ಭಾನುವಾರ, ಜೂನ್ 15, 2025
HometechnologyVivo V25 Pro : ಭಾರತದಲ್ಲಿ ಬಿಡುಗಡೆಯಾದ ವಿವೊ V25 ಪ್ರೋ : ಬಣ್ಣ ಬದಲಾಯಿಸುವ...

Vivo V25 Pro : ಭಾರತದಲ್ಲಿ ಬಿಡುಗಡೆಯಾದ ವಿವೊ V25 ಪ್ರೋ : ಬಣ್ಣ ಬದಲಾಯಿಸುವ ಗ್ಲಾಸ್‌ ಇದರ ವೈಶಿಷ್ಟ್ಯ

- Advertisement -

ವಿವೊ ಸ್ಮಾರ್ಟ್‌ಫೋನ್‌ (Vivo Smartphones) ಗಳು ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಸೃಷ್ಟಿಮಾಡಿಕೊಂಡಿದೆ. ಇದು ಮೊದಲೇ ಭರವಸೆ ನೀಡಿದಂತೆ, ಕಂಪನಿಯ V ಸರಣಿಯ ಇತ್ತೀಚಿನ ಸ್ಮಾರ್ಟ್‌ಫೋನ್‌ ವಿವೊ V25 ಪ್ರೋ (Vivo V25 Pro) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ದರ, 12GB ವರೆಗಿನ RAM ಸೇರಿದಂತೆ ಗಮನಾರ್ಹವಾದ ವಿಶೇಷತೆಗಳೊಂದಿಗೆ ಅನಾವರಣಗೊಂಡಿದೆ. ಇದನ್ನು ವರ್ಚುವಲ್ RAM ವೈಶಿಷ್ಟ್ಯಗಳೊಂದಿಗೆ 8GB ವರೆಗೆ ವಿಸ್ತರಿಸಬಹುದಾಗಿದೆ.

ವಿವೊ V25 ಪ್ರೋ ಹೊಸ ಬಯೋನಿಕ್ ಕೂಲಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು 3002mm² ನ ಕೂಲಿಂಗ್ ಪ್ರದೇಶದೊಂದಿಗೆ ಹೆಚ್ಚಿನ-ನಿಖರ ತಂತ್ರದ ಮೂಲಕ ಕೆತ್ತಿದ ಸಸ್ಯದ ಬೇರುಗಳ ರಚನೆಯನ್ನು ಹೋಲುವ ದ್ರವ ತಂಪಾಗಿಸುವ VC ಅನ್ನು ಒಳಗೊಂಡಿದೆ. ಈ ಕೂಲಿಂಗ್ ವ್ಯವಸ್ಥೆಯು ನಿರಂತರ ಉಷ್ಣ ನಿಯಂತ್ರಣ ಮತ್ತು ಸ್ಥಿರವಾದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಹೊಸ ವಿವೊ ಸರಣಿಯ ಸ್ಮಾರ್ಟ್‌ಫೋನ್, ಸೈಲಿಂಗ್ ಬ್ಲೂ ರೂಪಾಂತರದಲ್ಲಿ ಬಣ್ಣವನ್ನು ಬದಲಾಯಿಸುವ ಫ್ಲೋರೈಟ್ AG ಗ್ಲಾಸ್ ವಿನ್ಯಾಸ ಹೊಂದಿದೆ. ಈ ವಿನ್ಯಾಸವು ಸೂರ್ಯನ ಬೆಳಕು ಮತ್ತು ಕೃತಕ ಯುವಿ ಕಿರಣಗಳ ಇತರ ಮೂಲಗಳೊಂದಿಗೆ ಸಂವಹನ ನಡೆಸುತ್ತದೆ. ಅಂತಿಮವಾಗಿ, ಇದು ಆಕಾಶ ನೀಲಿ ಬಣ್ಣದಿಂದ ಸಾಗರ ನೀಲಿ ಬಣ್ಣಕ್ಕೆ ಬದಲಾಗುತ್ತದೆ.

ವಿವೊ V25 ಪ್ರೋ ವಿಶೇಷತೆಗಳು :
ವಿವೊ V25 ಪ್ರೋ 2376 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಇರುವ ಮತ್ತು 19.8:9 ರ ಆಕಾರ ಅನುಪಾತವಿರುವ, 6.56-ಇಂಚಿನ FHD+ AMOLED ಡಿಸ್ಪ್ಲೇಯನ್ನು ಪಡೆದುಕೊಂಡಿದೆ. ಪರದೆಯು 120Hz ರಿಫ್ರೆಶ್ ದರ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ HDR10+ ಪ್ಯಾನೆಲ್ ಹೊಂದಿದೆ. ಅದರ ಹುಡ್ ಅಡಿಯಲ್ಲಿ, ಸ್ಮಾರ್ಟ್‌ಫೋನ್‌ 8GB/12GB RAM ಮತ್ತು 128GB/256GB ಯ ಸ್ಟೋರೇಜ್ ಸ್ಥಳದೊಂದಿಗೆ 6nm ಪ್ರಕ್ರಿಯೆಯ ಆಧಾರದ ಮೇಲೆ ಆಕ್ಟಾ-ಕೋರ್ ಮಿಡಿಯಾ ಟೆಕ್‌ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಮೂಲಕ ಕೆಲಸಮಾಡಲಿದೆ. ಇದಕ್ಕೆ ಫನ್‌ಟಚ್‌ OS 12 ನ ಬೆಂಬಲವಿದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್‌ನೊಂದಿಗೆ 64MP ಪ್ರೈಮರಿ ಸೆನ್ಸಾರ್‌ನ ಜೊತೆಗೆ f/1.89 ಅಪರ್ಚರ್ ಮತ್ತು OIS, 8MP ಅಲ್ಟ್ರಾ-ವೈಡ್ ಸೆಕೆಂಡರಿ ಲೆನ್ಸ್ ಜೊತೆಗೆ f/2.2 ಅಪರ್ಚರ್ ಮತ್ತು f/2.4 ಅಪರ್ಚರ್‌ನ 2MP ತೃತೀಯ ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಹೊಂದಿದೆ . ಕ್ಯಾಮೆರಾ 60fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇಷ್ಟೇ ಅಲ್ಲದೇ, ಇತರ ಅಂಶಗಳಾದ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, USB ಟೈಪ್-C ಪೋರ್ಟ್, 32MP ಸೆಲ್ಫಿ ಕ್ಯಾಮೆರಾ ಸಂವೇದಕ, ಡ್ಯುಯಲ್ ಸಿಮ್ ಬೆಂಬಲ ಮತ್ತು 66W FlashCharge ವೇಗದ ಚಾರ್ಜಿಂಗ್‌ನೊಂದಿಗೆ 4830mAh ಬ್ಯಾಟರಿಯನ್ನು ಒಳಗೊಂಡಿದೆ.

ಭಾರತದಲ್ಲಿ ವಿವೊ V25 ಪ್ರೋನ ಬೆಲೆ:
ವಿವೊ V25 ಪ್ರೋ ಅನ್ನು, ಸೈಲಿಂಗ್ ಬ್ಲೂ ಮತ್ತು ಪ್ಯೂರ್ ಬ್ಲಾಕ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಎರಡು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಕಂಡುಬರುತ್ತದೆ. ಅಂದರೆ ಮೊದಲನೆಯದು 8GB RAM + 128GB ROM ಮತ್ತು ಎರಡನೆಯದು 12GB RAM + 256GB ಆಗಿದೆ. ಇದರ ಬೆಲೆ ಕ್ರಮವಾಗಿ 35,999 ರೂ. ಮತ್ತು 39,999 ರೂ. ಗಾಳಗಿದೆ. ಈ ಸ್ಮಾರ್ಟ್‌ಫೋನ್‌ ಇಂದಿನಿಂದ ಆಗಸ್ಟ್ 17 ರಿಂದ ಮುಂಗಡ-ಬುಕಿಂಗ್‌ ಲಭ್ಯವಿದೆ. ಆಗಸ್ಟ್ 25 ರಿಂದ Flipkart, Vivo.com ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಗ್ರಾಹಕರಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ : Oppo Reno8 Series : 4K ಅಲ್ಟ್ರಾ HDR ಕ್ಯಾಮರಾ ವಿಶೇಷತೆಯೊಂದಿಗೆ ಇಂದು ಬಿಡುಗಡೆಯಾಗಲಿರುವ Oppo Reno8 ಮತ್ತು Reno Pro ಸ್ಮಾರ್ಟ್‌ಫೋನ್‌ಗಳು!

ಇದನ್ನೂ ಓದಿ : Save Smartphone Battery: ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿಸುವುದು ಹೇಗೆ …!!

(Vivo V25 Pro launched in India know the price and specification)

RELATED ARTICLES

Most Popular