ಶುಕ್ರವಾರ, ಜೂನ್ 13, 2025
Hometechnologyಹೊಸ ರೂಲ್ಸ್‌ : ಅತೀ ಹೆಚ್ಚು ಸಿಮ್‌ ಹೊಂದಿದ್ರೆ 3 ವರ್ಷ ಜೈಲು ಶಿಕ್ಷೆ, 2...

ಹೊಸ ರೂಲ್ಸ್‌ : ಅತೀ ಹೆಚ್ಚು ಸಿಮ್‌ ಹೊಂದಿದ್ರೆ 3 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ

- Advertisement -

Using Multiple SIM Cards  : ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್‌ ಇದ್ದೇ ಇರುತ್ತೆ. ಅದ್ರಲ್ಲೂ ಒಂದಕ್ಕಿಂತ ಹೆಚ್ಚು ಸಿಮ್‌ ಬಳಕೆ ಮಾಡುವವರ ಸಂಖ್ಯೆ ಅತೀ ಹೆಚ್ಚಿದೆ. ಆದ್ರೀಗ ಹೊಸ ರೂಲ್ಸ್‌ ಜಾರಿಯಾಗಿದ್ದು, ಅತೀ ಹೆಚ್ಚು ಸಿಮ್‌ ಕಾರ್ಡ್‌ (SIM Card) ಬಳಕೆ ಮಾಡಿದ್ರೆ ನಿಮಗೆ ದಂಡದ ಜೊತೆಗೆ ಜೈಲು ಶಿಕ್ಷೆ ಎದುರಾಗೋ ಸಾಧ್ಯತೆಯಿದೆ.

Using Multiple SIM Cards 2 Lakh Fine, 3 Years Imprisonment
Image Credit to Original Source

ದೂರ ಸಂಪರ್ಕ ಕಾಯಿದೆ 2023ರ ಪ್ರಕಾರ ಒಬ್ಬ ವ್ಯಕ್ತಿಯು ಎಷ್ಟು ಸಿಮ್‌ ಕಾರ್ಡ್‌ಗಳನ್ನು ಹೊಂದಿರ ಬೇಕು ಅನ್ನೋದನ್ನು ತಿಳಿಸಿದೆ. ಟೆಲಿಕಾಂ ಕಾಯಿದೆಯ ಪ್ರಕಾರ ಸಿಮ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ರೂಪಿಸಿದೆ. ಆದರೆ ಎರಡಕ್ಕಿಂತ ಹೆಚ್ಚು ಸಿಮ್‌ ಹೊಂದಿರುವುದು ಅಪರಾಧವಲ್ಲ. ಆದರೂ ನೀವು ಬಹು ಸಿಮ್ ಕಾರ್ಡ್‌ ಹೊಂದಿರುವ ಕಾರಣಕ್ಕೆ 2 ಲಕ್ಷ ದಂಡ, 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಆತ ವಾಸಿಸುತ್ತಿರುವ ಪ್ರದೇಶಗಳ ಆಧಾರದ ಮೇಲೆ ಗರಿಷ್ಟ 9 ಸಿಮ್‌ ಕಾರ್ಡ್‌ ಹೊಂದಿರಬಹುದು. ಆದರೆ ದೇಶದ ಸೂಕ್ಷ್ಮ ಪ್ರದೇಶಗಳು ಎನಿಸಿಕೊಂಡಿರುವ ಜಮ್ಮು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿಯು ಗರಿಷ್ಟ ೬ ಸಿಮ್‌ ಕಾರ್ಡ್‌ಗಳನ್ನು ಹೊಂದಲು ಅವಕಾಶವಿದೆ.

ಇದನ್ನೂ ಓದಿ : ಕೇವಲ 51 ರೂ.ಗೆ ಅನಿಯಮಿತ 5G ಡೇಟಾ : ರಿಲಯನ್ಸ್ ಜಿಯೋ ಹೊಸ ಯೋಜನೆ

ರೂಲ್ಸ್‌ ಉಲ್ಲಂಘಿಸಿದ್ದಕ್ಕೆ ಏನು ಶಿಕ್ಷೆ?

ಗರಿಷ್ಟ ಸಿಮ್‌ ಕಾರ್ಡ್‌ ಪಡೆದುಕೊಂಡ ವ್ಯಕ್ತಿಯು ಆ ಸಿಮ್ ಕಾರ್ಡ್‌ಗಳನ್ನು ಬೇರೆಯದೇ ಕಾರ್ಯಕ್ಕೆ ಬಳಕೆ ಮಾಡಿರುವುದು ಖಚಿತವಾದ್ರೆ ಅಂತಹ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಾಗಲಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘನೆ ಮಾಡಿದ್ರೆ 50,000 ರೂ. ದಂಡ ವಿಧಿಸಲಾಗುತ್ತದೆ. ಪದೇ ಪದೇ ತಪ್ಪುಗಳನ್ನು ಮಾಡಿದ್ರೆ ದೂರಸಂಪರ್ಕ ಕಾಯ್ದೆಯ ಪ್ರಕಾರ 2 ಲಕ್ಷದವರೆಗೆ ಕೂಡ ದಂಡ ವಿಧಿಸಲಾಗುತ್ತದೆ.

ಇನ್ನು ಹೊಸ ಟೆಲಿಕಾಂ ಕಾಯಿದೆ 2023ರ ಅಡಿಯಲ್ಲಿ, ಸಿಮ್‌ ಮಾರಾಟ ಮಾಡುವವರಿಗೂ ಕೂಡ ಕೆಲವೊಂದು ನಿಯಮಗಳನ್ನು ಜಾರಿ ಮಾಡಲಾಗಿದೆ. ಸಿಮ್‌ ಖರೀದಿದಾರರು ಅಗತ್ಯವಾಗಿರುವ ದಾಖಲೆಗಳನ್ನು ಒದಗಿಸಬೇಕು. ಈ ನಿಯಮವನ್ನು ಉಲ್ಲಂಘನೆ ಮಾಡಿದ್ರೆ ಅಂತಹ ಸಂದರ್ಭದಲ್ಲಿ ಸಿಮ್‌ ಮಾರಾಟಗಾರರಿಗೂ ಕೂಡ 3 ವರ್ಷಗಳ ಜೈಲು ಶಿಕ್ಷೆ ಅಥವಾ 50 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಕೆಲವೊಮ್ಮೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ವಿಧಿಸಲಾಗುತ್ತದೆ.

Using Multiple SIM Cards 2 Lakh Fine, 3 Years Imprisonment
Image Credit to Original Source

ಭಾರತ ಸರಕಾರ ನೀಡಿರುವ ದಾಖಲೆಯನ್ನು ನೀಡಿಯೇ ಸಿಮ್‌ ಪಡೆಯಲು ಅವಕಾಶವಿದೆ. ಗುರುತಿನ ಚೀಟಿಯ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಒಬ್ಬ ವ್ಯಕ್ತಿಯ ಹೆಸರಲ್ಲಿ ಎಷ್ಟು ಸಿಮ್‌ ಕಾರ್ಡ್‌ ಇದೆ ಅನ್ನೋದನ್ನು ಪತ್ತೆ ಹೆಚ್ಚಬಹುದಾಗಿದೆ. ಅಷ್ಟೇ ಅಲ್ಲದೇ ನಿಮ್ಮ ಹೆಸರಿನಲ್ಲಿ ಇರುವ ಸಿಮ್‌ ಕಾರ್ಡ್‌ ಅನ್ನು ಬೇರೆ ಯಾರಾದ್ರೂ ಬಳಕೆ ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ಸುಲಭವಾಗಿ ಪತ್ತೆ ಹೆಚ್ಚಬಹುದಾಗಿದೆ.

ಇದನ್ನೂ ಓದಿ : Jio, Airtel Prepaid Plans : ಹೊಸ ಪ್ರಿಪೇಯ್ಡ್ ಪ್ಲಾನ್‌ ಪರಿಚಯಿಸಿದ ರಿಲಯನ್ಸ್ ಜಿಯೋ, ಏರ್‌ಟೆಲ್

ಸಿಮ್‌ ಕಾರ್ಡ್‌ ಕಳವು ಪತ್ತೆ ಹಚ್ಚೋದು ಹೇಗೆ ?

ಸರಕಾರ ನಿಗದಿ ಪಡಿಸಿದ ನಿಯಮಕ್ಕಿಂತ ಹೆಚ್ಚಿನ ಸಿಮ್‌ ಕಾರ್ಡ್‌ಗಳನ್ನು ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಸಿಮ್‌ ಕಾರ್ಡ್‌ ರದ್ದು ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ. ಒಂದೊಮ್ಮೆ ನಿಮ್ಮ ಸಿಮ್‌ ಕಾರ್ಡ್‌ ಬೇರೆಯವರು ಬಳಕೆ ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ಅಂತಹ ಕಾರ್ಡ್‌ ಅನ್ನು ಬೇರೊಬ್ಬರಿಗೆ ವರ್ಗಾಯಿಸಬಹುದಾಗಿದೆ. ಅಷ್ಟೇ ಅಲ್ಲದೇ ಬಳಕೆಯಾಗದೇ ಇರುವ ಸಿಮ್‌ ಕಾರ್ಡ್‌ ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದಾಗಿದೆ.

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ ಕಾರ್ಡ್‌ ಇದೆ ಗೊತ್ತಾ ?

ಭಾರತೀಯ ವ್ಯಕ್ತಿಯೋರ್ವರ ಹೆಸರಲ್ಲಿ ಎಷ್ಟು ಸಿಮ್‌ ಕಾರ್ಡ್‌ ಇದೆ ಅಂತಾ ತಿಳಿಯೋದಕ್ಕೆ ಟೆಲಿಕಾಂ ಇಲಾಖೆ ಅವಕಾಶ ಕಲ್ಪಿಸಿದೆ. ಟೆಲಿಕಾಂ ಇಲಾಖೆ ಸಾಥಿ ಅನ್ನೋ ಪೋರ್ಟಲ್‌ ಆರಂಭಿಸಿದ್ದು, ಆಧಾರ್‌ ಕಾರ್ಡ್‌ ದಾಖಲೆ ನೀಡಿಯೇ ನಿಮ್ಮ ಸಿಮ್‌ ಕಾರ್ಡ್‌ ನೋಂದಣಿ ಆಗಿರುವುದರಿಂದ ನಿಮ್ಮ ಹೆಸರಲ್ಲಿ ಎಷ್ಟು ಸಿಮ್‌ ಇದೆ ಅನ್ನೋದನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ : Realme P1 5G, Realme P1 Pro 5G : ಭಾರತದಲ್ಲಿ ಬಿಡುಗಡೆ ಆಯ್ತು ರಿಯಲ್‌ ಮೀ P1 5G

ನಿಮ್ಮ ಹೆಸರಲ್ಲಿ ಇರುವ ಸಿಮ್‌ ಮಾಹಿತಿ ಪರಿಶೀಲಿಸುವುದು ಹೇಗೆ ?

  • ಟೆಲಿಕಾಂ ಇಲಾಖೆಯ ಸಂಚಾರ ಸಾಥಿ (www.sancharsathi.gov.in ) ವೆಬ್ಸೈಟ್‌ಗೆ ಭೇಟಿ ನೀಡಿ
  • ಮುಖಪುಟದಲ್ಲಿರುವ ನಿಮ್ಮ ಆಯ್ಕೆಯನ್ನು ಕ್ಲಿಕ್‌ ಮಾಡಿ
  • ನಂತರ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ. ಕೆಳಗೆ ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ (ಕ್ಯಾಪ್ಚಾದೊಂದಿಗೆ ಪರಿಶೀಲಿಸಿ). ನಂತರ ನಿಮ್ಮ ಮೊಬೈಲ್‌ಗೆ ಬಂದಿರುವ OTP ಅನ್ನು ನಮೂದಿಸಿ.
  • ನಂತರದಲ್ಲಿ ನಿಮ್ಮ ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಗಳ ಮಾಹಿತಿ ಲಭ್ಯವಾಗಲಿದೆ.

Using Multiple SIM Cards 2 Lakh Fine, 3 Years Imprisonment

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular