ ಸ್ಟೆಪ್ ಆಗಿದೆ. ಪ್ರತಿ ಬಾರಿ ಲಾಗಿನ್ ಆಗುವಾಗಲು ಫೋನ್ ನಂಬರ್ ಅಥವಾ ಪಾಸ್‌ವರ್ಡ್ ಕೇಳುತ್ತದೆ. ಇದು ಆಕ್ಟಿವೇಟ್ ಮಾಡಲು ಟ್ವಿಟ್ಟರ್ ಲಾಗಿನ್ ಆಗಿ ಸ್ಕ್ರೀನ್ ಎಡ ಬದಿಯಲ್ಲಿ ಇರುವ ಮೋರ್ ಒತ್ತಿ ಸೆಕ್ಯೂರಿಟಿ ಅಂಡ್ ಅಕೌಂಟ್ ಅಸೆಸ್ > ಸೆಕ್ಯೂರಿಟಿ> 2 ಫ್ಯಾಕ್ಟರ್ ಅಥೆಂಟಿಕೇಶನ್ .
ನಂತರ ಇಲ್ಲಿ3 ಆಪ್ಷನ್ ಕಾಣುತ್ತದೆ. ಟೆಕ್ಸ್ಟ್ ಮೆಸೇಜ್, ಅಥೇಂಟಿಕೇಶನ್ ಆ್ಯಪ್ ಹಾಗೂ ಸೆಕ್ಯೂರಿಟಿ ಕೀ. ಇವುಗಳಲ್ಲಿ ಬೇಕಾದ್ದನ್ನು ಕ್ಲಿಕ್ ಮಾಡಿದರೆ ಆಯ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪಾಸ್‌ವರ್ಡ್ ಯಾವುದೇ ಕಾರಣಕ್ಕೂ ಮರೆಯುವ ಹಾಗಿಲ್ಲ.

ಟ್ವಿಟರ್ ಜೊತೆ ಇತರ ಆ್ಯಪ್ ಕನೆಕ್ಟ್ ಮಾಡದಿರಿ: ಬಹುತೇಕ ಗೇಮಿಂಗ್ ಆ್ಯಪ್‌ಗಳು ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಜೊತೆ ಕನೆಕ್ಟ್ ಆಗುತ್ತವೆ. ಇದು ಅಷ್ಟು ಸೇಫ್ ಅಲ್ಲ. ಅಷ್ಟೇ ಅಲ್ಲದೇ, ಅಕೌಂಟ್ ಹ್ಯಾಕ್ ಆಗುವ ಸಂದರ್ಭ ಹೆಚ್ಚು.

ಪಾಸ್‌ವರ್ಡ್ ಬದಲಿಸಿ: ಹಳೆ ಪಾಸ್‌ವರ್ಡ್ ಪದೇ ಪದೇ ಬಳಸದೆ, ಬದಲಾಯಿಸಬೇಕು. ಎಲ್ಲ ಕಡೆ ಒಂದೇ ಪಾಸ್‌ವರ್ಡ್ ಬಳಕೆಯೂ ಡೇಂಜರ್ ಆಗಿದೆ.
ಸ್ಟ್ರಾಂಗ್ ಪಾಸ್‌ವರ್ಡ್ ಬಳಸಿ: ಪಾಸ್‌ವರ್ಡ್ ಕ್ರಿಯೇಟ್ ಮಾಡುವಾಗ, ಆದಷ್ಟು ಟಫ್ ಆದುದನ್ನೇ ಬಳಸಿ. ಒಂದು ವೇಳೆ ಮರೆತು ಹೋಗುತ್ತದೆ ಎನ್ನುವ ಭಯವಿದ್ದರೆ, ಕ್ರೋಮ್ ಅಥವಾ ಫೈರ್ ಫಾಕ್ಸ್ ಬಿಲ್ಟ್ ಇನ್ ಪಾಸ್‌ವರ್ಡ್ ಮ್ಯಾನೇಜರ್ ಬಳಸಬಹುದು. ಅಂದಹಾಗೆ ಯಾರ ಜೊತೆಯೂ ಅಕೌಂಟ್ ಮಾಹಿತಿ ಶೇರ್ ಮಾಡದಿರಿ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(Twitter Account Safety : PM Narendra Modi Twitter Hack know how to secure your account)

RELATED ARTICLES

Most Popular