ಸೋಮವಾರ, ಏಪ್ರಿಲ್ 28, 2025
HometechnologyMicro-camera : ಉಪ್ಪಿನ ಕಣದ ಗಾತ್ರದ ಕ್ಯಾಮರಾ ಅನ್ವೇಷಿಸಿದ ವಿಜ್ಞಾನಿಗಳು..!

Micro-camera : ಉಪ್ಪಿನ ಕಣದ ಗಾತ್ರದ ಕ್ಯಾಮರಾ ಅನ್ವೇಷಿಸಿದ ವಿಜ್ಞಾನಿಗಳು..!

- Advertisement -

ಕ್ಯಾಮರಾಗಳನ್ನು ನೀವು ನೋಡಿಯೇ ಇರ್ತೀರಾ. ಹೀಗಾಗಿ ಕ್ಯಾಮರಾಗಳ ಬಗ್ಗೆ ಹೆಚ್ಚು ವರ್ಣನೆ ಮಾಡಬೇಕಾದ ಅವಶ್ಯಕತೆ ಇಲ್ಲ. ಆದರೆ ಎಂದಾದರೂ ಸಾಸಿವೆ ಕಾಳಿನಷ್ಟು ಅಲ್ಲಲ್ಲ ಒಂದು ಉಪ್ಪಿನ ಕಣದ ಗಾತ್ರದಷ್ಟು ಚಿಕ್ಕದಾದ ಕ್ಯಾಮರಾವನ್ನು ಎಲ್ಲಾದರೂ ಕಂಡಿದ್ದೀರೇ..? ಅಥವಾ ಇಂತಹದ್ದೊಂದು ಕ್ಯಾಮರಾ ನಿಮ್ಮ ಕಲ್ಪನೆಗಾದರೂ ಬಂದಿದೆಯೇ..?(Micro-camera)


ಪ್ರಿನ್ಸ್​ಟನ್​ ವಿಶ್ವವಿದ್ಯಾಲಯ ಹಾಗೂ ವಾಷಿಂಗ್ಟನ್​ ವಿಶ್ವವಿದ್ಯಾಲಯದ ಸಂಶೋಧಕರು ಇಂತಹದ್ದೊಂದು ಕ್ಯಾಮರಾವನ್ನು ಕಂಡು ಹಿಡಿದಿದ್ದಾರೆ.ಈ ವಿಶೇಷ ಕ್ಯಾಮರಾವು ಒಂದು ಉಪ್ಪಿನ ಕಣದ ಗಾತ್ರವನ್ನು ಹೊಂದಿದೆ.
ಹೌದು..! ಈ ಕ್ಯಾಮರಾವು 1 ಉಪ್ಪಿನ ಕಣಕ್ಕಿಂತ ಒಂದಿಂಚೂ ದೊಡ್ಡ ಗಾತ್ರವನ್ನು ಹೊಂದಿಲ್ಲ. ಆದರೆ ಈ ಪುಟಾಣಿ ಕ್ಯಾಮರಾವು ಅತ್ಯಂತ ದೂರದಲ್ಲಿರುವ ವಸ್ತುವಿನ ಫೋಟೋವನ್ನೂ ಸ್ಪಷ್ಟವಾಗಿ ತೆಗೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದರೆ ನೀವು ನಂಬಲೆಬೇಕು.


ಈ ಹಿಂದೆ ಸಾಕಷ್ಟು ವಿಜ್ಞಾನಿಗಳು ಮೈಕ್ರೋ ಗಾತ್ರದ ಕ್ಯಾಮರಾಗಳನ್ನು ಅನ್ವೇಷಣೆ ಮಾಡಿದ್ದಾರೆ. ಆದರೆ ಯಾವೊಂದು ಕ್ಯಾಮರಾ ಕೂಡ ಕ್ಲಾರಿಟಿ ಇರುವ ಫೋಟೋಗಳನ್ನು ಕ್ಲಿಕ್ಕಿಸುತ್ತಿರಲಿಲ್ಲ. ಮಸುಕು ಮಸುಕಾದ ಫೋಟೋಗಳನ್ನೇ ಈ ಕ್ಯಾಮರಾಗಳು ಕ್ಲಿಕ್ಕಿಸುತ್ತಿದ್ದವು.ಆದರೆ ಈ ಕ್ಯಾಮರಾದಲ್ಲಿ ಮಾತ್ರ ನಿಮಗೆ ಇಂತದ್ದೊಂದು ಸಮಸ್ಯೆ ಉಲ್ಬಣವಾಗೋದೇ ಇಲ್ಲ. ಉಪ್ಪಿನ ಕಣದ ಗಾತ್ರದ ಈ ಕ್ಯಾಮರಾವು ನಿಮಗೆ ಹೆಚ್​​ಡಿ ಕ್ವಾಲಿಟಿಯ ಫೋಟೋಗಳನ್ನು ಸೆರೆ ಹಿಡಿದು ಕೊಡಬಲ್ಲದು.


ಈ ಕ್ಯಾಮರಾವನ್ನು ಎಲ್ಲಿ ಬಳಕೆ ಮಾಡಲಾಗುತ್ತೆ..?
ಪ್ರಿನ್ಸ್​ಟೆನ್​ ವಿಶ್ವವಿದ್ಯಾಲಯವು ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು ಪುಟಾಣಿ ಕ್ಯಾಮರಾವನ್ನು ಮೆಡಿಕಲ್​ ಕ್ಷೇತ್ರದಲ್ಲಿ ಬಳಕೆ ಮಾಡಲಾಗುತ್ತೆ ಎಂದು ಹೇಳಿದೆ.
ನೇಚರ್​ ಕಮ್ಯುನಿಕೇಷನ್​ ಎಂಬ ಜರ್ನಲ್​ನಲ್ಲಿ ಈ ಕ್ಯಾಮರಾ ಅನ್ವೇಷಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ. ಇಲ್ಲಿ ಕ್ಯಾಮರಾವನ್ನು ಯಾವೆಲ್ಲ ಹಂತಗಳ ಮೂಲಕ ಅನ್ವೇಷಿಸಲಾಯ್ತು ಎಂಬುದನ್ನು ವಿವರಿಸಲಾಗಿದೆ.


ಒಂದು ಸಾಮಾನ್ಯ ಕ್ಯಾಮರಾದಲ್ಲಿ ಬೆಳಕಿನ ಕಿರಣಗಳನ್ನು ಫೋಕಸ್​ ಮಾಡಲು ಬಾಗಿದ ಗಾಜು ಅಥವಾ ಪ್ಲಾಸ್ಟಿಕ್​​ ಲೆನ್ಸ್​ಗಳ ಸರಣಿಯನ್ನು ಬಳಸಲಾಗುತ್ತದೆ. ಆದರೆ ಮೈಕ್ರೋ ಕ್ಯಾಮರಾದಲ್ಲಿ ಮೆಟಾಸರ್ಫೇಸ್​​​​ ಎಂಬ ತಂತ್ರಜ್ಞಾನವನ್ನು ಅವಲಂಭಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನು ಓದಿ :Reliance Jio : ವೋಡಾಫೋನ್​ ಐಡಿಯಾ ವಿರುದ್ಧ ಟ್ರಾಯ್​ಗೆ ದೂರು ನೀಡಿದ ರಿಲಯನ್ಸ್​ ಜಿಯೋ

Viral: Researchers develop fully-functional Micro-camera the size of a grain of salt [WATCH]

RELATED ARTICLES

Most Popular