ವಿವೊ (Vivo) ಭಾರತದಲ್ಲಿ ಸೆಪ್ಟೆಂಬರ್ 15 ರಂದು ವಿವೊ V25 (Vivo V25) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ V25 Pro ಸ್ಮಾರ್ಟ್‌ಫೋನ್‌ನ ಟೋನ್–ಡೌನ್ ಆವೃತ್ತಿಯಾಗಿದೆ. ಈಗ ಬಿಡುಗಡೆಗೆ ಸಜ್ಜಾಗಿರುವ Vivo V25 ಸ್ವಲ್ಪ ಮಟ್ಟಿಗೆ V25 Pro ನ ವಿಶೇಷತೆಗಳನ್ನೇ ಹೋಲುತ್ತದೆ. ಆದರೆ ಇದು ಕೆಲವೊಂದು ವೈಶಿಷ್ಟ್ಯಗಳನ್ನು ಕಳೆದುಕೊಂಡಿದೆ. ಅಂದರೆ ಇದರಲ್ಲಿ ಕಡಿಮೆ ಶಕ್ತಿಯುತ ಹಾರ್ಡ್‌ವೇರ್ ಅನ್ನು ಹೊಂದಿಸಲಾಗಿದೆ. ಈಗಾಗಲೆ ವಿವೊ ಇಂಡಿಯಾ V25 ನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.
ವಿವೊ ಇಂಡಿಯಾದ ವೆಬ್‌ಸೈಟ್‌ನ ಪ್ರಕಾರ ವಿವೊ V25, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲಿತ 64 ಮೆಗಾಪಿಕ್ಸೆಲ್ ನೈಟ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ, 8GB ವರೆಗೆ ವಿಸ್ತರಿಸಬಹುದಾದ RAM, ಮತ್ತು ಫೋನ್‌ನ ಹಿಂಭಾಗದಲ್ಲಿ AG ಗ್ಲಾಸ್ ವಿನ್ಯಾಸದ ಹೊಂದಿದೆ. V25 ಪ್ರೊನಲ್ಲಿನ ಇರುವಂತೆ ಪಂಚ್-ಹೋಲ್ ವಿನ್ಯಾಸಕ್ಕಿಂತ ಭಿನ್ನವಾಗಿ, V25 ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಪಡೆದುಕೊಂಡಿದೆ.
ವಿವೋ V25 ವೈಶಿಷ್ಟ್ಯತೆಗಳು :
6.44 ಇಂಚಿನ FullHD+ AMOLED ಡಿಸ್ಪ್ಲೇಯೊಂದಿಗೆ 90Hz ರಿಫ್ರೆಶ್ ದರದೊಂದಿಗೆ ಬರುವ ಸಾಧ್ಯತೆಯಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್ ಅಂದರೆ 5G ಸಂಪರ್ಕಕ್ಕೆ ಬೆಂಬಲಿಸುವ ಸಾಧ್ಯತೆಯಿದೆ. ವಿಸ್ತರಿಸಬಹುದಾದ RAM ನೊಂದಿಗೆ 12 GB RAM ಮತ್ತು 256 GB ಸಂಗ್ರಹಣೆಯನ್ನು ಪಡೆಯಬಹುದಾಗಿದೆ. 20 GB ವಿಸ್ತ್ರತ RAM ಅನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಬಳಸಬಹುದಾಗಿದೆ.
ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ವಿವೊ V25 ಹೊಂದಿದೆ. ಅವುಗಳಲ್ಲಿ ಒಂದು 64-ಮೆಗಾಪಿಕ್ಸೆಲ್ ಸಂವೇದಕ ಮತ್ತು ವದಂತಿಗಳ ಪ್ರಕಾರ, ಇತರ ಎರಡು, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ಅಳವಡಿಸಿರುವ ಸಾಧ್ಯತೆಯಿದೆ. 44W ಚಾರ್ಜಿಂಗ್ ಬೆಂಬಲದೊಂದಿಗೆ 4500mAh ಬ್ಯಾಟರಿ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ.
V25 ನ ನಿರೀಕ್ಷಿತ ಬೆಲೆ :
ವಿವೊ V25 Pro ನ ಪ್ರಾರಂಭಿಕ ಬೆಲೆಯು 35,999 ಆಗಿರುವುದರಿಂದ, V25 ನ ಬೆಲೆ ಸ್ವಲ್ಪ ಕಡಿಮೆ ಇರುವ ಸಾಧ್ಯತೆ ಇದೆ.
(Vivo V25 64 mp night camera smartphone to launch today)